More

    ಇಡೀ ದೆಹಲಿಯನ್ನೇ ಉಸಿರುಗಟ್ಟಿಸಿದ್ದೀರಿ! ರೈತ ಸಂಘಟನೆಗಳ ವಿರುದ್ಧ ಸುಪ್ರೀಂಕೋರ್ಟ್​ ಗರಂ

    ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗಳ ವಿರುದ್ಧ ಗರಂ ಆಗಿರುವ ಸುಪ್ರೀಂಕೋರ್ಟ್​, ಹೆದ್ದಾರಿಗಳನ್ನು ಬ್ಲಾಕ್​ ಮಾಡುವ ಮೂಲಕ ಇಡೀ ದೆಹಲಿಯ ಉಸಿರುಗಟ್ಟಿಸಿದ್ದೀರಿ ಎಂದು ಅಸಮಾಧಾನ ಹೊರಹಾಕಿದೆ.

    ದೆಹಲಿಯ ಹೃದಯಭಾಗದಲ್ಲಿರುವ ಗೊತ್ತುಪಡಿಸಿದ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್​ನಲ್ಲಿ ‘ಸತ್ಯಾಗ್ರಹ’ ನಡೆಸಲು ರೈತರ ಸಂಘಟನೆಯಾದ ಕಿಸಾನ್ ಮಹಾಪಂಚಾಯತ್ ಸುಪ್ರೀಂಕೋರ್ಟ್ ನಿಂದ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಜಂತರ್ ಮಂತರ್‌ನಲ್ಲಿ ಶಾಂತಿಯುತ ಮತ್ತು ಅಹಿಂಸಾತ್ಮಕ ‘ಸತ್ಯಾಗ್ರಹ’ವನ್ನು ಆಯೋಜಿಸಲು ಕನಿಷ್ಠ 200 ರೈತರು ಅಥವಾ ಪ್ರತಿಭಟನಾಕಾರರಿಗೆ ಸ್ಥಳಾವಕಾಶ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ರೈತ ಸಂಘಟನೆ ಉನ್ನತ ನ್ಯಾಯಾಲಯಕ್ಕೆ ಮನವಿ ಮಾಡಿದೆ.

    ರೈತರ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್​, ಈಗಾಗಲೇ ಹೆದ್ದಾರಿಗಳನ್ನು ಬ್ಲಾಕ್​ ಮಾಡಿ ಇಡೀ ದೆಹಲಿಯನ್ನು ಉಸಿರುಗಟ್ಟಿಸಿದ್ದೀರಿ, ಇದೀಗ ನಗರದ ಒಳಗಡೆ ಬರಲು ಬಯಸಿದ್ದೀರಾ ಎಂದು ರೈತ ಸಂಘಟನೆಗಳನ್ನು ಕೋರ್ಟ್​ ಟೀಕಿಸಿತು. ಇಲ್ಲಿ ವಾಸಿಸುವ ನಿವಾಸಿಗಳು ಪ್ರತಿಭಟನೆಯಿಂದ ಸಂತೋವಾಗಿದ್ದಾರೆಯೇ? ಎಂದು ಪ್ರಶ್ನಿಸಿದ ಅಪೇಕ್ಸ್​ ಕೋರ್ಟ್​ ತಕ್ಷಣ ಈ ಕೆಲಸವನ್ನು ನಿಲ್ಲಿಸುವಂತೆ ಆದೇಶಿಸಿತು. ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್​ ಮತ್ತು ಸಿಟಿ ರವಿಕುಮಾರ್​ ನೇತೃತ್ವದ ಸಾಂವಿಧಾನಿಕ ಪೀಠ ರೈತ ಸಂಘಟನೆಗಳಿಗೆ ನಿರ್ದೇಶನ ನೀಡಿದೆ.

    ಹೆದ್ದಾರಿಗಳನ್ನು ಬ್ಲಾಕ್​ ಮಾಡಿದ ಬಳಿಕ ಪ್ರತಿಭಟನೆ ಶಾಂತಿಯುತವಾಗಿದೆ ಎಂದು ಹೇಳುತ್ತೀರಿ. ಎಲ್ಲ ಕಡೆ ಓಡಾಡಲು ನಾಗರಿಕರಿಗೆ ಹಕ್ಕಿದೆ. ಅವರ ಆಸ್ತಿಗಳಿಗೆ ಹಾನಿ ಆಗಿದೆ. ನೀವು ಭದ್ರತೆ ಮೇಲೂ ಪರಿಣಾಮ ಬೀರಿದ್ದೀರ ಮತ್ತು ರಕ್ಷಣಾ ಸಿಬ್ಬಂದಿಯನ್ನು ಸಹ ನೀವು ತಡೆದಿದ್ದೀರ ಎಂದು ನ್ಯಾಯಮೂರ್ತಿ ಖಾನ್ವಿಲ್ಕರ್​ ಅಸಮಾಧಾನ ಹೊರಹಾಕಿದರು.

    ನಾವ್ಯಾರೂ ಹೆದ್ದಾರಿಗಳನ್ನು ಬ್ಲಾಕ್​ ಮಾಡಲಿಲ್ಲ. ಪೊಲೀಸರು ನಮ್ಮನ್ನು ಹೆದ್ದಾರಿಯಲ್ಲೇ ಬಂಧಿಸಿದರು ಎಂದು ರೈತನ ಸಂಘಟನೆಯ ಪರ ವಕೀಲರು ಸುಪ್ರೀಂಕೋರ್ಟ್​ಗೆ ಹೇಳಿದರು. ನಮ್ಮದು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಬಂಧಿಸುವ ಪ್ರತಿಭಟನೆಯ ಭಾಗವಲ್ಲ ಎಂದು ಅಫಿಡವಿಟ್ ಸಲ್ಲಿಸುವಂತೆ ರೈತ ಸಂಘಟನೆಗಳಿಗೆ ನ್ಯಾಯಾಲಯ ಕೇಳಿದೆ.

    ಕಳೆದ ಜುಲೈನಲ್ಲಿ, ಸಂಯುಕ್ತ ಕಿಸಾನ್ ಮೋರ್ಚಾ (SKM) ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ (KMSC) ಎಂಬ ಎರಡು ಗುಂಪುಗಳ ನೇತೃತ್ವದಲ್ಲಿ ರೈತರು ಸಂಸತ್ತಿನ ಮುಂಗಾರು ಅಧಿವೇಶನದ ನಡುವೆ ಜಂತರ್ ಮಂತರ್​ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಅಲ್ಲದೆ, ಸುಮಾರು ಒಂದು ವರ್ಷಗಳಿಂದ ದೆಹಲಿಯ ಗಡಿಯಲ್ಲಿ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಪ್ರತಿಭಟಿಸುತ್ತಿವೆ. ಈಗಾಗಲೇ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ 11 ಸುತ್ತಿನ ಮಾತುಕತೆ ನಡೆದಿದ್ದರೂ ಯಾವುದೂ ಫಲಪ್ರದಾಯಕವಾಗಿಲ್ಲ.

    ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳು ರೈತರನ್ನು ಕಾರ್ಪೋರೇಟ್​ ಕಂಪನಿಗಳ ಕರುಣೆಯಲ್ಲಿ ಬದುಕುವಂತೆ ಮಾಡುತ್ತದೆ ಮತ್ತು ನಮ್ಮ ಸ್ವಾವಲಂಬಿ ಬದುಕನ್ನು ಕಸಿದುಕೊಳ್ಳುತ್ತದೆ ಎಂದು ಆರೋಪಿಸಿ ರೈತ ಸಂಘಟನೆಗಳು ಸುದೀರ್ಘವಾಗಿ ಪ್ರತಿಭಟನೆ ನಡೆಸಿಕೊಂಡು ಬರುತ್ತಿವೆ. ಇದರಿಂದ ದೆಹಲಿಯ ನಾಗರಿಕ ಮೇಲೆ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂಕೋರ್ಟ್​ ರೈತ ಸಂಘಟನೆಗಳಿಗೆ ಕ್ಲಾಸ್​ ತೆಗೆದುಕೊಂಡಿತು. (ಏಜೆನ್ಸೀಸ್​)

    ಡ್ರೈವಿಂಗ್​ ವೇಳೆ ಬ್ಲ್ಯೂಟೂತ್​, ಇಯರ್​​ ಫೋನ್ ಬಳಸೋರಿಗೆ ಬೆಂಗ್ಳೂರು ಪೊಲೀಸರಿಂದ ಶಾಕಿಂಗ್​ ನ್ಯೂಸ್..!​

    ರಾಜೀವಗಾಂಧಿ ಹತ್ಯೆ- 30 ವರ್ಷಗಳ ಬಳಿಕ ಮರಳಿದ ರಕ್ತಸಿಕ್ತ ಕ್ಯಾಪ್‌… ಕಣ್ಣೀರಾದ ಐಪಿಎಸ್‌ ಅಧಿಕಾರಿ…

    ನಟಿ ಸೌಜನ್ಯ ಸಾವು ಪ್ರಕರಣ: ಆರೋಪಿ ಮೊಬೈಲ್​ನಲ್ಲಿದ್ದ ಫೋಟೋ-ವಿಡಿಯೋಗಳ ಬೆನ್ನತ್ತಿದ ಪೊಲೀಸರು

    ಚಪಾತಿ ಮಾಡು, 3 ಗಂಟೆಯಲ್ಲಿ ಬರ್ತೇನೆ ಎಂದೋಳು ಆತ್ಮಹತ್ಯೆ ಏಕೆ ಮಾಡ್ಕೋತಾಳೆ? ನಟಿಯ ಅಮ್ಮನ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts