More

    ಸ್ವಂತ ಖರ್ಚಿನಲ್ಲಿ ಗಣಿತ ಲ್ಯಾಬ್ ತೆರೆದು ಮಾದರಿಯಾದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ

    ಯಾದಗಿರಿ: ಮಕ್ಕಳು ಓದಿದರೆಷ್ಟು ಬಿಟ್ಟರೆಷ್ಟು… ಸಂಬಳ ಬಂದರೆ ಸಾಕು ಅಂತಾ ಹೇಳುವ ಶಿಕ್ಷಕರ ನಡುವೆ ಇಲ್ಲೊಬ್ಬ ಶಿಕ್ಷಕ ಸ್ವಂತ ಖರ್ಚಿನಲ್ಲಿಯೇ ಗಣಿತ ಲ್ಯಾಬ್ ತೆರೆದು ಮಾದರಿಯಾಗಿದ್ದಾರೆ.

    ಶಹಪೂರ ತಾಲೂಕಿನ ಸಗರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ ವಿಶ್ವನಾಥ್ ಎಂಬುವವರು ಲ್ಯಾಬ್ ತಯಾರಿಸಿ ಮಕ್ಕಳಿಗೆ ಕೊಡುಗೆ ನೀಡಿದ್ದಾರೆ. ಕರೊನಾ ಲಾಕ್​ಡೌನ್​ನಲ್ಲಿ ಸುಮ್ಮನೆ ಕೂರದೆ ಮಕ್ಕಳ ಒಳಿತಿಗಾಗಿ ಸ್ವಂತ ದುಡ್ಡಿನಲ್ಲಿ ಲ್ಯಾಬ್ ತಯಾರಿಸಿದ್ದಾರೆ.

    ಮನೆಯಲ್ಲಿ ಸಿಗುವ ಕೆಲ ಕಚ್ಚಾ ವಸ್ತುಗಳಿಂದ ಅದ್ಭುತವಾದ ಲ್ಯಾಬ್ ತಯಾರಿಸಿದ್ದಾರೆ. ಇದೀಗ ಲ್ಯಾಬ್ ನೋಡಿ ಶಾಲಾ ಮಕ್ಕಳು, ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ಖುಷಿ ಪಟ್ಟಿದ್ದಾರೆ.

    ವಿಶ್ವನಾಥ್​ ಅವರು ಲ್ಯಾಬ್​ನಲ್ಲಿ ಗಣಿತ ವಿಷಯಕ್ಕೆ ಸಂಬಂಧಿಸಿದ ಸೂತ್ರಗಳು ಹಾಗೂ ಪ್ರಮೇಯಗಳನ್ನು ಸಿದ್ಧಪಡಿಸಿದ್ದಾರೆ. ಇದರಿಂದ ಮಕ್ಕಳ ಕಲಿಕೆಗೆ ಸುಲಭವಾಗಲಿದೆ. ಯಾದಗಿರಿ ಜಿಲ್ಲೆಯಲ್ಲಿಯೇ ಮೊದಲ ಗಣಿತ ಲ್ಯಾಬ್ ಇದಾಗಿದ್ದು, ಎಸ್​ಎಸ್​ಎಲ್​ಸಿ ಮಕ್ಕಳ ಗಣಿತ ಕಲಿಕೆಗೆ ಇದು ಪೂರಕವಾಗಿದೆ. (ದಿಗ್ವಿಜಯ ನ್ಯೂಸ್​)

    ಪಿಂಚಣಿ ಹಣದಲ್ಲಿ ಜೀವನ ದೂಡುತ್ತಿರುವ ವದ್ಧನಿಗೆ GST ನೋಟಿಸ್​: ತೆರಿಗೆ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ!

    ಕೊರಗಜ್ಜನ ವೇಷ ಧರಿಸಿ ಮದ್ವೆ ಮನೇಲಿ ಡಾನ್ಸ್​, ಇಬ್ಬರ ಬಂಧನ: ಆರೋಪಿ ಬಿಡುಗಡೆಗೆ ಒತ್ತಡ ಏರಿದ್ದ ಬಿಜೆಪಿ ಮುಖಂಡ ಅಮಾನತು

    ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ಗೆ ಕರೊನಾ ಪಾಸಿಟಿವ್​, ಐಸಿಯುನಲ್ಲಿ ಚಿಕಿತ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts