More

    ಸ್ಮಾರ್ಟ್​ಫೋನ್‌ ಇದ್ರೆ ಮಾತ್ರ ನರೇಗಾ ಕೆಲಸ: ಪಿಡಿಒ ವರ್ತನೆಗೆ ಬೇಸತ್ತು ಗ್ರಾಮಸ್ಥರ ಕಣ್ಣೀರು

    ಯಾದಗಿರಿ: ಗ್ರಾಮದ ಜನರ ಆರ್ಥಿಕ ಸ್ಥಿತಿಯ ನಿರ್ವಹಣೆಗಾಗಿ ಸರ್ಕಾರ ನರೇಗಾ ಎಂಬ ಆಸರೆಯ ಯೋಜನೆಯನ್ನು ಜಾರಿಗೆ ತಂದರೆ, ಅಧಿಕಾರಿಗಳ ಹುಚ್ಚಾಟವು ಗ್ರಾಮದ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂಬುದಕ್ಕೆ ಯಾದಗಿರಿಯಲ್ಲಿ ನಡೆದಿರುವ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

    ನರೇಗಾ ಯೋಜನೆಯಲ್ಲಿ ಕೂಲಿ ಮಾಡಬೇಕೆಂದರೆ, ಸ್ಮಾರ್ಟ್​ಫೋನ್ ಇರಬೇಕಂತೆ. ಸ್ಮಾರ್ಟ್​ಫೋನ್​ ತರದೇ ಹೋದರೆ ಕೆಲಸ ಕೊಡುವುದಿಲ್ಲವಂತೆ. ಇದು ಯಾದಗಿರಿ ಜಿಲ್ಲೆಯ‌ ನಗನೂರು ಪಂಚಾಯಿತಿಯ ನರೇಗಾ ಲೂಲಿ ಕಾರ್ಮಿಕರ ಅಳಲಾಗಿದೆ. ಕೊಡುವ 250 ರೂಪಾಯಿ ಕೂಲಿಗೆ 10 ಸಾವಿರದ ಪೋನ್ ಖರೀದಿಸುವುದಾದರೂ ಹೇಗೆ? ಅಷ್ಟು ಹಣ ಇದ್ರೆ ನಾವ್ಯಾಕೆ ಈ ಕೆಲಸಕ್ಕೆ ಬರ್ತಿದ್ವಿ ಸರ್‌? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ನರೇಗಾ ಕೆಲಸಕ್ಕೆ ಸ್ಮಾರ್ಟ್​ಫೋನ್​ ಅವಶ್ಯಕತೆ ಇದೆಯಾ? ಎಂಬುದು ಮುಖ್ಯ ಪ್ರಶ್ನೆಯಾಗಿದೆ.

    ಸ್ಮಾರ್ಟ್​ಫೋನ್ ತಂದ್ರೆ ಮಾತ್ರ ಕೆಲಸ ಕೊಡುತ್ತೇವೆ ಅಂತಾ ಪಿಡಿಒ ಶ್ರೀಶೈಲ್ ಹಳ್ಳಿ ಹೇಳಿದ್ದಾರಂತೆ. ಅಲ್ಲದೆ, ಕೆಲಸ ಮಾಡಿದ ಕೂಲಿ ಕೊಡದೇ ಸತಾಯಿಸುತ್ತಾರೆಂತೆ. ನಾವು ಬಡವರು ಒಂದೊತ್ತಿನ ಊಟಕ್ಕೆ ನಾವು ಪರದಾಡ್ತಿವಿ, ಇನ್ನು ಸ್ಮಾರ್ಟ್ ಫೋನ್ ಎಲ್ಲಿಂದ ತರೋಣ ಎಂದು ಕೂಲಿ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

    ಸ್ಮಾರ್ಟ್​ಪೋನ್ ಅಲ್ಲಿ ನೀವೇ ಪೋಟೊ ತೆಗೆದು ಹಾಕಿದ್ರೆ ಮಾತ್ರ ಬಿಲ್​ ಪಾಸ್ ಅಗುತ್ತೆ ಇಲ್ಲ ಅಂದ್ರೆ ಅಗಲ್ಲ ಅಂತಾ ಅಧಿಕಾರಿಗಳು ಹೇಳಿದ್ದಾರಂತೆ. ಕೆಲಸ ಮಾಡಿಸಿಕೊಂಡು ಕೂಲಿ ಕೊಡದಿದ್ರೆ ಬದುಕುವುದು ಕಷ್ಟ ಆಗುತ್ತೆ ಅಂದ್ರು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಕರೆ ಮಾಡಿದ್ರು ನಗನೂರು ಪಿಡಿಒ ಅಧಿಕಾರಿ ಸ್ಪಂದಿಸುತ್ತಿಲ್ಲ. ಹೀಗೆ ಆದರೆ ನಾವು ಮಕ್ಕಳನ್ನ ಕಟ್ಟಿಕೊಂಡು ಗುಳೆ ಹೋಗಬೇಕಾಗುತ್ತದೆ ಎಂದು ಜನರು ಕಣ್ಣೀರಾಕುತ್ತಿದ್ದಾರೆ.

    ಗುಳೆ ಹೋಗ್ಬೇಡಿ ನಾವು ಕೆಲಸ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತೆ. ಆದರೆ, ಅಧಿಕಾರಿಗಳ ಈ ವರ್ತನೆಯಿಂದ ಗುಳೆ ಹೋಗದೇ ಬೇರೆ ದಾರಿಯಿಲ್ಲ. ಕೆಲಸಕ್ಕೆ ತಕ್ಕ ಕೂಲಿ ಕೊಡದೇ ನಮ್ಮನ್ನ ಸಾಯಸ್ತಿದ್ದಾರೆ ಎಂದು ಕಾರ್ಮಿಕರು ನೋವು ತೋಡಿಕೊಂಡಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಗ್ರಾಹಕರಿಗೆ ಶಾಕ್​: ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಏರಿಕೆ, LPGಯು ತುಟ್ಟಿ!

    ಸವಿನಿದ್ದೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್​ ಕೊಟ್ಟ ಎಸಿಬಿ: ಏಕಕಾಲದಲ್ಲಿ 9 ಕಡೆ ದಾಳಿ

    ದಕ್ಷಿಣ ಚೀನಾದಲ್ಲಿ ವಿಮಾನ ಪತನ: 132 ಪ್ರಯಾಣಿಕರ ದುರಂತ ಸಾವು, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts