ನಟಿ ಶ್ರುತಿ ಹರಿಹರನ್ #MeToo ಪ್ರಕರಣದ ಬಳಿಕ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದರು. ಈಗ ಜಾನಕಿ ಎಂಬ ಮಗು ಆದ ಬಳಿಕ ಮತ್ತೆ ಸಿನಿಮಾ ರಂಗದಲ್ಲಿ ಶ್ರುತಿ ಹರಿಹರನ್ ಸಕ್ರಿಯ ಆಗುತ್ತಿದ್ದಾರೆ. ಅದರೆ, ಈಗ ಸಿನಿಮಾ ವಿಚಾರಕ್ಕೆ ಅಲ್ಲದೇ ಅಥವಾ #MeToo ವಿಚಾರಕ್ಕೂ ಅಲ್ಲದೇ ನಟಿ ಶ್ರುತಿ ಹರಿಹರನ್ ಬೇರೊಂದು ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ಅಂದಹಾಗೆ, ನಟಿ ಶ್ರುತಿ ಹರಿಹರನ್ ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸದೊಂದು ಪೋಸ್ಟ್ ಹಾಕಿದ್ದಾರೆ.
ಆ ಪೋಸ್ಟ್‌ನಲ್ಲಿ ನಟಿ ಶ್ರುತಿ ಹರಿಹರನ್ ಅವರು ತಮ್ಮ ಅಕೌಂಟ್ ಹ್ಯಾಕ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಹೌದು, ಶ್ರುತಿ ಅವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಸ್ಟೇಟಸ್ ಸ್ಟೋರಿಗಳಲ್ಲಿ ಮಾಹಿತಿ ಕೊಟ್ಟು ತಮ್ಮ ಅನುಯಾಯಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಯಾವುದೋ ಅಪರಿಚಿತ ಲಿಂಕ್ ಒತ್ತಿದ ಕಾರಣಕ್ಕೆ ಅವರ ಅಕೌಂಟ್ ಹ್ಯಾಕ್ ಆಗಿದೆಯಂತೆ. ಅದೇ ರೀತಿ ಅವರ ಅಕೌಂಟ್‌ನಿಂದ ಬೇರೆಯವರಿಗೆ ಅದೇ ಲಿಂಕ್ ಮೆಸೇಜ್ ರೂಪದಲ್ಲಿ ಹೋಗುತ್ತಿದೆಯಂತೆ.
ಹಾಗಾಗಿ, ತಮ್ಮ ಅನುಯಾಯಿಗಳಿಗೆ ಎಚ್ಚರಿಕೆ ವಹಿಸಿ ಎಂದು ಹೇಳಿದ್ದಾರೆ ನಟಿ. ಇನ್ನು, ನಟಿ ಶ್ರುತಿ ಹರಿಹರನ್ ಈ ರೀತಿ ಸಂದೇಶ ಕೊಟ್ಟ ಕೂಡಲೇ, ನಟಿ ರಮ್ಯಾ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು ಶ್ರುತಿ ಅವರು ಹೇಳುತ್ತಿರುವುದು ಸತ್ಯ ಎಂದಿದ್ದಾರೆ. ”ನನ್ನ ಖಾತೆಯನ್ನು ಕೂಡ ಹ್ಯಾಕ್ ಮಾಡಲು ಪ್ರಯತ್ನಿಸಲಾಗಿದೆ. ಅದರೆ, ನನ್ನ ಖಾತೆಗೆ ನನಗೆ ಇನ್ನೂ ಕೂಡ ಆ್ಯಕ್ಸಸ್ ಇದೆ. ಎರಡು ಬಾರಿ ವೇರಿಫಿಕೇಷನ್ ಆಗಿದೆ”, ಎಂದು ರಮ್ಯಾ ಹೇಳಿಕೊಂಡಿದ್ದಾರೆ.
Contents
ನಟಿ ಶ್ರುತಿ ಹರಿಹರನ್ #MeToo ಪ್ರಕರಣದ ಬಳಿಕ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದರು. ಈಗ ಜಾನಕಿ ಎಂಬ ಮಗು ಆದ ಬಳಿಕ ಮತ್ತೆ ಸಿನಿಮಾ ರಂಗದಲ್ಲಿ ಶ್ರುತಿ ಹರಿಹರನ್ ಸಕ್ರಿಯ ಆಗುತ್ತಿದ್ದಾರೆ. ಅದರೆ, ಈಗ ಸಿನಿಮಾ ವಿಚಾರಕ್ಕೆ ಅಲ್ಲದೇ ಅಥವಾ #MeToo ವಿಚಾರಕ್ಕೂ ಅಲ್ಲದೇ ನಟಿ ಶ್ರುತಿ ಹರಿಹರನ್ ಬೇರೊಂದು ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ಅಂದಹಾಗೆ, ನಟಿ ಶ್ರುತಿ ಹರಿಹರನ್ ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸದೊಂದು ಪೋಸ್ಟ್ ಹಾಕಿದ್ದಾರೆ.ಆ ಪೋಸ್ಟ್‌ನಲ್ಲಿ ನಟಿ ಶ್ರುತಿ ಹರಿಹರನ್ ಅವರು ತಮ್ಮ ಅಕೌಂಟ್ ಹ್ಯಾಕ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಹೌದು, ಶ್ರುತಿ ಅವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಸ್ಟೇಟಸ್ ಸ್ಟೋರಿಗಳಲ್ಲಿ ಮಾಹಿತಿ ಕೊಟ್ಟು ತಮ್ಮ ಅನುಯಾಯಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಯಾವುದೋ ಅಪರಿಚಿತ ಲಿಂಕ್ ಒತ್ತಿದ ಕಾರಣಕ್ಕೆ ಅವರ ಅಕೌಂಟ್ ಹ್ಯಾಕ್ ಆಗಿದೆಯಂತೆ. ಅದೇ ರೀತಿ ಅವರ ಅಕೌಂಟ್‌ನಿಂದ ಬೇರೆಯವರಿಗೆ ಅದೇ ಲಿಂಕ್ ಮೆಸೇಜ್ ರೂಪದಲ್ಲಿ ಹೋಗುತ್ತಿದೆಯಂತೆ.ಹಾಗಾಗಿ, ತಮ್ಮ ಅನುಯಾಯಿಗಳಿಗೆ ಎಚ್ಚರಿಕೆ ವಹಿಸಿ ಎಂದು ಹೇಳಿದ್ದಾರೆ ನಟಿ. ಇನ್ನು, ನಟಿ ಶ್ರುತಿ ಹರಿಹರನ್ ಈ ರೀತಿ ಸಂದೇಶ ಕೊಟ್ಟ ಕೂಡಲೇ, ನಟಿ ರಮ್ಯಾ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು ಶ್ರುತಿ ಅವರು ಹೇಳುತ್ತಿರುವುದು ಸತ್ಯ ಎಂದಿದ್ದಾರೆ. ”ನನ್ನ ಖಾತೆಯನ್ನು ಕೂಡ ಹ್ಯಾಕ್ ಮಾಡಲು ಪ್ರಯತ್ನಿಸಲಾಗಿದೆ. ಅದರೆ, ನನ್ನ ಖಾತೆಗೆ ನನಗೆ ಇನ್ನೂ ಕೂಡ ಆ್ಯಕ್ಸಸ್ ಇದೆ. ಎರಡು ಬಾರಿ ವೇರಿಫಿಕೇಷನ್ ಆಗಿದೆ”, ಎಂದು ರಮ್ಯಾ ಹೇಳಿಕೊಂಡಿದ್ದಾರೆ.
‘ಅಖಂಡ’ ಚಿತ್ರದ ನಿರ್ದೇಶಕನ ಜತೆಗೆ ಪ್ಯಾನ್ ಇಂಡಿಯಾ ಸಿನಿಮಾಗೆ ನಟ ರಾಮ್ ಪೋತಿನೇನಿ ರೆಡಿ!
ಕುಡಿದ ಮತ್ತಿನಲ್ಲಿ ಮಹಿಳಾ ಪೊಲೀಸ್ ಕೊರಳು ಪಟ್ಟಿ ಹಿಡಿದ ನಟಿ ಕಾವ್ಯಾ ತಾಪರ್ ಬಂಧನ!