More

    ಕೃಷಿ ಕಾಯ್ದೆಗಳನ್ನು ಹಿಂಪಡೆದ ಕೇಂದ್ರದ ನಿರ್ಧಾರಕ್ಕೆ ಪಕ್ಷಾತೀತ ಮೆಚ್ಚುಗೆ: ನ. 19 ದೇಶದ ರೈತರ ಗೆಲುವೆಂದ ಕಾಂಗ್ರೆಸ್​

    ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಲ್ಲ ಪಕ್ಷಗಳ ನಾಯಕರು ಪ್ರಧಾನಿ ಮೋದಿ ನಡೆಯನ್ನು ಸ್ವಾಗತಿಸಿದ್ದು, ನವೆಂಬರ್​ 19 ಅನ್ನು ದೇಶದ ರೈತರ ಗೆಲುವು ಎಂದು ಕಾಂಗ್ರೆಸ್​ ಕರೆದಿದೆ.

    ರೈತರಿಗೆ ಮಾರಕವಾಗಿದ್ದ ಕಪ್ಪು ಕಾನೂನುಗಳನ್ನು ರದ್ದುಗೊಳಿಸುವುದು ಸರಿಯಾದ ದಿಕ್ಕಿನಲ್ಲಿ ಇಟ್ಟ ಒಂದು ಹೆಜ್ಜೆಯಾಗಿದೆ. ಕಿಸಾನ್ ಮೋರ್ಚಾದ ಸತ್ಯಾಗ್ರಹಕ್ಕೆ ಐತಿಹಾಸಿಕ ಯಶಸ್ಸು ಸಿಕ್ಕಿದೆ. ನಿಮ್ಮ ತ್ಯಾಗವು ಲಾಭಾಂಶವನ್ನು ನೀಡಿದೆ. ಪಂಜಾಬ್‌ನಲ್ಲಿ ಕೃಷಿ ಪುನರುಜ್ಜೀವನವು ಪಂಜಾಬ್​ ಸರ್ಕಾರದ ಪ್ರಮುಖ ಆದ್ಯತೆಯಾಗಿರಬೇಕು ಎಂದು ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ಹೇಳಿದ್ದಾರೆ.

    ಇಂದು ಬೆಳಕಿನ ದಿನದಂದು ಎಷ್ಟು ದೊಡ್ಡ ಸುದ್ದಿ ಸಿಕ್ಕಿತು. ಎಲ್ಲ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಪ್ರತಿಭಟನೆಯಲ್ಲಿ ಹುತಾತ್ಮರಾದ ರೈತರು ಅಮರವಾಗಿರುತ್ತಾರೆ. ಕೃಷಿ ಮತ್ತು ರೈತರನ್ನು ಉಳಿಸಲು ಈ ದೇಶದ ರೈತರು ತಮ್ಮ ಜೀವನವನ್ನು ಹೇಗೆ ಸಾಲಿನಲ್ಲಿ ಇಟ್ಟಿದ್ದಾರೆ ಎಂಬುದನ್ನು ಮುಂಬರುವ ಪೀಳಿಗೆಗಳು ನೆನಪಿಸಿಕೊಳ್ಳುತ್ತವೆ. ನನ್ನ ದೇಶದ ರೈತರಿಗೆ ನಾನು ನಮಸ್ಕರಿಸುತ್ತೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅಭಿಪ್ರಾಯ ವ್ಯಕ್ತಪಡಿಸಿದರು.

    ಸತ್ಯಾಗ್ರಹದಿಂದ ದೇಶದ ಅನ್ನದಾತರು ದುರಹಂಕಾರದ ತಲೆಯನ್ನು ತಗ್ಗಿಸಿದ್ದಾರೆ. ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಅಭಿನಂದನೆಗಳು ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

    ಕೇಂದ್ರ ಸರ್ಕಾರದಿಂದ ಮೂರು ಕೃಷಿ ಕಾನೂನು ವಾಪಸ್​: ಪ್ರಧಾನಿ ಮೋದಿಯಿಂದ ಮಹತ್ವದ ಘೋಷಣೆ

    ಮೊದಲ ದಿನವೇ ಎಡವಿತು ಪೇಟಿಎಂ; ದೇಶದ ಅತಿದೊಡ್ಡ ಐಪಿಒಕ್ಕೆ ಭಾರಿ ಹೊಡೆತ, ಷೇರು ಮೌಲ್ಯ ಶೇ. 28 ಕುಸಿತ

    ಇಂದು ಶತಮಾನದ ಸುದೀರ್ಘ ಚಂದ್ರಗ್ರಹಣ; ಭಾರತದ ಈಶಾನ್ಯ ರಾಜ್ಯಗಳ ಕೆಲ ಪ್ರದೇಶದಲ್ಲಿ ಮಾತ್ರ ಖಗೋಳ ವಿಸ್ಮಯ ಗೋಚರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts