More

    ನನ್ನ ಪತ್ನಿ ಕೈಗೆ ಸಿಕ್ಕಿದ್ದರಲ್ಲಿ ಬಾರಿಸ್ತಾಳೆ.. ಕಾಪಾಡಿ ಸರ್​: ವಿಡಿಯೋ ಸಮೇತ ಕೋರ್ಟ್​ ಮೆಟ್ಟಿಲೇರಿದ ಪ್ರಾಂಶುಪಾಲ

    ಜೈಪುರ: ಪ್ರತಿನಿತ್ಯವು ನನ್ನ ಹಂಡತಿ ನನ್ನನ್ನು ಹಿಗ್ಗಾಮುಗ್ಗಾ ಥಳಿಸುತ್ತಾಳೆ. ಈ ಸಂಕಷ್ಟದಿಂದ ನನ್ನನ್ನು ಪಾರು ಮಾಡಿ ಎಂದು ಶಾಲಾ ಪ್ರಾಂಶುಪಾಲರೊಬ್ಬರು ನ್ಯಾಯಾಲಯದ ಮೊರೆ ಹೋಗಿರುವ ಘಟನೆ ರಾಜಸ್ಥಾನದ ಅಲ್ವಾರ್​ನಲ್ಲಿ ನಡೆದಿದೆ.

    ಸಂತ್ರಸ್ತ ಪ್ರಾಂಶುಪಾಲರ ಹೆಸರು ಅಜಿತ್​ ಯಾದವ್​. ತನ್ನ ಹೆಂಡತಿ ದೌರ್ಜನ್ಯ ಎಸಗುವ ಸಿಸಿಟಿವಿ ವಿಡಿಯೋ ಸಮೇತ ದೂರು ದಾಖಲಿಸಿದ್ದು, ರಕ್ಷಣೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಜಿತ್​ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ರಕ್ಷಣೆ ಒದಗಿಸುವಂತೆ ಆದೇಶಿಸಿದೆ.

    ಅಂದಹಾಗೆ ಅಜಿತ್​ ಹರಿಯಾಣದ ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮದುವೆಯಾಗಿ 7 ವರ್ಷಗಳಾಗಿದ್ದು, ದಂಪತಿಗೆ 6 ವರ್ಷದ ಒಂದು ಗಂಡು ಮಗುವಿದೆ. ಸದ್ಯ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

    ಕಾರಣವಿಲ್ಲದೆ ನನ್ನ ಮೇಲೆ ಹಲ್ಲೆ ಮಾಡಿ, ಬಟ್ಟೆಯನ್ನೆಲ್ಲಾ ಚಿಂದಿ ಮಾಡಿದ್ದಾಳೆ. ದಿನಬೆಳಗಾದರೂ ನನ್ನನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುತ್ತಾಳೆ. ಕ್ರಿಕೆಟ್​ ಬ್ಯಾಟ್​, ಐರನ್​ ಪ್ಯಾನ್​ ಮತ್ತು ಇತರೆ ಪಾತ್ರೆಗಳಿಂದ ಬಾರಿಸುತ್ತಿರುತ್ತಾಳೆ. ಏಕೆ ಹೊಡೆಯುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದರೆ, ಅದಕ್ಕೆ ಉತ್ತರವಿಲ್ಲ. ಆಕೆಯ ಕಾಟ ತಡೆಯಲು ಆಗುತ್ತಿಲ್ಲ ಎಂದು ದೂರಿನಲ್ಲಿ ಅಜಿತ್​ ಉಲ್ಲೇಖಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ರಾಜಸ್ಥಾನ ಪೊಲೀಸರು ತನಿಖೆ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ರಾಷ್ಟ್ರಗೀತೆ ಆರಂಭವಾದ್ರೂ ಹಸ್ತಲಾಘವ ಮಾಡುವುದರಲ್ಲಿ ರಾಜ್ಯಪಾಲರು ಬಿಜಿ: ವಿಡಿಯೋ ವೈರಲ್​

    ಆರ್‌ಸಿಬಿ ಪರ ಆಡಲು ಮದುವೆ ಮುಂದೂಡಿದ್ದ ರಜತ್ ಪಾಟಿದಾರ್!

    ಡಿಜಿಟಲ್ ಸಾಲದ ಆಪತ್ತು: ಲೋನ್ ಕೊಟ್ಟು ಜೀವ ಹಿಂಡುವ ಅನಧಿಕೃತ ಆ್ಯಪ್​​ಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts