More

    LIVE| ಭಾರತಕ್ಕೆ ಪಂಚ ಬ್ರಹ್ಮಾಸ್ತ್ರ: ಅಂಬಾಲ ವಾಯುನೆಲೆಗೆ ಬಂದಿಳಿದ ರಫೇಲ್ ರಣಧೀರ!

    ನವದೆಹಲಿ: ಭಾರತ ಮತ್ತು ಫ್ರಾನ್ಸ್​ ನಡುವಿನ ರಕ್ಷಣಾ ಒಪ್ಪಂದದ ಭಾಗವಾಗಿ ದೇಶದ ವಾಯುನೆಲೆಗೆ ಬಲತುಂಬಲು ಮೊದಲ ಹಂತದಲ್ಲಿ 5 ರಫೇಲ್​ ಯುದ್ಧ ವಿಮಾನಗಳು ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಯಶಸ್ವಿಯಾಗಿ ಇಳಿದಿವೆ. ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ವಾಯುಸೇನೆ​ ಸಂಭ್ರಮದಿಂದ ರಫೇಲ್​ ವಿಮಾಗಳನ್ನು ಬರಮಾಡಿಕೊಂಡರು.

    ಐದು ರಫೇಲ್​ ಯುದ್ಧ ವಿಮಾನಗಳಿಗೆ ಎರಡು ಸುಖೋಯ್​ ಯುದ್ಧ ವಿಮಾನಗಳು ಬೆಂಗಾವಲು ನೀಡಿದ್ದವು. ಆಗಸ್ಟ್​ 15ರ ಬಳಿಕ ರಫೇಲ್​ ವಾಯುಸೇನೆಗೆ ಅಧಿಕೃತವಾಗಿ ಸೇರಿಕೊಳ್ಳಲಿವೆ. ರಫೇಲ್ ವಿಮಾನವೂ​ ಚೀನಾದ ಜೆ-20 ಯುದ್ಧ ವಿಮಾನಗಳಿಗಿಂತ ಬಲಿಷ್ಠವಾಗಿದೆ.

    ಸೋಮವಾರ ದಕ್ಷಿಣ ಫ್ರಾನ್ಸ್​ನ ಬಾರ್ಬಡೋಕ್ಸ್​ನಲ್ಲಿರುವ ಮೇರಿಗ್ನಾಕ್​ ವಾಯುನೆಲೆಯಿಂದ ಟೇಕಾಫ್​ ಆದ ಐದು ರಫೇಲ್​ ಯುದ್ಧ ವಿಮಾನಗಳು ಬುಧವಾರ ಮಧ್ಯಾಹ್ನ 3 ಗಂಟೆಗೆ ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಇಳಿದಿವೆ. ಈ ಮೂಲಕ ಎರಡು ದಶಕದ ವಾಯುಸೇನೆಯ ಕನಸು ನನಸಾಯಿತು.

    ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಫ್ರೆಂಚ್​ ಡಸಾಲ್ಟ್​ ಏವಿಯೇಷನ್​ ಒಟ್ಟು 36 ಯುದ್ಧ ವಿಮಾನಗಳನ್ನು ಭಾರತಕ್ಕೆ ಪೂರೈಸಲಿದೆ. ಮೊದಲ ಕಂತಿನಲ್ಲಿ ಐದು ಯುದ್ಧವಿಮಾನಗಳನ್ನು ಹಸ್ತಾಂತರಿಸಿದೆ.

    ಈಗಾಗಲೇ ಒಟ್ಟು ಹತ್ತು ಯುದ್ಧ ವಿಮಾನಗಳ ಹಸ್ತಾಂತರ ಕಾರ್ಯಕ್ರಮ ಪೂರ್ಣಗೊಂಡಿದ್ದು, ಐದು ಯುದ್ಧ ವಿಮಾನಗಳು ತರಬೇತಿ ಉದ್ದೇಶಗಳಿಗಾಗಿ ಫ್ರಾನ್ಸ್​ನಲ್ಲಿಯೇ ಇರಲಿವೆ. 2021ರ ಕೊನೆಗೆ ಎಲ್ಲ 36 ಯುದ್ಧ ವಿಮಾನಗಳನ್ನು ಹಸ್ತಾಂತರಿಸಲಾಗುವುದು ಎಂದು ಡಸಾಲ್ಟ್​ ತಿಳಿಸಿದೆ.

    ಏನಿದು ರಫೇಲ್ ಡೀಲ್?

    2007ರಲ್ಲಿ ಯುಪಿಎ ಸರ್ಕಾರ ವಾಯುಪಡೆಗಾಗಿ 126 ವಿಮಾನಗಳ ಖರೀದಿಗೆ ಅನುಮತಿ ನೀಡಿತ್ತು. ಬಿಡ್ಡಿಂಗ್ ಪ್ರಕ್ರಿಯೆಯೂ ಆರಂಭವಾಗಿತ್ತು. ಫ್ರಾನ್ಸ್​ನ ಡಸಲ್ಟ್ ಏವಿಯೇಷನ್ ಕಂಪನಿ ಕಡಿಮೆ ಮೊತ್ತ ಬಿಡ್ ಮಾಡುವ ಮೂಲಕ ಒಪ್ಪಂದ ತನ್ನದಾಗಿಸಿಕೊಂಡಿತ್ತು. ಬಳಿಕ ರಫೆಲ್ ಯುದ್ಧವಿಮಾನದ ತಾಂತ್ರಿಕ ಪರೀಕ್ಷೆ, ಪರಿಶೀಲನೆಯನ್ನು ಭಾರತಿಯ ವಾಯುಪಡೆ ಕೈಗೊಂಡಿತ್ತು. 2011ರವರೆಗೂ ಈ ಪ್ರಕ್ರಿಯೆ ನಡೆಯಿತು. ರಫೆಲ್ ವಿಮಾನ ಭಾರತೀಯ ವಾಯು ಪಡೆ ಸೇರಲು ಅರ್ಹ ಎಂದು 2012ರಲ್ಲಿ ಘೋಷಿಸಲಾಯಿತು. ಬಳಿಕ ವಿಮಾನ ಕಂಪನಿ ಜತೆ ಕೇಂದ್ರ ಸರ್ಕಾರ ಮಾತುಕತೆ ಆರಂಭಿಸಿತು. ಹಲವು ತಾಂತ್ರಿಕ ಕಾರಣಗಳಿಂದಾಗಿ 2014ರವರೆಗೂ ಮಾತುಕತೆ ಮುಂದುವರಿಯಿತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 2015ರಲ್ಲಿ ಫ್ರಾನ್ಸ್ ಗೆ ಭೇಟಿ ನೀಡಿ, ರಫೆಲ್ ಯುದ್ಧವಿಮಾನ ಕುರಿತು ಹೊಸ ಒಪ್ಪಂದ ಮಾಡಿಕೊಂಡರು. ಹಾರಾಟಕ್ಕೆ ಸಿದ್ಧವಾಗಿರುವ 36 ವಿಮಾನಗಳನ್ನು ಭಾರತಕ್ಕೆ ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಯಿತು.

    ಫ್ರಾನ್ಸ್‌ನಿಂದ ರಫೇಲ್‌ ವಿಮಾನದಲ್ಲಿ ಬರಲಿದ್ದಾರೆ ಕರುನಾಡ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts