More

    ಬೇರೆ ಬೇರೆ ಕಂಪನಿಯ 2 ಡೋಸ್​ ಕರೊನಾ ಲಸಿಕೆ ಪಡೆದರೆ ಏನಾಗುತ್ತೆ? ಅಧ್ಯಯನದಲ್ಲಿ ಕಂಡುಬಂದಿದ್ದೇನು?

    ನವದೆಹಲಿ: ಕರೊನಾ ಲಸಿಕೆ ಪಡೆಯುವಾಗ ಒಂದೇ ಕಂಪನಿಯ ಎರಡು ಡೋಸ್ ಅನ್ನು 1 ತಿಂಗಳ ಅಂತರದಲ್ಲಿ​ ಪಡೆಯಬೇಕೆಂದು ಸರ್ಕಾರ ಈ ಹಿಂದೆಯೇ ಹೇಳಿದೆ. ಹಾಗಾದರೆ, ಬೇರೆ ಬೇರೆ ಕಂಪನಿಯ ಎರಡೂ ಲಸಿಕೆಯನ್ನು ಪಡೆದರೆ ಏನಾಗಬಹುದು ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುತ್ತದೆ. ಅದಕ್ಕೆ ನೂತನ ಅಧ್ಯಯನವೊಂದು ಉತ್ತರ ನೀಡಿದೆ.

    ಮುಂಚೂಣಿಯಲ್ಲಿರುವ ಎರಡು ಕೋವಿಡ್​ ಲಸಿಕೆಗಳ ಮಿಶ್ರಣದಿಂದ ರೋಗಿಗಳಲ್ಲಿ ಅಡ್ಡ ಪರಿಣಾಮ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ. ಆಯಾಸ ಮತ್ತು ತಲೆನೋವು ಸಾಮಾನ್ಯವಾಗಿರುತ್ತದೆ ಎಂದು ಅಧ್ಯಯನ ತಿಳಿಸಿದ್ದು, ಲಸಿಕೆಯ ಮಿಶ್ರಣವು ಕರೊನಾದಿಂದ ರಕ್ಷಿಸಲಿದೆಯೇ ಎಂಬುದು ಇನ್ನು ನಿಖರವಾಗಿ ತಿಳಿದುಬಂದಿಲ್ಲ.

    ಮೊದಲು ಅಸ್ಟ್ರಾಜೆನೆಕಾ ಲಸಿಕೆ ಪಡೆದ ನಾಲ್ಕು ವಾರಗಳ ನಂತರ ಫೈಜರ್​ ಲಸಿಕೆ ಪಡೆದವರಲ್ಲಿ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿದ್ದು, ಖುಷಿಯ ವಿಚಾರವೆಂದರೆ ಅಡ್ಡಪರಿಣಾಮ ಸೌಮ್ಯ ಸ್ವಭಾವದ್ದಾಗಿವೆ ಎಂದು ಆಕ್ಸ್​ಫರ್ಡ್​ ಯೂನಿವರ್ಸಿಟಿಯ ಸಂಶೋಧಕರು ಉಲ್ಲೇಖಿಸಿರುವ ವರದಿ ಲ್ಯಾನ್ಸೆಟ್​ ಮೆಡಿಕಲ್​ ಜರ್ನಲ್​ನಲ್ಲಿ ಪ್ರಕಟವಾಗಿದೆ.

    ಲಸಿಕೆ ಕೊರತೆಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕಂಡುಹಿಡಿಯಲು ಕಡಿಮೆ ಮತ್ತು ಮಧ್ಯಮ-ಆದಾಯದ ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿದ್ದು, ಸಂಶೋಧಕರು ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಎರಡು ವಿಭಿನ್ನ ಲಸಿಕೆ ಮಿಶ್ರಣದ ತಂತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಈ ವಿಚಾರದಲ್ಲಿ ಹೊಸ ಭರವಸೆ ಕಂಡುಕೊಂಡಿರುವ ಸಂಶೋಧಕರು ಎರಡು ಲಸಿಕೆ ಮಿಶ್ರಣವೂ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದಿದ್ದಾರೆ. ಹೀಗಾಗಿ ಸರ್ಕಾರಗಳಿಗೂ ಕೋವಿಡ್​ ನಿರ್ವಹಣೆಗೆ ಇದು ಧನಾತ್ಮಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಉದಾಹರಣೆಗೆ ಫ್ರಾನ್ಸ್​ನಲ್ಲಿ ಮೊದಲು ಆಅಸ್ಟ್ರಾಜೆನೆಕಾ ಪಡೆದ ರೋಗಿಗಳಿಗೆ ನಂತರ ವಯಸ್ಸಾದವರನ್ನು ಫೈಜರ್ ಲಸಿಕೆ​ ನೀಡಲಾಗಿದೆ. ಇದರಲ್ಲಿ ಒಂದೇ ಲಸಿಕೆ ಪಡೆದವರಿಗಿಂತ ಹೆಚ್ಚು ಅಡ್ಡಪರಿಣಾಮಗಳನ್ನು ಎದುರಿಸಿದ್ದಾರೆ. ಅದರಲ್ಲೂ ಆಯಾಸವೇ ಹೆಚ್ಚು. ಆದರೆ, ಆ ಅಡ್ಡಪರಿಣಾಮಗಳು ಹೆಚ್ಚು ದಿನ ಉಳಿಯದೇ ಬಹುಬೇಗನೇ ಕಣ್ಮರೆಯಾದವು ಎಂಬುದು ಅಧ್ಯಯನದಲ್ಲಿ ತಿಳಿದುಬಂದಿದೆ. (ಏಜೆನ್ಸೀಸ್​)

    ಫ್ರೆಂಡ್​ ಜತೆ ಬೀಚ್​ಗೆ ಹೋದ ಯುವತಿಯ ಮೇಲೆ ಗ್ಯಾಂಗ್​ರೇಪ್​: ಮತ್ತೆ ಆಸೆ ತೀರಿಸುವಂತೆ ಕೇಳಿದ ಕಾಮುಕ

    ವೈರಲ್​ ಆಗ್ತಿದೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​-ನಟಿ ರೇಖಾ ಕುರಿತ ಸ್ವಾರಸ್ಯಕರ ಸುದ್ದಿ!

    ಲಸಿಕೆ ಪಡೆಯಲು ಹೋದ ಆಟೋ ಡ್ರೈವರ್​… ಮನೆಗೆ ವಾಪಸಾದಾಗ ಅಲ್ಮೆರಾ ಖಾಲಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts