More

    VIDEO| ಭೂತದ ಹಿಂದೆ ಬಿದ್ದ ವಾರಣಾಸಿ ಪೊಲೀಸರು: ಏರಿಯಾ ಪೂರ್ತಿ ಗಸ್ತು, ದೆವ್ವದ ವಿಡಿಯೋ ವೈರಲ್​

    ವಾರಣಾಸಿ: ಅಡಿಯಿಂದ ಮುಡಿಯವರೆಗೂ ಬಿಳಿ ಬಟ್ಟೆ ಧರಿಸಿ ಕಟ್ಟಡದ ಮೇಲೆ ಕಾಣಿಸಿಕೊಂಡ ಭೂತದ ಆಕಾರವನ್ನು ನೋಡಿ ಸ್ಥಳೀಯರು ಭಯಭೀತರಾದ ಘಟನೆ ವಾರಣಾಸಿಯಲ್ಲಿ ನಡೆದಿದ್ದು, ಇದೀಗ ಪೊಲೀಸರು ಭೂತದ ಹಿಂದೆ ಬಿದ್ದಿದ್ದಾರೆ.

    ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಪರಿಚಿತ ದುಷ್ಕರ್ಮಿಯ ವಿರುದ್ಧ ಭೇಲುಪುರ್​ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ.

    ಈ ಬಗ್ಗೆ ಮಾತನಾಡಿರುವ ಭೇಲುಪುರ್​ ಠಾಣೆಯ ಇನ್ಸ್‌ಪೆಕ್ಟರ್ ರಮಾಕಾಂತ್ ದುಬೆ, ವೈರಲ್​ ವಿಡಿಯೋ ನೋಡಿದ ಜನರಲ್ಲಿ ಭಯವಿದೆ. ಅವರ ದೂರಿನ ಮೇರೆಗೆ ನಾವು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಪ್ರದೇಶದಲ್ಲಿ ಗಸ್ತು ತೀವ್ರಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.

    ವಾರಣಾಸಿಯ ಬಡಿಗಾಬಿ ಏರಿಯಾದ ವಿಡಿಎ ಕಾಲನಿಯಲ್ಲಿ ಭೂತ ಕಾಣಿಸಿಕೊಂಡಿದೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಅಲ್ಲದೆ, ಅದೇ ರೀತಿಯ ಅನೇಕ ವಿಡಿಯೋಗಳು ಹರಿದಾಡಲು ಆರಂಭಿಸಿದಾಗ, ಜನರು ಇನ್ನಷ್ಟು ಭಯಭೀತರಾಗಿ ರಾತ್ರಿ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

    ಕೆಲ ಸ್ಥಳೀಯರು ನಿಜವಾದ ವಿಡಿಯೋ ಎಂದು ವಾದಿಸಿದರೆ, ಇನ್ನು ಕೆಲವು ಅದು ನಕಲಿ ವಿಡಿಯೋ ಎನ್ನುತ್ತಿದ್ದಾರೆ. ಆದರೂ ಜನರು ತುಂಬಾ ಭಯಭೀತರಾಗಿದ್ದು, ದೂರು ದಾಖಲಿಸಿರುವುದಾಗಿ ಸ್ಥಳೀಯ ನಿವಾಸಿ ಸುರೇಶ್​ ಸಿಂಗ್​ ಹೇಳಿದ್ದಾರೆ.

    ವಾರಣಾಸಿಯಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ನೀವ್ಯಾರು ಭಯಭೀತರಾಗಬೇಡಿ ಎಂದು ಡಿಸಿಪಿ ಜನರಲ್ಲಿ ಮನವಿ ಮಾಡಿದ್ದಾರೆ ಮತ್ತು ಅಂತಹ ವೈರಲ್ ವೀಡಿಯೊಗಳನ್ನು ಫಾರ್ವರ್ಡ್ ಮಾಡದಂತೆ ಕೇಳಿಕೊಂಡಿದ್ದಾರೆ.

    ಇದೀಗ ಪ್ರಕರಣ ದಾಖಲಿಸಿಕೊಂಡು ಭೂತದ ಹಿಂದೆ ಬಿದ್ದಿರುವ ಪೊಲೀಸರು ವಿಡಿಯೋದಲ್ಲಿರುವ ಸ್ಥಳ ಸೇರಿದಂತೆ ಆಸುಪಾಸಿನಲ್ಲಿ ಗಸ್ತು ತಿರುಗುತ್ತಿದ್ದಾರೆ. ಯಾರೋ ದುಷ್ಕರ್ಮಿಗಳು ಬೇಕು ಅಂತಾನೇ ಭೂತದ ರೀತಿ ಬಿಳಿ ಬಟ್ಟೆ ಧರಿಸಿ, ರಾತ್ರಿ ಸಮಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಭಯದ ವಾತಾವರಣ ಉಂಟು ಮಾಡುತ್ತಿದ್ದಾರೆ ಎಂದುಮ ತಿಳಿದುಬಂದಿದ್ದು, ಭೂತದ ಆಕಾರದ ಹಿಂದಿರುವ ಮುಖ ಯಾರದ್ದು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. (ಏಜೆನ್ಸೀಸ್​)

    ದೇಶದಲ್ಲಿ PFI ಬ್ಯಾನ್: ಮುಂದಿನ ಕ್ರಮಗಳೇನು? ಕಾರ್ಯಕರ್ತರು, ಮುಖಂಡರ ಕತೆ ಏನು? ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

    ಪಿಎಫ್ಐ ನಿಷೇಧ, ವಿಚ್ಛಿದ್ರಕಾರಿ ಶಕ್ತಿಗಳಿಗೆ ಸ್ಪಷ್ಟ ಸಂದೇಶ: ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ

    ಸರ್ಕಾರಿ ಸಂಬಳ ಸಾಲ್ತಿಲ್ವಂತೆ: ಈ ಅಗ್ನಿಶಾಮಕ ಸಿಬ್ಬಂದಿಗೆ ತಿಂಗಳಿಗಿಷ್ಟು ಬೇಕೇ ಬೇಕಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts