More

    VIDEO| ಅಂಪೈರ್​ ವಿರುದ್ಧ ಕೀರನ್​ ಪೊಲಾರ್ಡ್​ ವಿಚಿತ್ರ ಪ್ರತಿಭಟನೆ: ವೈರಲ್​ ಆಯ್ತು ವಿಡಿಯೋ..!

    ನವದೆಹಲಿ: ಸ್ಫೋಟಕ ಆಟದಿಂದ ಮಾತ್ರವಲ್ಲ ತಮ್ಮ ವಿಚಿತ್ರ ವರ್ತನೆಯಿಂದಲೂ ವೆಸ್ಟ್​ಇಂಡಿಸ್​ ದಾಂಡಿಗ ಕೀರಾನ್​ ಪೋಲಾರ್ಡ್ ಆಗಾಗ ಸುದ್ದಿಯಲ್ಲಿರುತ್ತಾರೆ. ಐಪಿಎಲ್​ನಲ್ಲಿ ಬಾಯಿಗೆ ಟೇಪ್​ ಹಾಕಿಕೊಂಡು ಹಾಗೂ ಬೌಲರ್​ ಕಡೆಗೆ ಬ್ಯಾಟ್​ ಬೀಸಿ ಸುದ್ದಿಯಾಗಿದ್ದರು. ಪೊಲಾರ್ಡ್​ ಅವರ ಅನೇಕ ನಡವಳಿಕೆಗಳು ವೀಕ್ಷಕರಿಗೆ ನಗು ತರಿಸಿದರೆ, ಕೆಲವರಿಗೆ ಮುಜುಗರ ಉಂಟು ಮಾಡುತ್ತಿದೆ. ಅದೇ ರೀತಿಯ ಘಟನೆ ಕೆರಿಬಿಯನ್​ ಪ್ರೀಮಿಯರ್​ ಲೀಗ್​ (ಸಿಪಿಎಲ್​)ನಲ್ಲೂ ಆಗಿದೆ.

    ಸಿಪಿಎಲ್​ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ಕೀರನ್​ ಪೊಲಾರ್ಡ್​ ಮಂಗಳವಾರ ನಡೆದ ಪಂದ್ಯದ ವೇಳೆ ಮೈದಾನದಲ್ಲಿಯೇ ಎಂದಿನಂತೆ ತಮ್ಮದೇ ಶೈಲಿಯಲ್ಲಿ ವಿಚಿತ್ರ ಹಾಗೂ ವಿನೂತನ ಪ್ರತಿಭಟನೆ ನಡೆಸಿದರು. ಎದುರಾಳಿ ಸೆಂಟ್​ಲೂಸಿಯಾ ಕಿಂಗ್ಸ್​ ತಂಡದ ಆಟಗಾರ ವಹಾಬ್​ ರಿಯಾಜ್ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್​ಮನ್​ ಟಿಮ್​ ಸೈಫರ್ಟ್​ಗೆ ಎಸೆದ ಚೆಂಡು ಸ್ಟಂಪ್​ನ ಹೊರಭಾಗಕ್ಕೆ ಹೋಯಿತು. ಆ ಬಾಲನ್ನು ಹೊಡೆಯುವ ಪ್ರಯತ್ನ ಮಾಡಿದಾದರೂ ಸೈಫರ್ಟ್​ ಕೈಯಲ್ಲಿ ಆಗಲಿಲ್ಲ.

    ಬಾಲ್​​ ಸ್ಟಂಪ್​ನಿಂದ ಹೊರಗಡೆ ಇದ್ದರಿಂದ ಸಜಜವಾಗಿಯೇ ಅಂಪೈರ್​ ವೈಡ್​ ಎಂಬ ತೀರ್ಮಾನ ನೀಡಬಹುದು ಅಂತಾ ಸೈಫರ್ಟ್​ ಮತ್ತು ಪೊಲಾರ್ಡ್​ ಅಂದುಕೊಂಡರು. ಆದರೆ, ಅಂಪೈರ್​ ಇಬ್ಬರನ್ನು ನಿರಾಸೆಗೊಳಿಸಿದರು. ಆ ಎಸೆತವನ್ನು ವೈಡ್​ ಎಂದು ಪರಿಗಣಿಸಲಿಲ್ಲ. ಇದರಿಂದ ಅಸಮಾಧಾನಗೊಂಡ ನಾನ್​ಸ್ಟ್ರೈಕ್​ ವಿಭಾಗದಲ್ಲಿ ನಿಂತಿದ್ದ ಪೊಲಾರ್ಡ್​ ಏನೂ ಮಾತನಾಡದೇ ಅಂಪೈರ್​ನಿಂದ ಬಹಳ ಅಂತರ ಕಾಯ್ದುಕೊಳ್ಳುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಪಂದ್ಯದ ವಿಚಾರಕ್ಕೆ ಬಂದರೆ ಪೊಲಾರ್ಡ್​​ ಮತ್ತು ಸೈಫರ್ಟ್​ ಐದನೇ ವಿಕೆಟ್​ಗೆ 78 ರನ್​ ಜತೆಯಾಟವಾಡುವ ಮೂಲಕ ಸೆಂಟ್​ಲೂಸಿಯಾ ಕಿಂಗ್ಸ್​ ತಂಡಕ್ಕೆ 158 ರನ್​ ಗುರಿ ನೀಡಿದರು. ಪೊಲಾರ್ಡ್​ 26 ಎಸೆತಗಳಲ್ಲಿ 41 ರನ್​ ಕಲೆಹಾಕಿದ್ರೆ ಸೈಫರ್ಟ್​ 25 ಎಸೆತದಲ್ಲಿ 37 ರನ್​ ಗಳಿಸಿದರು. ಗುರಿ ಬೆನ್ನತ್ತಿದ ಎದುರಾಳಿ ತಂಡ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131 ರನ್​ ಗಳಿಸುವ ಮೂಲಕ​ ಟ್ರಿನ್‌ಬಾಗೊ ನೈಟ್ ರೈಡರ್ಸ್​ ಎದುರು ಸೋಲಿಗೆ ಶರಣಾಯಿತು. (ಏಜೆನ್ಸೀಸ್​)

    MLA ಪುತ್ರನ ಡೆಡ್ಲಿ ಕಾರು ಅಪಘಾತಕ್ಕೆ ಕಾರಣವಾಯ್ತಾ ನೀರಿನ ಬಾಟಲ್​? ಇಲ್ಲಿದೆ ಶಾಕಿಂಗ್​ ಸಂಗತಿ..!

    MLA ಪುತ್ರನ ಕಾರು ಅಪಘಾತ: ಸಾವಿಗೂ ಮುನ್ನ ತರಾತುರಿಯಲ್ಲಿ ಪ್ರೇಯಸಿ ಖರೀದಿಸಿದ್ದೇನು?

    ಮಹಿಳೆಯರೇ, ಸ್ತನ ಕ್ಯಾನ್ಸರ್​ ಬಗ್ಗೆ ಎಚ್ಚರ ವಹಿಸಿ! ರೋಗಲಕ್ಷಣ, ತಪಾಸಣೆ, ಚಿಕಿತ್ಸೆ… ವಿವರಗಳು ಇಲ್ಲಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts