More

    ಆಂಧ್ರ ಹುಡುಗಿ-ಐರ್ಲೆಂಡ್​ ಹುಡುಗ: ದೇಶ, ಭಾಷೆ, ಧರ್ಮದ ಗಡಿ ಮೀರಿದ ವಿಶೇಷ ಪ್ರೇಮ ಕತೆ ಇದು

    ವಿಶಾಖಪಟ್ಟಣ: ವಿಶೇಷ ಮದುವೆ ಒಂದಕ್ಕೆ ಆಂಧ್ರ ಪ್ರದೇಶದ ವಿಶಾಖಪಟ್ಟಣ ಸಾಕ್ಷಿಯಾಗಿದೆ. ಐರ್ಲೆಂಡ್​ ಯುವಕ ಮತ್ತು ವಿಶಾಖಪಟ್ಟಣದ ಯುವತಿ ಸಪ್ತಪದಿ ತುಳಿಯುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.

    ಮಧುರವಾಡ ರೇವಲ್ಲಪಾಳ್ಯದ ಜಿವಿಎಂಸಿ 6ನೇ ವಾರ್ಡ್ನ ಪಿಳ್ಳೆ ಶ್ರೀಮನ್ನಾರಾಯಣ ಮತ್ತು ನಿರ್ಮಲಾ ದಂಪತಿ ಪುತ್ರಿ ಡಾ. ಚಾಮುಂಡೇಶ್ವರಿ ಚೀನಾದಲ್ಲಿ ಎಂಬಿಬಿಎಸ್ ಮುಗಿಸಿದ್ದಾರೆ. ಪ್ರಸ್ತುತ ಹೈದರಾಬಾದ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಐರ್ಲೆಂಡ್​ ಮೂಲದ ಡಾ. ರಾಬರ್ಟ್​ ಚಾರ್ಲ್ಸ್​ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

    ರಾಬರ್ಟ್​ ಅವರು ಜನ್ಮ ಪೂರ್ವಕತೆ, ರೋಗಗಳು ಇತ್ಯಾದಿಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಅಲಹಾಬಾದ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್​ ಪಡೆದಿರುವ ರಾಬರ್ಟ್​ ಮತ್ತು ಚಾಮುಂಡೇಶ್ವರಿ ನಡುವೆ 2016ರಲ್ಲಿ ಹೈದರಾಬಾದ್​ನ ಉಪ್ಪಾಳದಲ್ಲಿ ನಡೆದ ಕಾನ್ಫರೆನ್ಸ್​ ವೇಳೆ ಪರಿಚಯವಾಯಿತು. ಪರಿಚಯ ಪ್ರೀತಿಗೆ ತಿರುಗಿ ಮದುವೆ ಮಾಡಿಕೊಳ್ಳಲು 2018ರಲ್ಲಿ ಇಬ್ಬರು ನಿರ್ಧರಿಸಿದ್ದರು.

    2019ರಲ್ಲಿ ಇಬ್ಬರ ಮದುವೆ ನಿಶ್ವಯವಾಗಿತ್ತು. ಇದೀಗ ಇಬ್ಬರ ಮದುವೆ ವಿಶಾಖಪಟ್ಟಣದ ಮಧುರವಾಡದಲ್ಲಿ ನಡೆದಿದ್ದು, ಹಿಂದು ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಚಾಮುಂಡೇಶ್ವರಿ ಕುಟುಂಬವರು ಮದುವೆ ಕಾರ್ಯವನ್ನು ನಡೆಸಿಕೊಟ್ಟಿದ್ದಾರೆ. (ಏಜೆನ್ಸೀಸ್​)

    ಏನೇ ನಡೆದಿದ್ರೂ ಅವನೊಬ್ಬನಿಗೆ ಮಾತ್ರ ಗೊತ್ತಿರುತ್ತದೆ! ಪುನೀತ್ ಸಾವಿನ ಅನುಮಾನದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

    ತಿಂಗಳಲ್ಲಿ ಯಶಸ್ವಿನಿ ಮರು ಜಾರಿ; ವಿಜಯವಾಣಿ ಸಂವಾದದಲ್ಲಿ ಸಚಿವ ಸೋಮಶೇಖರ್ ಮಾಹಿತಿ

    ಚಿಂತೆ ಬಿಡಿ, ಜನಪರ ಕೆಲಸ ಮಾಡಿ: ಸಿಎಂ ಬೊಮ್ಮಾಯಿಗೆ ಬಿಟ್​ಕಾಯಿನ್ ಟೆನ್ಷನ್ ಬೇಡ ಎಂದ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts