More

    ಕಾಬುಲ್​ ಏರ್​ಪೋರ್ಟ್​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿ: ಐಸಿಸ್​-ಕೆ ವಿರುದ್ಧ ಗುಡುಗಿದ ಜೋ ಬೈಡೆನ್​

    ವಾಷಿಂಗ್ಟನ್​: ಕಾಬುಲ್​ ಏರ್​ಪೋರ್ಟ್​ನಲ್ಲಿ ನಡೆದ ಆತ್ಮಾಹುತಿ ಬಾಂಬ್​ ದಾಳಿಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಸ್ಫೋಟ ಮಾಡಿದವರನ್ನು ಸುಮ್ಮನೇ ಬಿಡುವುದಿಲ್ಲ. ಹುಡುಕಿ ಹೊಡೆದು ಹಾಕುತ್ತೇವೆ ಎನ್ನುವ ಮೂಲಕ ಪ್ರತೀಕಾರದ ಮಾತುಗಳನ್ನಾಡಿದ್ದಾರೆ.

    ಕಾಬುಲ್​ ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್​ ದಾಳಿಯನ್ನು ಅಮೆರಿಕ ಸೇನೆ 13 ಯೋಧರು ಹಾಗೂ 60 ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ. ದಾಳಿಯ ಹೊಣೆಯನ್ನು ಐಸಿಸ್​-ಕೆ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಅಲ್ಲದೆ, ಉಗ್ರರ ಗುರಿ ಅಮೆರಿಕ ಸೇನೆ ಎಂಬುದು ದಾಳಿಯ ಬಳಿಕ ಸ್ಪಷ್ಟವಾಗಿ ಗೊತ್ತಾಗಿದೆ. ಇದರ ಬೆನ್ನೇಲೆ ಅಮೆರಿಕ ಐಸಿಸ್​ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.

    ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡಿರುವ ಬೈಡೆನ್​, ನಾವು ನಿಮ್ಮನ್ನು ಕ್ಷಮಿಸುವುದಿಲ್ಲ, ಹಾಗೇ ಮರೆಯುವುದಿಲ್ಲ. ನಿಮ್ಮನ್ನು ಹುಡುಕಿ ಹೊಡೆಯುತ್ತೇವೆ. ನೀವು ಬೆಲೆ ತೆರಲೇಬೇಕು ಎಂದು ವೈಟ್​ ಹೌಸ್​ನಲ್ಲಿ ಹೇಳಿದರು.

    ನೀವೇ ಏನೇ ಮಾಡಿದರೂ ಜನರ ಸ್ಥಳಾಂತರವನ್ನು ಮಾತ್ರ ನಿಲ್ಲಿಸುವುದಿಲ್ಲ. ಐಸಿಸ್​-ಕೆ ವಿರುದ್ಧ ದಾಳಿ ನಡೆಸಲು ಯೋಜನೆ ರೂಪಿಸುವಂತೆ ನನ್ನ ಕಮಾಂಡರ್​ಗಳಿಗೆ ಹೇಳಿದ್ದೇನೆ. ಐಸಿಸ್​-ಕೆ ಆಸ್ತಿ, ನಾಯಕರು ಮತ್ತು ಇತರೆ ಸೌಲಭ್ಯಗಳ ಮೇಲೆ ದಾಳಿ ಮಾಡಲು ಸರಿಯಾದ ಯೋಜನೆ ಸಿದ್ಧಪಡಿಸಲು ಆದೇಶಿಸಿದ್ದೇನೆ. ನಾವು ನಮ್ಮ ಸಮಯದಲ್ಲಿ, ನಾವು ಆಯ್ಕೆ ಮಾಡುವ ಸ್ಥಳದಲ್ಲಿ ಬಲ ಮತ್ತು ನಿಖರತೆಯಿಂದ ಪ್ರತಿಕ್ರಿಯಿಸುತ್ತೇವೆ ಎಂದು ಬೈಡೆನ್​ ಎಚ್ಚರಿಕೆ ನೀಡಿದ್ದಾರೆ.

    ಈಗ ಆಫ್ಘಾನ್​ ನಿಯಂತ್ರಿಸುತ್ತಿರುವ ತಾಲಿಬಾನ್ ಜತೆ ಐಸಿಸ್-ಕೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಬೈಡೆನ್​ ಇದೇ ಸಂದರ್ಭದಲ್ಲಿ ಹೇಳಿದರು. (ಏಜೆನ್ಸೀಸ್​)

    ಕಾಬುಲ್​ ಏರ್​ಪೋರ್ಟ್​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿಗೆ 60ಕ್ಕೂ ಹೆಚ್ಚು ಬಲಿ: ತಾಲಿಬಾನ್​ ಬಳಿಕ ಐಸಿಸ್ ಅಟ್ಟಹಾಸ​

    ಪಾಕ್-ತಾಲಿಬಾನ್ ದೋಸ್ತಿ: ಅಣ್ವಸ್ತ್ರ ಉಗ್ರರ ವಶವಾದರೆ ವಿಶ್ವಕ್ಕೆ ದೊಡ್ಡ ಪ್ರಮಾದ

    ಮೈಸೂರು ಗ್ಯಾಂಗ್​ರೇಪ್​ ಪ್ರಕರಣ: ತನಿಖಾಧಿಕಾರಿಗಳಿಗೆ ತಲೆನೋವಾದ ಸಂತ್ರಸ್ತೆಯ ನಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts