More

    ರಣಾಂಗಣವಾದ ಕ್ರೀಡಾಂಗಣ: ಸೋಲಿನ ಹತಾಶೆ, ಪಾಕ್​ ಫ್ಯಾನ್ಸ್​ಗೆ ಆಫ್ಘಾನ್​ ಅಭಿಮಾನಿಗಳಿಂದ ಕುರ್ಚಿ ಏಟು​

    ನವದೆಹಲಿ: ಏಷ್ಯಾ ಕಪ್​ನಲ್ಲಿ ಪಂದ್ಯ ಸೋತಿದ್ದಕ್ಕೆ ಹತಾಶರಾದ ಅಫ್ಘಾನಿಸ್ತಾನದ ಕ್ರಿಕೆಟ್​ ಪ್ರೇಮಿಗಳು ಪಾಕಿಸ್ತಾನದ ಕ್ರಿಕೆಟ್​ ಪ್ರೇಮಿಗಳ ಮೇಲೆ ಆಕ್ರೋಶ ಹೊರ ಹಾಕಿ, ಕ್ರೀಡಾಂಗಣದಲ್ಲಿ ಕುರ್ಚಿಗಳನ್ನು ಕಿತ್ತೆಸೆದು, ಬಡಿದಾಡಿಕೊಂಡಿರುವ ಘಟನೆ ನಡೆದಿದೆ.

    ನಿನ್ನೆ (ಸೆ.07) ಶಾರ್ಜಾದ ಕ್ರಿಕೆಟ್​ ಸ್ಟೇಡಿಯಂನಲ್ಲಿ ಪಾಕಿಸ್ತಾನ ಮತ್ತು ಆಫ್ಘಾನ್​ ನಡುವೆ ನಡೆದ ಪಂದ್ಯವು ಕೊನೆಯವರೆಗೂ ಕ್ರಿಕೆಟ್​ ಪ್ರೇಮಿಗಳ ಕುತೂಹಲವನ್ನು ಹಿಡಿದಿಟ್ಟಿತ್ತು. ಕೊನೆಯ ಓವರ್​ನ ಕೊನೆಯ ವಿಕೆಟ್​ನಲ್ಲಿ ಪಾಕ್​ ವೇಗಿ ನಾಸೀಮ್​ ಶಾ ಎರಡು ಸಿಕ್ಸರ್​ ಬಾರಿಸುವ ಮೂಲಕ ಆಫ್ಘಾನ್​ ಕಡೆಯಿದ್ದ ಪಂದ್ಯವನ್ನು ಪಾಕ್​ ಕಡೆ ತಿರುಗಿಸಿದರು. ಇದರ ಬೆನ್ನಲ್ಲೇ ಹತಾಶರಾದ ಆಫ್ಘಾನ್​ ಕ್ರಿಕೆಟ್​ ಪ್ರೇಮಿಗಳು ಕ್ರೀಡಾಂಗಣದಲ್ಲಿದ್ದ ಕುರ್ಚಿಗಳನ್ನು ಕಿತ್ತು ಎಸೆದಾಡಿದರು. ಅಲ್ಲದೆ, ಅದೇ ಕುರ್ಚಿಯಲ್ಲಿ ಪಾಕ್​ ಅಭಿಮಾನಿಗಳಿಗೂ ಬಾರಿಸಿದರು.

    ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್​ ಅಖ್ತರ್​ ಟ್ವೀಟ್​ ಮಾಡಿದ್ದು, ಆಫ್ಘಾನ್ ಅಭಿಮಾನಿಗಳು ಏನು ಮಾಡುತ್ತಿದ್ದಾರೆ ನೋಡಿ. ಈ ಹಿಂದೆಯು ಹಲವಾರು ಬಾರಿ ಇದೇ ರೀತಿ ಮಾಡಿದ್ದಾರೆ. ಇದು ಆಟವಾಗಿದೆ ಮತ್ತು ಇದನ್ನು ಸರಿಯಾದ ಉತ್ಸಾಹದಲ್ಲಿ ಆಡಬೇಕು ಮತ್ತು ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಳ್ಳಬೇಕು ಎಂದಿದ್ದಾರೆ. ಅಲ್ಲದೆ, ಆಫ್ಘಾನ್​ ಕ್ರಿಕೆಟ್​ ಬೋರ್ಡ್​ನ ಮಾಜಿ ಸಿಇಒ ಶಫೀಕ್ ಸ್ಟಾನಿಕ್ಜೈ ಟ್ಯಾಗ್​ ಮಾಡಿ ನಿಮ್ಮ ಜನ ಮತ್ತು ನಿಮ್ಮ ಆಟಗಾರರು ಕ್ರೀಡೆಯಲ್ಲಿ ಬೆಳೆಯಬೇಕೆಂದರೆ ಕೆಲವು ವಿಚಾರಗಳನ್ನು ಕಲಿಯಬೇಕಿದೆ ಎಂದು ಕಿವಿಮಾತು ಹೇಳಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಫೀಕ್ ಸ್ಟಾನಿಕ್ಜೈ, ಅಭಿಮಾನಿಗಳ ಭಾವನೆಯನ್ನು ನಿಯಂತ್ರಣ ಮಾಡಲು ಆಗುವುದಿಲ್ಲ. ಈ ರೀತಿಯ ಘಟನೆ ವಿಶ್ವ ಕ್ರಿಕೆಟ್​ನಲ್ಲಿ ಅನೇಕ ಬಾರಿ ನಡೆದಿವೆ. ಬೇಕಿದ್ದರೆ, ನೀವು ಕಬೀರ್​ ಖಾನ್, ಇಂಜಿಮಾಮ್​ ಭಾಯ್ ಮತ್ತು ರಶೀದ್​ ಲತೀಫ್​​​ ಅವರ ಬಳಿ ಹೋಗಿ ಕೇಳಬಹುದು ಎಂದು ತಿರುಗೇಟು ನೀಡಿದ್ದಾರೆ.

    ಇನ್ನು ಪಂದ್ಯದ ವಿಚಾರಕ್ಕೆ ಬರುವುದಾರೆ, ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಆಫ್ಘಾನ್​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 129 ರನ್​ ಕಲೆರ ಹಾಕಿತು. ಗುರಿ ಬೆನ್ನತ್ತಿದ ಪಾಕ್​ 9 ವಿಕೆಟ್​ಗಳ ನಷ್ಟಕ್ಕೆ 19.2 ಓವರ್​ಗಳಲ್ಲಿ 131 ರನ್​ ಕಲೆಹಾಕುವ ಮೂಲಕ ತುಂಬಾ ಶ್ರಮಪಟ್ಟು ಗುರಿ ಸೇರಿತು. (ಏಜೆನ್ಸೀಸ್​)

    ಲೈಗರ್​ ಸಿನಿಮಾ ಹೀನಾಯ ಸೋಲು: ಬಾಡಿಗೆ ಹೊರೆ ತಡೆಯಲಾರದೇ ಮುಂಬೈ ತೊರೆಯಲು ಪುರಿ ಜಗನ್ನಾಥ್​ ನಿರ್ಧಾರ​

    ಮಹಾಲಕ್ಷ್ಮೀಗೆ ರವೀಂದರ್​ ನೀಡಿರುವ ದುಬಾರಿ ಉಡುಗೊರೆಗಳ ಬಗ್ಗೆ ತಿಳಿದ್ರೆ ಹುಬ್ಬೇರಿಸ್ತೀರಾ! ಇಲ್ಲಿದೆ ಮಾಹಿತಿ…

    ಇಸ್ಲಾಂಗೆ ಮತಾಂತರಗೊಂಡು ಮದ್ವೆ ಆಗದಿದ್ರೆ ಕೊಲ್ಲುವುದಾಗಿ ವಿದ್ಯಾರ್ಥಿನಿಗೆ ಬೆದರಿಕೆ: ಯುವಕನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts