More

    ಕರೊನಾ ಬಿಕ್ಕಟ್ಟಿನ ಸಮಯದಲ್ಲೂ ಯುಪಿ ಪೊಲೀಸರು 20 ಕೆಜಿ ರಸಗುಲ್ಲಾ ಸೀಜ್​ ಮಾಡಿದ್ದೇಕೆ?

    ಲಖನೌ: ಕರೊನಾ ನಿಯಮ ಮೀರಿ ರಸಗುಲ್ಲಾ ಹಂಚುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು 20 ಕೆಜಿ ರಸಗುಲ್ಲಾವನ್ನು ಇತ್ತೀಚೆಗೆ ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯಿತಿ ಚುನಾವಣೆ ಫಲಿತಾಂಶದ ಬಳಿಕ ಜನಸಮೂಹಕ್ಕೆ ರಸಗುಲ್ಲಾ ಹಂಚುತ್ತಿದ್ದ ವೇಳೆ ಹಪೂರ್​ ಪೊಲೀಸರು ಆರೋಪಿಗಳು ಬಂಧಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಪಂಚಾಯತ್ ಚುನಾವಣೆ ಮತ್ತು ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ ಮತ್ತು ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಗಳು ಕೋವಿಡ್ ಬಿಕ್ಕಟ್ಟಿನ ನಡುವೆಯೂ ನಡೆದಿವೆ. ಮೇ 2ರಂದು ನಡೆದ ಮತಎಣಿಕೆಯ ಬಳಿಕ ಯಾವುದೇ ವಿಜಯ ಮೆರವಣಿಗೆಗಳು ನಡೆಯದಂತೆ ನೋಡಿಕೊಳ್ಳಲು ಚುನಾವಣಾ ಆಯೋಗವು ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳನ್ನು ಕೇಳಿತ್ತು.

    ಆದಾಗ್ಯೂ ಉತ್ತರ ಪ್ರದೇಶದ ಹಪೂರ್​ನಲ್ಲಿ ಪಂಚಾಯಿತಿ ಚುನಾವಣೆಯ ಗೆಲುವಿನ ಬಳಿಕ ಜನಜಂಗುಳಿಯ ಮಧ್ಯೆ ರಸಗುಲ್ಲಾ ಹಂಚಲಾಗುತ್ತಿತ್ತು. ಈ ವಿಚಾರ ತಿಳಿದು ಕಾರ್ಯಾಚರಣೆಗೆ ಇಳಿದ ಹಪೂರ್​ ಪೊಲೀಸರು ಇಬ್ಬರನ್ನು ಬಂಧಿಸಿ ರಸಗುಲ್ಲಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಸಿಆರ್​ಪಿಸಿ 144 ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಮೇ 2ರಂದು ನಡೆದ ಮತಎಣಿಕೆಯಲ್ಲಿ ತೃಣಮೂಲ ಕಾಂಗ್ರೆಸ್​ ಭರ್ಜರಿ ಜಯ ದಾಖಲಿಸಿದ ಬಳಿಕ ಕೋಲ್ಕತ್ತಾದಲ್ಲಿ ನೂರಾರು ಟಿಎಂಸಿ ಬೆಂಬಲಿಗರು ಪಕ್ಷದ ಕಚೇರಿಯ ಹೊರಗೆ ಧ್ವಜಗಳನ್ನು ಬೀಸಿ ಸಂಭ್ರಮಿಸಿದ ವಿಡಿಯೋ ಜಾಲತಾಣದಲ್ಲಿ ಹರಿದಾಡಿತ್ತು. ಡಿಎಂಕೆ ಬೆಂಬಲಿಗರು ಸಹ ಕೋವಿಡ್​ ಬಿಕ್ಕಟ್ಟಿನ ನಡುವೆಯೂ ಸಂಭ್ರಮಾಚರಣೆ ಮಾಡಿದ್ದರು. (ಏಜೆನ್ಸೀಸ್​)

    ಬಾಯ್​ಫ್ರೆಂಡ್​ ಜತೆ ಬ್ರೇಕಪ್​, ಗರ್ಭಿಣಿ, ಆತ್ಮಹತ್ಯೆ ಯತ್ನ ಕುರಿತು ಸ್ಪಷ್ಟನೆ ನೀಡಿದ ಇಲಿಯಾನಾ!

    ವಿಶ್ವಗುರು ಅಂಕಣ: ಸುತ್ತಲೂ ನೆಗೆಟಿವ್, ಬೆಳ್ಳಿರೇಖೆ ಎಲ್ಲಿ ಹುಡುಕೋಣ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts