ಬೆಂಗಳೂರು: ನಟಿ ರಚಿತಾ ರಾಮ್ ಮತ್ತು ಮೋಹಕ ತಾರೆ ನಟಿ ರಮ್ಯಾ ನಡುವೆ ಇರುವ ಉತ್ತಮ ಸ್ನೇಹದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸಿನಿಮಾಗಳಲ್ಲಿ ನಟಿಸುವ ಮೊದಲಿನಿಂದಲೂ ರಚಿತಾ ರಾಮ್ ಅವರಿಗೆ ರಮ್ಯಾ ಅಂದರೆ ತುಂಬಾನೆ ಇಷ್ಟ. ಇಂದಿಗೂ ಸ್ಯಾಂಡಲ್ವುಡ್ನಲ್ಲಿ ರಮ್ಯಾ ಅವರು ಲಕ್ಕಿ ಚಾರ್ಮ್ ಎಂದೇ ಫೇಮಸ್. ಅವರಿಗೆ ಇರುವ ಬೇಡಿಕೆ ಮತ್ಯಾರಿಗೂ ಇಲ್ಲ ಎಂದೇ ಹೇಳಬೇಕು. ರಮ್ಯಾ ಅವರ ನಂತರ ರಚಿತಾ ಅವರಿಗೆ ಮಾತ್ರ ಆ ಸ್ಥಾನವನ್ನು ತುಂಬಲು ಸಾಧ್ಯ ಎಂಬ ಮಾತಿದೆ. ಹೀಗಿದ್ದರೂ, ರಚಿತಾ ಮಾತ್ರ ಮೋಹಕ ತಾರೆಗೆ ಮತ್ತೆ ಸಿನಿಮಾಗಳಿಗೆ ಮರಳಲು ವಿನಂತಿಸಿದ್ದಾರೆ. ಹೌದು. ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಬಹಳಷ್ಟು ಬ್ಯೂಸಿ. ಸಿನಿಮಾಗಳ ಮೇಲೆ ಸಿನಿಮಾಗಳ ಆಫರ್ಗಳನ್ನು ಪಡೆಯುತ್ತಿದ್ದು, ತೆಲುಗಿಗೂ ಜಂಪ್ ಆಗಿದ್ದು, ಯಾರ ಕೈಗೆ ಸಿಗದಷ್ಟು ಬ್ಯೂಸಿಯಾಗಿದ್ದಾರೆ ರಚ್ಚು. ಹೀಗಾಗಿ, ನಟಿ ರಮ್ಯಾ ಸ್ಥಾನವನ್ನು ರಚಿತಾ ಅವರು ತುಂಬುತ್ತಿದ್ದಾರೆ ಎಂಬ ಮಾತು ನಿಜವಾಗಿವೆ.
ಇನ್ನು, ರಚಿತಾ ಅವರ ”ಲವ್ ಯೂ ರಚ್ಚು” ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ರಚಿತಾ ರಾಮ್ ಮೋಹಕ ತಾರೆಯ ಬಗ್ಗೆ ಭಾವುಕರಾಗಿ ಮಾತಾಡಿದ್ದರು. ”ಲವ್ ಯೂ ರಚ್ಚು” ಸಿನಿಮಾದ ಟೈಟಲ್ ಮೊದಲು ”ಲವ್ ಯೂ ರಮ್ಯಾ” ಎಂದು ಇಡಬೇಕಿತ್ತಂತೆ ಚಿತ್ರತಂಡ. ಅದರ ಬಗ್ಗೆ ರಚಿತಾ ಅವರನ್ನು ಕೇಳಿದಾಗ, ”ಅಯ್ಯೋ, ರಮ್ಯಾ ಅವರ ಹೆಸರಿಟ್ಟರೂ, ನಾನು ತುಂಬಾ ಖುಷಿಯಿಂದ ನಟಿಸುತ್ತಿದ್ದೆ. ಅದಕ್ಕಿಂತ ಭಾಗ್ಯವೇ? ಚಿತ್ರದಲ್ಲಿ ನನ್ನ ಹೆಸರು ರಚ್ಚು ಬದಲು ರಮ್ಯಾ ಆಗುತ್ತಿತು. ಅಷ್ಟೇ. ನಾನು ಅಂದು ಮತ್ತು ಇಂದು ರಮ್ಯಾ ಅವರ ದೊಡ್ಡ ಅಭಿಮಾನಿ” ಎಂದು ಉತ್ತರಿಸಿದರು ರಚಿತಾ. ಇಷ್ಟಕ್ಕೇ ಮುಗಿಯದ ಮಾತು, ರಚಿತಾ ಅವರು ರಮ್ಯಾಗೆ ಒಂದು ಬೇಡಿಕೆ ಇಟ್ಟಿದ್ದರು.
Contents
ಬೆಂಗಳೂರು: ನಟಿ ರಚಿತಾ ರಾಮ್ ಮತ್ತು ಮೋಹಕ ತಾರೆ ನಟಿ ರಮ್ಯಾ ನಡುವೆ ಇರುವ ಉತ್ತಮ ಸ್ನೇಹದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸಿನಿಮಾಗಳಲ್ಲಿ ನಟಿಸುವ ಮೊದಲಿನಿಂದಲೂ ರಚಿತಾ ರಾಮ್ ಅವರಿಗೆ ರಮ್ಯಾ ಅಂದರೆ ತುಂಬಾನೆ ಇಷ್ಟ. ಇಂದಿಗೂ ಸ್ಯಾಂಡಲ್ವುಡ್ನಲ್ಲಿ ರಮ್ಯಾ ಅವರು ಲಕ್ಕಿ ಚಾರ್ಮ್ ಎಂದೇ ಫೇಮಸ್. ಅವರಿಗೆ ಇರುವ ಬೇಡಿಕೆ ಮತ್ಯಾರಿಗೂ ಇಲ್ಲ ಎಂದೇ ಹೇಳಬೇಕು. ರಮ್ಯಾ ಅವರ ನಂತರ ರಚಿತಾ ಅವರಿಗೆ ಮಾತ್ರ ಆ ಸ್ಥಾನವನ್ನು ತುಂಬಲು ಸಾಧ್ಯ ಎಂಬ ಮಾತಿದೆ. ಹೀಗಿದ್ದರೂ, ರಚಿತಾ ಮಾತ್ರ ಮೋಹಕ ತಾರೆಗೆ ಮತ್ತೆ ಸಿನಿಮಾಗಳಿಗೆ ಮರಳಲು ವಿನಂತಿಸಿದ್ದಾರೆ. ಹೌದು. ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಬಹಳಷ್ಟು ಬ್ಯೂಸಿ. ಸಿನಿಮಾಗಳ ಮೇಲೆ ಸಿನಿಮಾಗಳ ಆಫರ್ಗಳನ್ನು ಪಡೆಯುತ್ತಿದ್ದು, ತೆಲುಗಿಗೂ ಜಂಪ್ ಆಗಿದ್ದು, ಯಾರ ಕೈಗೆ ಸಿಗದಷ್ಟು ಬ್ಯೂಸಿಯಾಗಿದ್ದಾರೆ ರಚ್ಚು. ಹೀಗಾಗಿ, ನಟಿ ರಮ್ಯಾ ಸ್ಥಾನವನ್ನು ರಚಿತಾ ಅವರು ತುಂಬುತ್ತಿದ್ದಾರೆ ಎಂಬ ಮಾತು ನಿಜವಾಗಿವೆ.ಇನ್ನು, ರಚಿತಾ ಅವರ ”ಲವ್ ಯೂ ರಚ್ಚು” ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ರಚಿತಾ ರಾಮ್ ಮೋಹಕ ತಾರೆಯ ಬಗ್ಗೆ ಭಾವುಕರಾಗಿ ಮಾತಾಡಿದ್ದರು. ”ಲವ್ ಯೂ ರಚ್ಚು” ಸಿನಿಮಾದ ಟೈಟಲ್ ಮೊದಲು ”ಲವ್ ಯೂ ರಮ್ಯಾ” ಎಂದು ಇಡಬೇಕಿತ್ತಂತೆ ಚಿತ್ರತಂಡ. ಅದರ ಬಗ್ಗೆ ರಚಿತಾ ಅವರನ್ನು ಕೇಳಿದಾಗ, ”ಅಯ್ಯೋ, ರಮ್ಯಾ ಅವರ ಹೆಸರಿಟ್ಟರೂ, ನಾನು ತುಂಬಾ ಖುಷಿಯಿಂದ ನಟಿಸುತ್ತಿದ್ದೆ. ಅದಕ್ಕಿಂತ ಭಾಗ್ಯವೇ? ಚಿತ್ರದಲ್ಲಿ ನನ್ನ ಹೆಸರು ರಚ್ಚು ಬದಲು ರಮ್ಯಾ ಆಗುತ್ತಿತು. ಅಷ್ಟೇ. ನಾನು ಅಂದು ಮತ್ತು ಇಂದು ರಮ್ಯಾ ಅವರ ದೊಡ್ಡ ಅಭಿಮಾನಿ” ಎಂದು ಉತ್ತರಿಸಿದರು ರಚಿತಾ. ಇಷ್ಟಕ್ಕೇ ಮುಗಿಯದ ಮಾತು, ರಚಿತಾ ಅವರು ರಮ್ಯಾಗೆ ಒಂದು ಬೇಡಿಕೆ ಇಟ್ಟಿದ್ದರು.ಖಾಸಗಿ ಸಂದರ್ಶನವೊಂದರಲ್ಲಿ ಮಾತಾಡಿದ ರಚ್ಚು, ”ನಾನು ರಮ್ಯಾಗೆ ದೀವಾ ಎಂದು ಕರೆಯುತ್ತೇನೆ. ನಾನು ಬಹಳಷ್ಟು ಬಾರಿ ಮತ್ತೆ ಸಿನಿಮಾಗಳಿಗೆ ಮರಳಿ ನಟಿಸಿ ಪ್ಲೀಸ್… ಎಂದು ದೀವಾಗೆ ವಿನಂತಿಸಿದ್ದೇನೆ. ಆದರೆ, ಅವರು ಅದಕ್ಕೆ ಏನೂ ಮಾತಾಡದೆ ನಕ್ಕು ಸುಮ್ಮನಾಗಿ ಬಿಡುತ್ತಾರೆ. ದೀವಾ ಮತ್ತೆ ಸಿನಿಮಾಗಳಲ್ಲಿ ನಟಿಸಿದರೆ ಅದು ನಿಜಕ್ಕೂ ಖುಷಿಯ ವಿಚಾರ. ಐ ಲವ್ ಯೂ ದೀವಾ (ರಮ್ಯಾ).” ಎಂದು ಹೇಳಿದ್ದಾರೆ ರಚ್ಚು. ಇತ್ತೀಚೆಗೆ, ಅಕ್ಟೋಬರ್ 3 ರಂದು ರಚ್ಚು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆಗ, ರಮ್ಯಾ ಅವರು ರಚ್ಚುಗೆ ಒಂದೊಳ್ಳೆ ಸೀರೆ ಮತ್ತು ಹೂವಿನ ಗುಚ್ಛಯನ್ನು ಕಳುಹಿಸಿದರು. ಆ ಉಡುಗೊರೆಯ ಬಗ್ಗೆಯೂ ಮಾತಾಡಿದ ರಚಿತಾ ಜೀವನದಲ್ಲಿ ಯಾವತ್ತಿಗೂ ಆ ಉಡುಗೊರೆಯನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಆದೆಷ್ಟೋ ಮಂದಿ ಮೋಹಕ ತಾರೆಯ ಅಭಿನಯವನ್ನು ಮತ್ತೆ ತೆರೆ ಮೇಲೆ ನೋಡಲು ಕಾತುರರಾಗಿದ್ದರೆ, ರಚ್ಚು ಅಂತೂ ಆ ಕ್ಷಣಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎನ್ನಬಹುದು.
ಖಾಸಗಿ ಸಂದರ್ಶನವೊಂದರಲ್ಲಿ ಮಾತಾಡಿದ ರಚ್ಚು, ”ನಾನು ರಮ್ಯಾಗೆ ದೀವಾ ಎಂದು ಕರೆಯುತ್ತೇನೆ. ನಾನು ಬಹಳಷ್ಟು ಬಾರಿ ಮತ್ತೆ ಸಿನಿಮಾಗಳಿಗೆ ಮರಳಿ ನಟಿಸಿ ಪ್ಲೀಸ್… ಎಂದು ದೀವಾಗೆ ವಿನಂತಿಸಿದ್ದೇನೆ. ಆದರೆ, ಅವರು ಅದಕ್ಕೆ ಏನೂ ಮಾತಾಡದೆ ನಕ್ಕು ಸುಮ್ಮನಾಗಿ ಬಿಡುತ್ತಾರೆ. ದೀವಾ ಮತ್ತೆ ಸಿನಿಮಾಗಳಲ್ಲಿ ನಟಿಸಿದರೆ ಅದು ನಿಜಕ್ಕೂ ಖುಷಿಯ ವಿಚಾರ. ಐ ಲವ್ ಯೂ ದೀವಾ (ರಮ್ಯಾ).” ಎಂದು ಹೇಳಿದ್ದಾರೆ ರಚ್ಚು. ಇತ್ತೀಚೆಗೆ, ಅಕ್ಟೋಬರ್ 3 ರಂದು ರಚ್ಚು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆಗ, ರಮ್ಯಾ ಅವರು ರಚ್ಚುಗೆ ಒಂದೊಳ್ಳೆ ಸೀರೆ ಮತ್ತು ಹೂವಿನ ಗುಚ್ಛಯನ್ನು ಕಳುಹಿಸಿದರು. ಆ ಉಡುಗೊರೆಯ ಬಗ್ಗೆಯೂ ಮಾತಾಡಿದ ರಚಿತಾ ಜೀವನದಲ್ಲಿ ಯಾವತ್ತಿಗೂ ಆ ಉಡುಗೊರೆಯನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಆದೆಷ್ಟೋ ಮಂದಿ ಮೋಹಕ ತಾರೆಯ ಅಭಿನಯವನ್ನು ಮತ್ತೆ ತೆರೆ ಮೇಲೆ ನೋಡಲು ಕಾತುರರಾಗಿದ್ದರೆ, ರಚ್ಚು ಅಂತೂ ಆ ಕ್ಷಣಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎನ್ನಬಹುದು.
2022ರಲ್ಲಿ ವೈರಿಗಳು, ಎಫ್ಐಆರ್ಗಳು ಕಡಿಮೆಯಾಗಲಿ ಅಂತ ತಿರುಪತಿಗೆ ಹೋದ ಕಂಗನಾ! ಫೋಟೋ ವೈರಲ್…
12,500 ಅಡಿ ಎತ್ತರದಲ್ಲಿ ಕಂಗೊಳಿಸಿದ ‘ಅಪ್ಪು’! ಅಭಿಮಾನಿಗಳ ವಿಶೇಷ ನಮನ…