More

    ತಾರಾಯೋಗ: ಯೋಗಾಭ್ಯಾಸದ ಕುರಿತು ತಾರೆಯರ ಅನುಭವ, ಅನಿಸಿಕೆ..

    ಇಂದು ವಿಶ್ವ ಯೋಗ ದಿನ. ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಈ ದಿನವನ್ನು ಸಂಭ್ರಮಿಸಲಾಗುತ್ತಿದ್ದು, ಕನ್ನಡದ ನಟಿಯರು ಸಹ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಯೋಗ ದಿನದ ಪ್ರಯುಕ್ತ, ಕನ್ನಡದ ಮೂವರು ಜನಪ್ರಿಯ ನಟಿಯರು ಯೋಗದ ಮಹತ್ವದ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ್ದಾರೆ.

    ಅದೊಂದು ಜೀವನ ಶೈಲಿ

    ತಾರಾಯೋಗ: ಯೋಗಾಭ್ಯಾಸದ ಕುರಿತು ತಾರೆಯರ ಅನುಭವ, ಅನಿಸಿಕೆ..ನನ್ನ ಪ್ರಕಾರ, ಯೋಗ ಎಂಬುದು ಬರೀ ವ್ಯಾಯಾಮ ಅಲ್ಲ, ಬದಲಾಗಿ ಅದೊಂದು ಜೀವನಶೈಲಿ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ, ಒನ್ ಸ್ಟಾಪ್ ಸಲ್ಯೂಷನ್. ನಾನು ಮೊದಲು ಹೆಚ್ಚು ಜಿಮ್ೆ ಹೋಗುತ್ತಿದ್ದೆ. ಆದರೆ, ಆರು ವರ್ಷಗಳ ಹಿಂದೆ ತೂಕ ಕಡಿಮೆ ಮಾಡಿಕೊಳ್ಳುವ ಸಮಯದಲ್ಲಿ ಯೋಗ ಪ್ರಾರಂಭಿಸಿದೆ. ಅಂದಿನಿಂದ ಇವತ್ತಿನವರೆಗೂ ಯೋಗ ಮಾಡುತ್ತಿದ್ದೇನೆ. ವಾರದಲ್ಲಿ ಐದು ದಿನ ಬೆಳಗ್ಗೆ ಆಗಲಿ ಅಥವಾ ಸಂಜೆಯಾಗಲಿ ಸ್ವಲ್ಪ ಸಮಯ ಯೋಗ ಮಾಡುತ್ತೇನೆ. ನಾನು ಪರ್ಸನಲ್ ಟ್ರೖೆನರ್ ಬಳಿ ಸದ್ಯ ಅಷ್ಟಾಂಗ ಯೋಗ ತರಬೇತಿ ಪಡೆಯುತ್ತಿದ್ದೇನೆ. ಪ್ರತಿಯೊಬ್ಬರೂ ಯೋಗ ಮಾಡಬೇಕು. ಅದು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ತುಂಬ ಒಳ್ಳೆಯದು.

    | ರಾಗಿಣಿ ದ್ವಿವೇದಿ 

    ಒತ್ತಡ ಕಡಿಮೆ ಮಾಡುತ್ತದೆ

    ತಾರಾಯೋಗ: ಯೋಗಾಭ್ಯಾಸದ ಕುರಿತು ತಾರೆಯರ ಅನುಭವ, ಅನಿಸಿಕೆ..ಕರೋನಾ ಲಾಕ್​ಡೌನ್ ಸಮಯದಲ್ಲಿ ಜಿಮ್ಳು ಬಂದ್ ಆಗಿದ್ದ ಕಾರಣ, ಮನೆಯಲ್ಲೇ ಹೇಗೆ ವ್ಯಾಯಾಮ ಮಾಡುವುದು ಎಂದು ಯೋಚಿಸುತ್ತಿದ್ದಾಗ, ಸಿಕ್ಕ ಪರಿಹಾರವೇ ಯೋಗ. ಒಮ್ಮೆ ಯೋಗ ಶುರು ಮಾಡಿದ ಮೇಲೆ ಇದುವರೆಗೂ ನಿಲ್ಲಿಸಿಲ್ಲ. ಪ್ರತಿದಿನ ಯೋಗ ಮಾಡುತ್ತಿದ್ದೇನೆ. ದೈಹಿಕವಾಗಿ ಎನ್ನುವುದಕ್ಕಿಂತ, ಮಾನಸಿಕವಾಗಿ ಯೋಗ ನಮ್ಮನ್ನು ಹೆಚ್ಚು ಸದೃಢರನ್ನಾಗಿ ಮಾಡುತ್ತದೆ. ದೈನಂದಿನ ಕೆಲಸದ ಒತ್ತಡದ ನಡುವೆ ಮಾನಸಿಕ ವಿಶ್ರಾಂತಿ ನೀಡುತ್ತದೆ. ಕೆಲಸದ ಬಿಜಿಯಿಂದಾಗಿ ಜಿಮ್ೆ ಹೋಗಲು ಸಾಧ್ಯವಾಗದಿದ್ದಾಗ ಮನೆಯಲ್ಲೇ ಕೆಲ ಸಮಯ ಯೋಗ ಮಾಡುತ್ತೇನೆ. ಎಲ್ಲರೂ ಅಷ್ಟೇ, ಒಂದಲ್ಲಾ ಒಂದು ರೀತಿ ವ್ಯಾಯಾಮ ಮಾಡಬೇಕು. ಯೋಗ ತುಂಬ ಸರಳ. ಹಾಗೆಯೇ ಆರೋಗ್ಯಕ್ಕೂ ಒಳ್ಳೆಯದು. ಏನಾದರೂ ಆರೋಗ್ಯ ಸಮಸ್ಯೆ ಇರುವವರು ಆ ಸಮಸ್ಯೆಯನ್ನೇ ಬಗೆಹರಿಸಿಕೊಳ್ಳಲು ನಿರ್ದಿಷ್ಟವಾದ ಆಸನಗಳನ್ನು ಮಾಡಬಹುದು.

    | ನಿಶ್ವಿಕಾ ನಾಯ್ಡು

    ಊಟ, ನಿದ್ದೆಯಷ್ಟೇ ಮುಖ್ಯ

    ವ್ಯಾಯಾಮ ಅಂದರೆ ಎಲ್ಲರೂ ಜಿಮ್ ಅಂತನೇ ಅಂದುಕೊಂಡಿದ್ದೇವೆ. ಹಾಗೆಯೇ ಯೋಗ ಅಂದರೆ ಹಳೆ ಕಾಲದ್ದು ಅಂತ ನನಗೂ ಆರಂಭದಲ್ಲಿ ಆಸಕ್ತಿ ಇರಲಿಲ್ಲ. ಅದೇ ಸಮಯದಲ್ಲಿ ನನ್ನ ತಂದೆಗೆ ಡಯಾಬಿಟೀಸ್ ಇತ್ತು. ಆಗ ವೈದ್ಯರು ಯೋಗ ಮಾಡಿದರೆ ಶುಗರ್ ಲೆವೆಲ್ ಕಡಿಮೆಯಾಗುತ್ತೆ ಅಂತ ಸಲಹೆ ನೀಡಿದರು. ಅಪ್ಪನ ಜತೆಗೆ ನಾನೂ ಯೋಗ ಕ್ಲಾಸ್​ಗೆ ಸೇರಿಕೊಂಡೆ. ಕ್ರಮೇಣ, ಯೋಗದಿಂದ ನನ್ನಲ್ಲಿ ಉತ್ತಮ ಬದಲಾವಣೆ ಆಗುತ್ತಿದೆ ಅಂತ ಅನ್ನಿಸಿತು. ನನ್ನ ಯೋಗ ಗುರುಗಳು ವಿರೂಪಾಕ್ಷ ಬೆಳವಾಡಿಯವರು 3 ರೀತಿಯ ಸೂರ್ಯನಮಸ್ಕಾರ, 2 ರೀತಿಯ ಚಂದ್ರನಮಸ್ಕಾರ, ಹನುಮ ನಮಸ್ಕಾರ ಅಂತ ಪ್ರತಿದಿನ ಬೇರೆಬೇರೆ ರೀತಿ ಯೋಗ ಹೇಳಿಕೊಡುತ್ತಿದ್ದರು. ಕಡ್ಡಿ, ಚೇರ್, ಏರಿಯಲ್ ಯೋಗ ಅಂತ ಮತ್ತಷ್ಟು ಆಸಕ್ತಿ ಹೆಚ್ಚಿತು. ಈಗ ಯೋಗ ನನ್ನ ಜೀವನಶೈಲಿಯಾಗಿದೆ. ತಿಂಡಿ, ಊಟ, ನಿದ್ರೆ ಎಷ್ಟು ಮುಖ್ಯವೋ ಯೋಗ ಕೂಡ ನನಗೆ ಅಷ್ಟೇ ಮುಖ್ಯ. ದೇಹದಲ್ಲಿ ಆಮ್ಲಜನಕ ಹೆಚ್ಚಿಸುತ್ತದೆ, ಜೀರ್ಣಕ್ರಿಯೆ ಉತ್ತಮವಾಗಿಸುತ್ತದೆ, ತೂಕ ಕಡಿಮೆ ಮಾಡಿಕೊಳ್ಳಬಹುದು ಮತ್ತು ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ವಿಶ್ವ ಯೋಗ ದಿನ ಅಂತ ಒಂದು ದಿನಕ್ಕೆ ಮಾತ್ರ ಯೋಗ ಮಾಡದೇ, ಪ್ರತಿದಿನ ಮಾಡಬೇಕು.

    | ವೈಷ್ಣವಿ ಗೌಡ 

    ನನಗೆ ಕುರ್ತಾ ಹೊಲಿದು ಕೊಡ್ಬೋದಾ? ಈಗ ಫುಲ್​ ಖುಷಿನಾ?: ಮೋದಿ ಹೀಗೆ ಕೇಳಿದ್ದಕ್ಕೂ ಕಾರಣವಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts