More

    ಏನಪ್ಪಾ ಇಷ್ಟುದ್ದ ಇದ್ದೀಯಾ! ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ವಾರ್ನರ್​-ಶಾಹೀನ್​ ಫನ್ನಿ ವಿಡಿಯೋ

    ಲಾಹೋರ್​: ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ ಮತ್ತು ಪಾಕಿಸ್ತಾನ ಬೌಲರ್​ ಶಾಹೀನ್ ಶಾ​ ಅಫ್ರಿದಿ ಮೈದಾನದಲ್ಲಿ ಇದ್ರೆ ಅಭಿಮಾನಿಗಳಿಗಂತೂ ಯಾವುದೇ ಕಾರಣಕ್ಕೂ ಫನ್​ ಮಿಸ್​ ಆಗುವುದೇ ಇಲ್ಲ. ಇಬ್ಬರು ಕೂಡ ಆಗಾಗ ವಿಭಿನ್ನವಾಗಿ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಲೇ ಇರುತ್ತಾರೆ. ಪ್ರಸ್ತುತ ಆಸಿಸ್​ ಮತ್ತು ಪಾಕ್​ ನಡುವೆ ಲಾಹೋರ್​ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್​ ಪಂದ್ಯದಲ್ಲೂ ಇಂಥದ್ದೊಂದು ಸನ್ನಿವೇಶ ಜರುಗಿದೆ.

    ಟೆಸ್ಟ್​ ಪಂದ್ಯದ ಮೂರನೇ ದಿನದ ಕೊನೆಯ ಎಸೆತದಲ್ಲಿ ವಾರ್ನರ್​ ಮತ್ತು ಶಾಹೀನ್​ ಮುಖಾಮುಖಿಯಾದ ರೀತಿ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದೆ. ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್​ನ ಮೂರನೇ ಓವರ್​ನಲ್ಲಿ ಈ ಪ್ರಸಂಗ ಜರುಗಿದೆ. ಮೂರನೇ ದಿನದ ಕೊನೆಯ ಎಸೆತವನ್ನು ಶಾಹೀನ್​, ವಾರ್ನರ್​ಗೆ ಎಸೆಯುತ್ತಾರೆ. ಅದನ್ನು ವಾರ್ನರ್​ ಡಿಫೆಂಡ್​ ಮಾಡುತ್ತಾರೆ. ಈ ವೇಳೆ ಚೆಂಡು ವಾರ್ನರ್​ ಅವರ ಬಲಗಾಲಿನ ಕೆಳಗೆ ಬೀಳುತ್ತದೆ. ಬಳಿಕ ಶಾಹೀನ್​ ವಾರ್ನರ್​ ಬಳಿ ಓಡಿಬಂದು ನಿಲ್ಲುತ್ತಾರೆ. ವಾರ್ನರ್​ ಕೂಡ ಶಾಹೀನ್​ ಕಡೆ ನಡೆದು ಬರುತ್ತಾರೆ. ಈ ವೇಳೆ ಇಬ್ಬರು ಮುಖಾಮುಖಿಯಾಗುತ್ತಾರೆ. ವಾರ್ನರ್​ ತುಂಬಾ ಹತ್ತಿರ ಬಂದು ಶಾಹೀನ್​ ಮೈಗೆ ಮೈ ತಾಗಿಸಿ ನಿಂತು ಮುಖ ಮೇಲೆ ಮಾಡಿ ಏನಪ್ಪಾ ಇಷ್ಟುದ್ದು ಇದಿಯಾ ಎನ್ನುವಂತೆ ಶಾಹೀನ್​ರನ್ನು ನೋಡುತ್ತಾರೆ. ಬಳಿಕ ಇಬ್ಬರು ನಗುತ್ತಾ ಮೈದಾನದಿಂದ ಹೊರ ಹೋಗುತ್ತಾರೆ. ಮೊದಲೇ ಶಾಹೀನ್​ ತುಂಬಾ ಎತ್ತರ ಇರುವುದರಿಂದ ಈ ಸನ್ನಿವೇಶವನ್ನು ನೋಡಿ ಮೈದಾನದಲ್ಲಿದ್ದ ಅಭಿಮಾನಿಗಳು ನಗೆಗಡಲಲ್ಲಿ ತೇಲಿದರು.

    ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, 3 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಾರ್ನರ್​ ಮತ್ತು ಶಾಹೀನ್​ ಫನ್​ ನೋಡಿದ ಪ್ಯಾಟ್ ಕಮ್ಮಿನ್ಸ್ ಮತ್ತು ಮಾರ್ನಸ್ ಲ್ಯಾಬುಶೇನ್​ ಡ್ರೆಸ್ಸಿಂಗ್​ ಕೋಣೆಯಲ್ಲಿ ನಗುತ್ತಿರುವ ದೃಶ್ಯ ಟೆಲಿವಿಷನ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

    ಮೂರನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 391 ರನ್ ಗಳಿಸಿತ್ತು. ಆಸಿಸ್​ ಉಸ್ಮಾನ್ ಖವಾಜಾ 91 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನವನ್ನು 268ಕ್ಕೆ ಆಲೌಟ್ ಮಾಡಿದ ನಂತರ ಆಸ್ಟ್ರೇಲಿಯಾ 134 ರನ್‌ ಮುನ್ನಡೆ ಕಾಯ್ದುಕೊಂಡಿದೆ. ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. (ಏಜೆನ್ಸೀಸ್​)

    ದಿ ಕಾಶ್ಮೀರ್​ ಫೈಲ್ಸ್​ ಚಿತ್ರದ ಬಗ್ಗೆ ಟ್ವೀಟ್​ ಮಾಡಿದ ಐಎಎಸ್​ ಅಧಿಕಾರಿಗೆ ಶಾಕ್​ ಕೊಟ್ಟ ಸರ್ಕಾರ!

    ನಟ ಸಿಂಬು ಕಾರು ಚಾಲಕನ ಎಡವಟ್ಟಿಗೆ ವಿಕಲಚೇತನ ದುರಂತ ಸಾವು: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

    ಪತ್ನಿ ಜತೆ ಬಲವಂತವೂ ಅತ್ಯಾಚಾರ; ಹೈಕೋರ್ಟ್ ಏಕಸದಸ್ಯ ಪೀಠದ ಮಹತ್ವದ ತೀರ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts