More

    ಸೊಂಟದ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳಲು ಪಾರ್ಲರ್​ಗೆ ಹೋದ ಕೇರಳ ಮಹಿಳೆಯ ಕಣ್ಣೀರಿನ ಕತೆ ಇದು

    ಕೊಚ್ಚಿ: ಕೇರಳದ ಕೊಚ್ಚಿಯಲ್ಲಿರುವ ಟ್ಯಾಟೂ ಕಲಾವಿದನ ವಿರುದ್ಧ ಕೆಲ ಯುವತಿಯರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಟ್ಯೂಟೂ ಕಲಾವಿದ ಸುಜೀಶ್​ನ​​ ಕರಾಳ ಮುಖವನ್ನು ಒಂದೊಂದಾಗಿ ಬಿಚ್ಚಿಟ್ಟಿರುವ ಸಂತ್ರಸ್ತೆಯರು ಟ್ಯಾಟೂ ಪಾರ್ಲರ್​ನ ಅಕ್ರಮವನ್ನು ಹೊರ ಹಾಕಿದ್ದಾರೆ.

    ಆರೋಪಿ ಸುಜಿತ್ ಟ್ಯಾಟೂ ಸೂಜಿಯಿಂದ ಹೆದರಿಸಿ ದೌರ್ಜನ್ಯ ಎಸಗಿದರು ಎಂದು ಸಂತ್ರಸ್ತೆಯೊಬ್ಬಳು ಆರೋಪಿಸಿದರೆ, ವರ್ಷದ ಹಿಂದೆ ಸುಜೀಶ್​ ಅತ್ಯಾಚಾರ ಮಾಡಿದ್ದಾರೆ ಎಂದು ಮತ್ತೊಬ್ಬ ಸಂತ್ರಸ್ತೆ ಹೇಳಿದ್ದಾರೆ. ಅಂದಹಾಗೆ ಸುಜೀಶ್​ ಟ್ಯೂಟೂ ಪಾರ್ಲರ್​ ಸಿಕ್ಕಾಪಟ್ಟೆ ಫೇಮಸ್​ ಆಗಿರುವ ಟ್ಯಾಟೂ ಕೇಂದ್ರ. ಅಲ್ಲಿಗೆ ಸಿನಿಮಾ ಕಲಾವಿದರು ಸೇರಿ ಅನೇಕ ಸೆಲೆಬ್ರಿಟಿಗಳು ಟ್ಯಾಟೂ ಹಾಕಿಸಿಕೊಳ್ಳಲು ಬರುತ್ತಾರೆ.

    ಸಾಮಾಜಿಕ ಜಾಲತಾಣ ವೇದಿಕೆ ರೆಡ್ಡಿಟ್​ನಲ್ಲಿ ಮಹಿಳೆಯೊಬ್ಬರು ಸುಜೀಶ್ ಕರ್ಮಕಾಂಡ ವಿವರಿಸಿದ್ದಾರೆ. ಅನೇಕ ಮಹಿಳೆಯರು ಕೂಡ ತಮಗಾದ ಕಹಿ ಅನುಭವವನ್ನು ಹೊರಗಾಕಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳುವಾಗ ನನ್ನ ಖಾಸಗಿ ಅಂಗವನ್ನು ಸ್ಪರ್ಶಿಸಿದ ಸುಜೀಶ್​, ನನ್ನನ್ನು ತುಂಬಾ ಬಲವಂತ ಮಾಡಿದರು ಎಂದು ಆರೋಪ ಮಾಡಿದ್ದಾರೆ.

    ವ್ಯಕ್ತಿಯೊಬ್ಬರನ್ನು ನೋಡಿ ಟ್ಯಾಟೂ ಹಾಕಿಸಿಕೊಳ್ಳಲು ಸುಜೀಶ್​ ಅವರ ಪಾರ್ಲರ್​ಗೆ​ ಹೋದೆ. ಸೊಂಟಕ್ಕೆ ಟ್ಯಾಟೂ ಹಾಕಿಸಿಕೊಳ್ಳಲು ಹೋದೆ. ನನ್ನ ಹಚ್ಚೆ ಮೂಲತಃ ದೇವದೂತರ ರೆಕ್ಕೆಗಳನ್ನು ಹೊಂದಿರುವ ಯೋನಿಯ ಚಿತ್ರವಾಗಿತ್ತು. ಟ್ಯೂಟೂ ಹಾಕುತ್ತಾ ಸ್ವಲ್ಪ ಆಪ್ತವಾಗಿ ಮಾತನಾಡಲು ಆರಂಭಿಸಿದ. ಬಳಿಕ ಆತನ ನಡೆಯಿಂದ ಮುಜುಗರವಾಗಲು ಶುರುವಾಯಿತು. ನೀವು ಲೈಂಗಿಕತೆಯನ್ನು ಇಷ್ಟಪಡುವ ಕಾರಣ ಈ ಹಚ್ಚೆ ಹಾಕಿಸಿಕೊಳ್ಳುತ್ತೀದ್ದೀರಾ? ನೀವು ಕನ್ಯೆಯೇ? ಎಷ್ಟು ಬಾರಿ ಸಂಭೋಗ ಮಾಡಿದ್ದೀರಿ? ಹೊರಗಡೆ ನಿಂತಿರುವುದು ನಿಮ್ಮ ಬಾಯ್​ಫ್ರೆಂಡಾ? ಎಂದೆಲ್ಲ ಪ್ರಶ್ನೆಗಳನ್ನು ಕೇಳಿದರು.

    ಆತನ ಮಾತಿನಿಂದ ನಾನು ಭಯಭೀತಳಾದೆ. ಇತ್ತ ನನ್ನ ಬೆನ್ನ ಮೂಳೆ ಮೇಲೆ ಆತ ಟ್ಯಾಟೂ ಸೂಜಿಯನ್ನು ಇಟ್ಟಿದ್ದ. ನಾನು ಮುಂದೆ ಬಾಗಿದ್ದೆ. ಇದಾದ ಬಳಿಕ ನನ್ನ ಜೀನ್ಸ್​ ಅನ್ನು ಮತ್ತಷ್ಟು ಸಡಿಲಗೊಳಿಸಲು ಆರಂಭಸಿದ. ಇದರೊಂದಿಗೆ ಸರಿಯಾಗಿದೆಯೇ ಎಂದು ಅವನು ಕೇಳಿದನು ಮತ್ತು ನಾನು ಹೌದು ಎಂದು ಹೇಳಿದೆ. ಏಕೆಂದರೆ ಅವನು ಹಚ್ಚೆಯ ಕೆಳಗಿನ ಭಾಗಗಳಿಗೆ ಹೋಗುತ್ತಿದ್ದಾನೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸಿದೆ. ಆದರೆ, ನನ್ನ ಪ್ಯಾಂಟ್​ ಅನ್ನು ಕಳಚಿ, ನಂತರ ನನ್ನ ಒಳಉಡುಪಿನ ಬಳಿ ಕೈತಂದು ಏನೇನೋ ಮಾಡಲು ಆರಂಭಿಸಿದ. ಆತ ಗ್ಲೌಸ್​ ಧರಿಸಿದ್ದ. ಮುಟ್ಟಾಗಿದ್ದೀರಾ ಎಂದು ಕೇಳಿದ. ನಾನು ಮಾತನಾಡಲಿಲ್ಲ. ಏನಾಗುತ್ತಿದೆ ಎಂಬುದನ್ನು ನೋಡಲು ಸಾಧ್ಯವಾಗಲಿಲ್ಲ. ನಂತರ ನಾನು ಬಾಗಿದಾಗ ಅವನು ನನಗೆ ಹಚ್ಚೆ ಹಾಕಿದನು ಮತ್ತು ಹೆಚ್ಚು ನೋವು ಮಾಡಿದನು. ನಾನು ಒಂದು ಮಾತನ್ನೂ ಮಾತನಾಡಲಿಲ್ಲ. ನಾನು ನಿಲ್ಲಿಸು ಎಂದು ಹೇಳಲಿಲ್ಲ. ನಾನು ಆ ಕ್ಷಣದಲ್ಲಿ ತುಂಬಾ ಮೂರ್ಖಳಾಗಿದ್ದಕ್ಕಾಗಿ ಸ್ಥಳದಲ್ಲೇ ಸಾಯಬೇಕೆಂದು ನಾನು ಭಾವಿಸಿದೆ.

    ಇದಾದ ತಕ್ಷಣ ನನ್ನ ಕಡೆ ತಿರುಗಿ ಕಿಸ್​ ಮಾಡಿದ ಮತ್ತು ತನ್ನ ಬಟ್ಟೆಯನ್ನು ಕಳಚಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ. ಇದೇ ಸಂದರ್ಭದಲ್ಲಿ ಮನೆಯಿಂದ ಫೋನ್​ ಬಂತು ನಾನು ಭಯದಿಂದಲೇ ಮನೆಗೆ ಓಡಿ ಬಂದೆ. ಬರುವಾಗ ಇನ್ನು ಟ್ಯಾಟೂ ಪೂರ್ಣಗೊಂಡಿಲ್ಲ. ಮತ್ತೆ ಮಂಗಳವಾರ ಬಾ ನೀವು ಟ್ಯಾಟೂಗಾಗಿ ಹಣ ಕೊಡಬೇಕಾಗಿಲ್ಲ ಎಂದು ಹೇಳಿದ. ನಿಜಕ್ಕೂ ಹೇಸಿಗೆ ಅನಿಸಿತು ಎಂದು ಸಂತ್ರಸ್ತೆ ಬರೆದುಕೊಂಡಿದ್ದಾರೆ.

    ಈ ಘಟನೆಯ ಬಗ್ಗೆ ಸಂತ್ರಸ್ತೆ ವಕೀಲರೊಬ್ಬರ ಬಳಿ ಚರ್ಚಿಸಿದ್ದಾರೆ. ಆದರೆ, ಯಾವುದೇ ಸಾಕ್ಷ್ಯಾಧಾರ ಲಭ್ಯವಿಲ್ಲದ ಕಾರಣ ನ್ಯಾಯ ಸಿಗುವ ಭರವಸೆ ಇಲ್ಲ ಎಂದರು ಎಂದು ಹೇಳಿಕೊಂಡಿದ್ದಾಳೆ. ಈ ಪೋಸ್ಟ್​ ವೈರಲ್​ ಆಗುತ್ತಿದ್ದಂತೆ ಅನೇಕರು ತಮ್ಮ ನೋವನ್ನು ಹೇಳಿಕೊಂಡು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

    ನಾಯಕನೊಬ್ಬನ ಮುಖವಾಡ ಕಳಚಿದ ಇಶಾ ಕೊಪ್ಪಿಕರ್:​ ಕಹಿ ಘಟನೆ ಮೆಲಕು ಹಾಕಿದ ಓ ನನ್ನ ನಲ್ಲೆ

    ಸಮಂತಾರ ‘ಅರೇಬಿಕ್​ ಕುತು’ ರೀಲ್ಸ್​ ಹಿಂದಿನ ರಹಸ್ಯ ಬಯಲು: ಸಿನಿ ಇಂಡಸ್ಟ್ರಿಯಲ್ಲಿ ಇಷ್ಟೆಲ್ಲ ನಡೆಯುತ್ತಾ!?

    ಈ ಒಂದು ಕಾರಣಕ್ಕೆ ನಾನಿನ್ನೂ ಮದುವೆ ಆಗಿಲ್ಲ: ನಟ ಪ್ರಭಾಸ್ ಅಚ್ಚರಿಯ ಹೇಳಿಕೆ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts