More

    ತನ್ನ 10 ತಿಂಗಳ ಮಗುವನ್ನು ಕೆಳಗಿಟ್ಟು ಕಾಲುವೆಗೆ ಜಿಗಿದು ಮುಳುಗುತ್ತಿದ್ದ ಯುವಕನನ್ನು ರಕ್ಷಿಸಿದ ದಿಟ್ಟ ಮಹಿಳೆ!

    ಭೋಪಾಲ್​: ತನ್ನ 10 ತಿಂಗಳ ಮಗುವನ್ನು ನೆಲದ ಮೇಲೆ ಮಲಗಿಸಿ, ಕಾಲುವೆಗೆ ಜಿಗಿದು, ನೀರಿನಲ್ಲಿ ಮುಳುಗುತ್ತಿದ್ದ 25 ವರ್ಷದ ಯುವಕನನ್ನು ದಿಟ್ಟ ಮಹಿಳೆಯೊಬ್ಬರು ಸಕಾಲಕ್ಕೆ ರಕ್ಷಣೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ದುರಾದೃಷ್ಟವಶಾತ ಆತನ ಇನ್ನೊಬ್ಬ ಸ್ನೇಹಿತನನ್ನು ಕಾಪಾಡಲು ಇದೇ ಸಂದರ್ಭದಲ್ಲಿ ಸಾಧ್ಯವಾಗಲಿಲ್ಲ.

    ದಿಟ್ಟ ಮಹಿಳೆಯ ಹೆಸರು ರುಬಿನಾ ಕಂಜರಾ. 30 ವರ್ಷದ ರುಬಿನಾ, ಗುರುವಾರ ಬಟ್ಟೆ ಹೊಗೆಯಲು ತನ್ನ 10 ತಿಂಗಳ ಮಗುವನ್ನು ಹೊತ್ತುಕೊಂಡು ಕಾಲುವೆ ಬಳಿ ಹೋಗಿದ್ದರು. ಇದೇ ಸಂದರ್ಭದಲ್ಲಿ ಭೋಪಾಲ್ ಜಿಲ್ಲೆಯ ಕದೈಯಾಕಲಾ ಗ್ರಾಮದ ನಿವಾಸಿ 25 ವರ್ಷದ ರಾಜು ಅಹಿರ್ವಾರ್ ಮತ್ತು ಆತನ ಸ್ನೇಹಿತ ಜಿತೇಂದ್ರ ಅಹಿರ್ವಾರ್, ಹೊಲಕ್ಕೆ ಕೀಟನಾಶಕಗಳನ್ನು ಸಿಂಪಡಿಸಲು ನೆರೆಯ ಖಜುರಿಯಾ ಗ್ರಾಮಕ್ಕೆ ತೆರಳಿದ್ದರು ಎಂದು ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಬಿಪಿ ಸಿಂಗ್ ಹೇಳಿದ್ದಾರೆ.

    ಅಂದು ಮಧ್ಯಾಹ್ನ ಧಾರಾಕಾರ ಮಳೆ ಸುರಿದು, ಕೆಲಸಕ್ಕೆ ಹೋಗಿದ್ದ ಯುವಕರಿಬ್ಬರು ವಾಪಸ್ಸು ಬರುವಾಗ ಎರಡು ಗ್ರಾಮಗಳನ್ನು ಬೇರ್ಪಡಿಸುವ ಕಾಲುವೆ ಉಕ್ಕಿ ಹರಿಯುತ್ತಿರುವುದನ್ನು ನೋಡಿದರು. ಇಬ್ಬರೂ ಪರ್ಯಾಯ ಮಾರ್ಗದಲ್ಲಿ ತಮ್ಮ ಗ್ರಾಮವನ್ನು ತಲುಪಲು ಅವರು ಬೈಕ್‌ಗೆ ಕೀಲಿಗಳನ್ನು ಎಸೆಯಲು ಪ್ರಯತ್ನಿಸಿದರು. ಆದರೆ, ಕೀಗಳು ಇನ್ನೊಂದು ಬದಿಯನ್ನು ತಲುಪದೇ, ಹರಿಯುವ ನೀರಿನಲ್ಲಿ ಬಿದ್ದು ಕಣ್ಮರೆಯಾಯಿತು.

    ಇನ್ನೊಂದು ಕಡೆಯಿಂದ ಯುವಕರಿಗೆ ಎಚ್ಚರಿಕೆ ನೀಡಿದರೂ, ಇಬ್ಬರು ಕೂಡ ಕಾಲುವೆಯನ್ನು ದಾಟಲು ನಿರ್ಧರಿಸಿದರು. ಇದೆಲ್ಲವನ್ನೂ ರಬೀನಾ ಸಮೀಪದಲ್ಲೇ ನೋಡುತ್ತಿದ್ದಳು. ಅವಳು ರಾಜುವನ್ನು ನೋಡಿ ಎಚ್ಚರಿಕೆಯನ್ನು ನೀಡಿದ್ದರು. ಆದರೆ, ಯಾವುದೇ ಎಚ್ಚರಿಕೆಗೂ ಕ್ಯಾರೆ ಎನ್ನದ ಇಬ್ಬರು ಕಾಲುವೆ ದಾಟಲು ಮುಂದಾದರು. ಕಾಲವೆ ಒಳಗೆ ಇಳಿಯುತ್ತಿದ್ದಂತೆ ಸಮತೋಲನ ಕಳೆದುಕೊಂಡು ನೀರಿನಲ್ಲಿ ಮುಳುಗಲು ಆರಂಭಿಸಿದರು.

    ರಾಜು ದೀದಿ ದೀದಿ ಎಂದು ರುಬಿನಾ ಬಳಿ ಸಹಾಯಕ್ಕಾಗಿ ಕೂಗಿಕೊಂಡನು. ರಾಜು ಅಳುವ ಶಬ್ದವನ್ನು ಕೇಳಿ ತನ್ನ ಮಗುವನ್ನು ಅಲ್ಲಿಯೇ ನೆಲದ ಮೇಲೆ ಇಟ್ಟು ಓಡಿ ಬಂದ ರುಬಿನಾ, ಕಾಲುವೆ ಹಾರಿ, ರಾಜುನನ್ನು ಹೊರಗೆಳೆದುಕೊಂಡರು. ಆದರೆ, ಜೀತೇಂದ್ರನ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರಿಂದ ಆತನನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಮರು ದಿನ ಬೆಳಗ್ಗೆ ಆತನ ಮೃತದೇಹವನ್ನು ಜಿಲ್ಲಾ ಆಡಳಿತ ಹೊರ ತೆಗೆಸಿತು.

    ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಬೀನಾ, ಅವನು ‘ದೀದಿ ಬಚಾವೋ’ ಎಂದು ಕೂಗುತ್ತಿದ್ದನು, ನಾನು ಎರಡು ಬಾರಿ ಯೋಚಿಸಲಿಲ್ಲ, ಅವನು ನನ್ನ ಹಳ್ಳಿಯವನು, ನನಗೆ ಅವನು ಗೊತ್ತಿತ್ತು, ನನಗೂ ಈಜು ತಿಳಿದಿತ್ತು ಮತ್ತು ನಾನು ಅವನನ್ನು ಉಳಿಸುತ್ತೇನೆ ಎಂಬ ಭರವಸೆ ಇತ್ತು. ಹೀಗಾಗಿ ನಾನು ಪ್ರಯತ್ನಿಸಿ, ಬಚಾವ್​ ಮಾಡುವಲ್ಲಿ ಯಶಸ್ವಿಯಾದೆ. ಆದರೆ, ಆತನ ಸ್ನೇಹಿತನನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ರುಬಿನಾ ಹೇಳಿದ್ದಾರೆ.

    ಮಹಿಳೆಯ ಸಾಹಸವನ್ನು ಮೆಚ್ಚಿ ಪೊಲೀಸರು ನಗದು ಬಹುಮಾನವನ್ನು ನೀಡಿದ್ದಾರೆ. ರಬೀನಾ ಅವರ ಸಹೋದರ ಪೊಲೀಸರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅವರಿಗೂ ಸಹ ಬಹುಮಾನ ಬಂದಿದೆ. (ಏಜೆನ್ಸೀಸ್​)

    ಬೆಂಗಳೂರಲ್ಲಿ ಗಂಡನ ಕೊಂದು ಮಂಡ್ಯದಲ್ಲಿ ಸಿಕ್ಕಿಬಿದ್ದ ಪತ್ನಿ: ಪೊಲೀಸ್​ ತನಿಖೆಯಲ್ಲಿ ಕೊಲೆ ರಹಸ್ಯ ಬಯಲು

    ರವೀಂದರ್​ ಮಾಡಿದ್ದ ಮೆಸೇಜ್​ ನೋಡಿ, ಸ್ವಲ್ಪ ಸಮಯ ಯೋಚಿಸಿ ಮದ್ವೆಗೆ ಒಪ್ಪಿದೆ! ಆಸಕ್ತಿಕರ ಸಂಗತಿ ಬಿಚ್ಚಿಟ್ಟ ನಟಿ ಮಹಾಲಕ್ಷ್ಮೀ

    50 ಲಕ್ಷ ನಗದು, 1 ಕೆಜಿ ಚಿನ್ನ, ಅರ್ಧ ಕೆಜಿ ಬೆಳ್ಳಿ ಕೊಟ್ಟು ಅದ್ಧೂರಿ ಮದ್ವೆಯಾದ ವೈದ್ಯೆಗೆ ಎರಡೇ ತಿಂಗಳಲ್ಲಿ ಬಿಗ್​ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts