More

    ಯೋಗ ವ್ಯಕ್ತಿಗಾಗಿ ಮಾತ್ರವಲ್ಲ ಅದು ಮನುಕುಲದ ಒಳಿತಿಗಾಗಿ, ವಿಶ್ವಕ್ಕೆ ಶಾಂತಿ ನೀಡುವ ಶಕ್ತಿ ಯೋಗಕ್ಕಿದೆ: ಪ್ರಧಾನಿ ಮೋದಿ

    ಮೈಸೂರು: ಯೋಗ ಕೇವಲ ವ್ಯಕ್ತಿಗಾಗಿ ಅಲ್ಲ ಅದು ಮನು ಕುಲದ ಒಳಿತಿಗಾಗಿ, ಇಡೀ ವಿಶ್ವಕ್ಕೆ ಶಾಂತಿ ನೀಡುವ ಶಕ್ತಿ ನಮ್ಮ ಯೋಗಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೈಸೂರು ಅರಮನೆ ಮೈದಾನದಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.

    ಈ ದಿನ ಆಚರಿಸುತ್ತಿರುವ 8ನೇ ಅಂತಾರಾಷ್ಟ್ರೀಯ ಯೋಗ ದಿನದಂದು ನಾನು ಎಲ್ಲರಿಗೂ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇಂದು ಪ್ರಪಂಚದ ಎಲ್ಲಾ ಭಾಗಗಳಲ್ಲಿ ಯೋಗವನ್ನು ಅಭ್ಯಾಸ ಮಾಡಲಾಗುತ್ತಿದೆ. ಯೋಗವು ನಮಗೆ ಶಾಂತಿಯನ್ನು ತರುತ್ತದೆ. ಕೇವಲ ನಮಗೆ ಮಾತ್ರವಲ್ಲ ಯೋವು ನಮ್ಮ ರಾಷ್ಟ್ರ ಸೇರಿದಂತೆ ಇಡೀ ಜಗತ್ತಿಗೆ ಶಾಂತಿಯನ್ನು ತರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಈ ಇಡೀ ವಿಶ್ವವು ನಮ್ಮ ದೇಹ ಮತ್ತು ಆತ್ಮದಿಂದ ಆರಂಭವಾಗುತ್ತದೆ. ವಿಶ್ವವು ನಮ್ಮಿಂದ ಪ್ರಾರಂಭವಾಗುತ್ತದೆ ಮತ್ತು ಯೋಗವು ನಮ್ಮೊಳಗಿನ ಎಲ್ಲವನ್ನೂ ಜಾಗೃತಗೊಳಿಸುತ್ತದೆ ಮತ್ತು ಅರಿವಿನ ಪ್ರಜ್ಞೆಯನ್ನು ನಿರ್ಮಿಸುತ್ತದೆ ಎಂದರು.

    ಕೆಲವು ವರ್ಷಗಳ ಹಿಂದೆ ಯೋಗ ಮನೆಯೊಳಗೆ, ಆಧ್ಯಾತ್ಮಿಕ ಕೇಂದ್ರಗಳಲ್ಲಿ ನಡೆಯುತ್ತಿತ್ತು. ಈಗ ದೇಶದ ಮೂಲೆ ಮೂಲೆಗಳಲ್ಲಿ ಯೋಗ ನಡೆಯುತ್ತಿದೆ. ಇದು ವ್ಯಕ್ತಿಗಾಗಿ ಯೋಗವಲ್ಲ. ಮನು ಕುಲದ ಒಳಿತಿಗಾಗಿ ಯೋಗ. ಈ ಕಾರಣಕ್ಕೆ ಈ ಬಾರಿ ಮಾನವೀಯತೆಗಾಗಿ ಯೋಗ ಮಾಡುತ್ತಿದ್ದೇವೆ. ಇಡೀ ವಿಶ್ವಕ್ಕೆ ಶಾಂತಿ ನೀಡುವ ಶಕ್ತಿ ಯೋಗಕ್ಕೆ ಇದೆ. ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಮಾನಸಿಕ ಶಾಂತಿ, ಸದೃಢತೆಗೆ ಪ್ರತಿಯೊಬ್ಬರು ಯೋಗ ಮಾಡಬೇಕು. ಯೋಗಕ್ಕೆ ಇರುವ ಶಕ್ತಿಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

    ಸೂರ್ಯೋದಯ ಸಮಯಕ್ಕೆ ಇಡೀ ವಿಶ್ವದಲ್ಲಿ ಯೋಗ ಮಾಡಲಾಗುತ್ತಿದೆ. ಇಂದು ಯೂನಿವರ್ಸಲ್ ಯೋಗ ಚೈನ್ ಸೃಷ್ಟಿಯಾಗಲಿದೆ. ಒಂದೆರಡು ನಿಮಿಷದ ಧಾನ್ಯ ನಮ್ಮ ಮನಸ್ಸಿಗೆ ಶಕ್ತಿ ತುಂಬುತ್ತದೆ. ನಾವು ಯೋಗವನ್ನು ಬದುಕಿನ ಬಹು ದೊಡ್ಡ ಭಾಗವಾಗಿ ಸ್ವೀಕರಿಸಬೇಕು. ಯೋಗದ ಬಗ್ಗೆ ತಿಳಿದುಕೊಂಡು ಯೋಗದ ಜೊತೆಗೆ ಬದುಕುವುದ ಕಲಿಯಬೇಕು ಎಂದರು.

    2014ರ ಸೆಪ್ಟೆಂಬರ್ 27ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನದ ಕಲ್ಪನೆಯನ್ನು ಮೊದಲ ಬಾರಿಗೆ ಮುಂದಿಟ್ಟರು. ಭಾರತವು ಅಂಗೀಕರಿಸಿದ ಕರಡು ನಿರ್ಣಯವನ್ನು 177 ರಾಷ್ಟ್ರಗಳು ಬೆಂಬಲಿಸಿದವು. ಯೋಗದ ಸಾರ್ವತ್ರಿಕ ಮನ್ನಣೆ ಮತ್ತು ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ, ವಿಶ್ವಸಂಸ್ಥೆಯು ಜೂನ್ 21 ಅನ್ನು 2014ರ ಡಿಸೆಂಬರ್ 11 ರಂದು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು.

    ತಾರಾಯೋಗ: ಯೋಗಾಭ್ಯಾಸದ ಕುರಿತು ತಾರೆಯರ ಅನುಭವ, ಅನಿಸಿಕೆ..

    ನಾಯಕತ್ವ ಬದಲಾವಣೆ ಚರ್ಚೆಗೆ ಫುಲ್​ಸ್ಟಾಪ್: ಹಲವು ಚುನಾವಣೆಗಳ ಹೊಸ್ತಿಲಲ್ಲಿ ಬಲವರ್ಧನೆ; ಸಿಎಂ ಆತ್ಮವಿಶ್ವಾಸ ಹೆಚ್ಚಳ

    ವುಹಾನ್ ಲ್ಯಾಬ್ ಸೋಂಕಿನ ಮೂಲ; ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅದಾನೊಮ್ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts