More

    ಕ್ಷಮೆಯಾಚಿಸಿದ ನಟ ಸಿದ್ಧಾರ್ಥ್​ಗೆ ಬುದ್ಧಿ ಮಾತು ಹೇಳಿದ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​

    ನವದೆಹಲಿ: ಆಕ್ಷೇಪಾರ್ಹ ಟ್ವೀಟ್​ಗೆ ತೀವ್ರ ಟೀಕೆ ವ್ಯಕ್ತವಾದ ಬಳಿಕ ಕ್ಷಮೆಕೋರಿರುವ ನಟ ಸಿದ್ಧಾರ್ಥ್​ಗೆ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ಬುದ್ಧಿ ಮಾತೊಂದನ್ನು ಹೇಳುವ ಮೂಲಕ ಕ್ಷಮಿಸಿದ್ದಾರೆ.

    ಈ ರೀತಿ ಎಂದೂ ಮಹಿಳೆಯರನ್ನು ಟಾರ್ಗೆಟ್​ ಮಾಡಬೇಡಿ. ಇಟ್ಸ್​ ಓಕೆ..ನಿನ್ನ ಟ್ವೀಟ್​ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ನನ್ನ ಜಾಗದಲ್ಲಿ ನಾನು ಸುಖವಾಗಿದ್ದೇನೆ. ದೇವರು ನಿಮಗೆ ಒಳ್ಳೆಯದು ಮಾಡಲಿ ಎನ್ನುವ ಮೂಲಕ ಸಿದ್ಧಾರ್ಥ್​ ಕ್ಷಮೆಯಾಚನೆ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದಾರೆ.

    ಆಗಿದ್ದೇನು?
    ಪಂಜಾಬ್​ ಭೇಟಿ ವೇಳೆ ಪ್ರಧಾನಿ ಮೋದಿ ಭದ್ರತಾ ವೈಫಲ್ಯದ ಬಗ್ಗೆ ಬಿಜೆಪಿ ನಾಯಕಿಯೂ ಆಗಿರುವ ಸೈನಾ ನೆಹ್ವಾಲ್​ ಟ್ವೀಟ್​ ಮಾಡಿದ್ದರು. ಯಾವುದೇ ರಾಷ್ಟ್ರವು ತನ್ನ ಸ್ವಂತ ಪ್ರಧಾನಿಯ ಭದ್ರತೆಗೆ ರಾಜಿ ಮಾಡಿಕೊಂಡರೆ ತಾನು ಸುರಕ್ಷಿತ ಎಂದು ಹೇಳಿಕೊಳ್ಳುವುದಿಲ್ಲ. ಪ್ರಧಾನಿ ಮೋದಿಯವರ ಮೇಲೆ ಅರಾಜಕತಾವಾದಿಗಳು ನಡೆಸಿದ ಹೇಡಿತನದ ದಾಳಿಯನ್ನು ನಾನು ಪ್ರಬಲ ಪದಗಳಲ್ಲಿ ಖಂಡಿಸುತ್ತೇನೆಂದು ಸೈನಾ ಹೇಳಿದ್ದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿದ್ಧಾರ್ಥ, ಸೂಕ್ಷ್ಮ ಕಾಕ್​ ಚಾಂಪಿಯನ್… ದೇವರಿಗೆ ಧನ್ಯವಾದಗಳು ನಾವು ಭಾರತದ ರಕ್ಷಕರನ್ನು ಹೊಂದಿದ್ದೇವೆ. ನಿಮಗೆ ನಾಚಿಕೆಯಾಗಬೇಕು #ರಿಹಾನ್ನಾ ಎಂದು ಟ್ವೀಟ್​ ಮಾಡಿದ್ದರು. ಅಲ್ಲದೆ, ಇನ್ನೊಂದು ಟ್ವೀಟ್​ ಮಾಡಿ, ಹುಂಜ ಮತ್ತು ಎತ್ತು ಅವು ಉಲ್ಲೇಖ ಮಾತ್ರ. ಅಗೌರವಯುತವಾದ ಯಾವುದನ್ನೂ ಉದ್ದೇಶಿಸಿಲ್ಲ, ಹೇಳಿಲ್ಲ ಅಥವಾ ಸೂಚಿಸಲಾಗಿಲ್ಲ ಎಂದು ಸಿದ್ಧಾರ್ಥ್​ ಹೇಳಿದ್ದರು.

    ಇದಾದ ಬಳಿಕ ಸಿದ್ಧಾರ್ಥ್ ಪೋಸ್ಟ್‌ಗೆ ನೆಟಿಜನ್ ಆಕ್ರೋಶ ಹೊರಹಾಕಿದ್ದರು. ಅನೇಕ ಗಣ್ಯರು ಕೂಡ ಖಂಡಿಸಿದ್ದರು. ಮಹಿಳೆಯರ ಮೇಲೆ ಲೈಂಗಿಕ ಕಿರುಕುಳವನ್ನು ಉತ್ತೇಜಿಸುವ ರೀತಿಯ ಹಾಡಿನ ಭಾಗವಾಗಲು ಒಪ್ಪಿಕೊಂಡ ನಟನಿಂದ ಇನ್ನೇನು ನಿರೀಕ್ಷಿಸಬಹುದು? ಎಂದು ಟೀಕಿಸಿದ್ದರು.

    ಕ್ಷಮೆಯಾಚನೆ
    ಸಾಕಷ್ಟು ಟೀಕೆಯ ಬಳಿಕ ಟ್ವೀಟ್​ ಮೂಲಕ ಸಿದ್ಧಾರ್ಥ್​, ಸೈನಾ ನೆಹ್ವಾಲ್​ ಬಳಿ ಕ್ಷಮೆಯಾಚಿಸಿದ್ದಾರೆ. ಆತ್ಮೀಯ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್​ಗೆ ಪ್ರತಿಕ್ರಿಯೆಯಾಗಿ ನಾನು ಮಾಡಿದ ಕೆಟ್ಟ ಜೋಕ್ಸ್​ಗಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ನಾನು ಅನೇಕ ವಿಷಯಗಳಲ್ಲಿ ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರಬಹುದು ಆದರೆ, ನಿಮ್ಮ ಟ್ವೀಟ್ ಓದಿದಾಗ ನನ್ನ ನಿರಾಶೆ ಅಥವಾ ಕೋಪವೂ ಸಹ ನನ್ನ ಧ್ವನಿ ಮತ್ತು ಮಾತುಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ನನ್ನಲ್ಲಿ ಅದಕ್ಕಿಂತ ಹೆಚ್ಚಿನ ಅನುಗ್ರಹವಿದೆ ಎಂದು ನನಗೆ ತಿಳಿದಿದೆ. ಮಹಿಳೆಯರನ್ನು ಅವಮಾನಿಸಬೇಕೆನ್ನುವ ಯಾವುದೇ ದುರುದ್ದೇಶ ಇರಲಿಲ್ಲ ಎಂದಿದ್ದಾರೆ.

    ಆದಾಗ್ಯೂ, ನನ್ನ ಪದದ ಆಟ ಮತ್ತು ಹಾಸ್ಯಕ್ಕೆ ಅನೇಕ ಜನರು ಆರೋಪಿಸಿದಂತೆ ಯಾವುದೇ ದುರುದ್ದೇಶಪೂರಿತ ಉದ್ದೇಶವಿಲ್ಲ ಎಂದು ನಿಮ್ಮಲ್ಲಿ ನಾನು ಒತ್ತಾಯಿಸುತ್ತಿದ್ದೇನೆ. ನಾನು ನಿಷ್ಠಾವಂತ ಸ್ತ್ರೀವಾದಿ ಮಿತ್ರ ಮತ್ತು ನನ್ನ ಟ್ವೀಟ್‌ನಲ್ಲಿ ಯಾವುದೇ ಲಿಂಗ ತಾರತಮ್ಯ ಇರಲಿಲ್ಲ ಮತ್ತು ಖಂಡಿತವಾಗಿಯೂ ಇಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದಿದ್ದಾರೆ.

    ಈ ಪತ್ರವನ್ನು ಸ್ವೀಕರಿಸಿ ವಿವಾದಕ್ಕೆ ತೆರೆ ಎಳೆಯುತ್ತಾರೆ ಎಂಬ ಭರವಸೆ ಇದೆ. ಪ್ರಾಮಾಣಿಕವಾಗಿ ನೀವು ಯಾವಾಗಲೂ ನಮ್ಮ ಚಾಂಪಿಯನ್​ ಎಂದು ಹೇಳುವ ಮೂಲಕ ಸಿದ್ಧಾರ್ಥ್​ ಕ್ಷಮಾಪಣ ಪತ್ರದಲ್ಲಿ ಬರವಣಿಗೆ ಅಂತ್ಯಗೊಳಿಸಿದ್ದಾರೆ. ಇದೀಗ ಸೈನಾ ಕ್ಷಮಿಸಿದ್ದು, ಸಿದ್ಧಾರ್ಥ್​ಗೆ ಬುದ್ಧಿವಾದವನ್ನು ಹೇಳಿದ್ದಾರೆ.

    ಇನ್ನು ಸಿದ್ಧಾರ್ಥ್​ ಟ್ವೀಟ್​ ಬಗ್ಗೆ ಸೈನಾ ಅವರ ತಂದೆ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಮಹಿಳಾ ಆಯೋಗ ಕೂಡ ಸಿದ್ಧಾರ್ಥ್​ ಟ್ವಿಟರ್​ ಬ್ಲಾಕ್​ ಮಾಡುವಂತೆ ಒತ್ತಾಯಿಸಿದೆ. ಹೀಗೆ ಸಾಕಷ್ಟು ಮಂದಿ ಸಿದ್ಧಾರ್ಥ್​ ವಿರುದ್ಧ ಕಿಡಿಕಾರಿದ್ದು, ಇದೆಲ್ಲವನ್ನು ಗಂಭೀರವಾಗಿ ತೆಗೆದುಕೊಂಡ ಸಿದ್ಧಾರ್ಥ್​ ಕ್ಷಮೆ ಕೋರುವ ಮೂಲಕ ವಿವಾದಕ್ಕೆ ತೆರೆಎಳೆಯುವ ಪ್ರಯತ್ನ ಮಾಡಿದ್ದಾರೆ. (ಏಜೆನ್ಸೀಸ್​)

    ಮದುವೆಯ ಬೆನ್ನಲ್ಲೇ ಆಂಬ್ಯುಲೆನ್ಸ್​ನಲ್ಲಿ ಜಾಲಿ ರೈಡ್​ ಹೋದ ನವದಂಪತಿಗೆ ಕಾದಿತ್ತು ಶಾಕ್..!​

    VIDEO| ಬಲವಂತವಾಗಿ ಬಟ್ಟೆ ಸ್ವಚ್ಛ ಮಾಡಿಸಿದಲ್ಲದೆ, ವ್ಯಕ್ತಿಯ ಕಪಾಳಕ್ಕೆ ಬಾರಿಸಿದ ಮಹಿಳಾ ಪೊಲೀಸ್​!

    ವೈವಾಹಿಕ ಜೀವನಕ್ಕೆ ಕಾಲಿಟ್ಟ ರತ್ನನ್​ ಬೆಡಗಿ: ಬೆಂಗಳೂರಿನಲ್ಲಿ ನಡೆಯಿತು ರೆಬಾ ಮೊನಿಕಾ ವಿವಾಹ

    ಪ್ರೀತಿಸಿ ಮದ್ವೆಯಾದ ಸಬ್​ ಇನ್ಸ್​ಪೆಕ್ಟರ್​ ಬಾಳಲ್ಲಿ ದುರಂತ: ಗಂಡನ ಹಿಂದೆಯೇ ಪತ್ನಿಯ ಜೀವನವು ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts