More

    ಮಗುವಿನ ಗಾತ್ರದ ಕಪ್ಪೆ ನೋಡಿ ದಂಗಾದ ಜನರು! ಇದರ ವಿಶೇಷತೆ ಕೇಳಿದ್ರೆ ಹುಬ್ಬೇರಿಸ್ತೀರಾ

    ಹೊನಿಯಾರಾ: ಪ್ರಕೃತಿ ವಿಸ್ಮಯಗಳು ಭೇದಿಸಿದಷ್ಟು ಹೊರಬರುತ್ತಲೇ ಇರುತ್ತದೆ ಎಂಬುದಕ್ಕೆ ಓಷಿಯಾನಿಯಾ ದೇಶದ ಸೊಲೊಮೊನ್​ ದ್ವೀಪದಲ್ಲಿ ಜರುಗಿರುವ ಪ್ರಸಂಗವೊಂದು ಹೊಸ ಉದಾಹರಣೆಯಾಗಿದೆ.

    ಸುಮಾರು ಒಂದು ಕೆಜಿಗೂ ಹೆಚ್ಚು ತೂಗುವ ಅಥವಾ ಮಗುವಿನ ಗಾತ್ರದ ಕಪ್ಪೆ ಸೊಲೊಮೊನ್​ ದ್ವೀಪದಲ್ಲಿ ಪತ್ತೆಯಾಗಿದ್ದು, ಅದನ್ನು ನೋಡಿರುವ ಜನರು ಅಕ್ಷರಶಃ ಹುಬ್ಬೇರಿಸಿದ್ದಾರೆ. ಕಳೆದ ಏಪ್ರಿಲ್​ ಹತ್ತಿರದ ಪೊದೆಯೊಂದರಲ್ಲಿ ಈ ಭಾರಿ ಗಾತ್ರದ ಕಪ್ಪೆಯನ್ನು ಸ್ಥಳೀಯ ಜನರು ಪತ್ತೆಹಚ್ಚಿದ್ದಾರೆ.

    ವ್ಯಕ್ತಿಯೊಬ್ಬ ಕಪ್ಪೆಯನ್ನು ಮಂಡಿಯ ಮೇಲೆ ಕೂರಿಸಿಕೊಂಡಿರುವ ಹಾಗೂ ಮಗುವಿನಂತೆ ಹಿಡಿದುಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಸಹ ಆಗಿದೆ.

    ಟಿಂಬರ್​ ಮಿಲ್​ ಮಾಲೀಕ ಜಿಮ್ಮಿ ಹುಗೋ (35) ಎಂಬುವರು ಹೊನಿಯಾರಾದ ಸೊಲೊಮೊನ್​ ದ್ವೀಪದ ಹೊರವಲಯದಲ್ಲಿ ಸಾಕಷ್ಟು ಉಭಯಚರ ಪ್ರಾಣಿಗಳು ಹಾದು ಹೋಗುವಾಗ ಅವುಗಳ ನಡುವೆ ಈ ಕಪ್ಪೆಯನ್ನು ಪತ್ತೆಹಚ್ಚಿದ್ದಾರೆ.

    ಇದನ್ನು ನೋಡಿದ ನನಗೆ ನಂಬಲು ಸಾಧ್ಯವಾಗಲಿಲ್ಲ. ಇದು ನನ್ನ ಜೀವನದಲ್ಲಿ ನಾನು ಕಂಡ ದೊಡ್ಡ ಕಪ್ಪೆಯಾಗಿದೆ. ಇದು ಮಾನವ ಮಗುವಿನಷ್ಟೇ ಗಾತ್ರದ್ದಾಗಿದೆ ಎಂದು ಜಿಮ್ಮೆ ಹೇಳಿದ್ದಾರೆ.

    ಇನ್ನು ಕಾರ್ನುಫರ್ ಗುಪ್ಪಿ ಹೆಸರಿನ ಕಪ್ಪೆಯು ವಿಶ್ವದ ಅತಿದೊಡ್ಡ ಕಪ್ಪೆಗಳಲ್ಲಿ ಒಂದಾಗಿದೆ. ನ್ಯೂ ಬ್ರಿಟನ್‌ನಿಂದ ಬಿಸ್ಮಾರ್ಕ್ ದ್ವೀಪಸಮೂಹದಲ್ಲಿ ಸೊಲೊಮನ್ ದ್ವೀಪಗಳಲ್ಲಿ ಇವು ಕಂಡುಬರುತ್ತವೆ. ಇನ್ನು ಕಾರ್ನುಫರ್ ಗುಪ್ಪಿ ಹೆಸರಿನ ಕಪ್ಪೆಯು ವಿಶ್ವದ ಅತಿದೊಡ್ಡ ಕಪ್ಪೆಗಳಲ್ಲಿ ಒಂದಾಗಿದೆ. ನ್ಯೂ ಬ್ರಿಟನ್‌ನಿಂದ ಬಿಸ್ಮಾರ್ಕ್ ದ್ವೀಪಸಮೂಹದಲ್ಲಿ ಸೊಲೊಮನ್ ದ್ವೀಪಗಳಲ್ಲಿ ಇವು ಕಂಡುಬರುತ್ತವೆ. ಇದು ಸಾಮಾನ್ಯವಾಗಿ 10 ಇಂಚುಗಳಷ್ಟು ಉದ್ದವಾಗಿ ಬೆಳೆಯುತ್ತದೆ.

    ಇತ್ತೀಚಿನ ವರ್ಷಗಳಲ್ಲಿ ಈ ಜಾತಿಯ ಉಭಯಚರ ವಾಸಿಗಳ ಸಂಖ್ಯೆಯು ಕ್ಷೀಣಿಸುತ್ತಿದೆ. ಹತ್ತಿರದ ಹೊಳೆಗಳಲ್ಲಿ ಬಟ್ಟೆ ಒಗೆಯುವ ಮಾನವರು ಬಳಸುವ ಡಿಟರ್ಜೆಂಟ್‌ಗಳಲ್ಲಿ ಕಂಡುಬರುವ ರಾಸಾಯನಿಕಗಳು ಕಪ್ಪೆಗಳ ಸೂಕ್ಷ್ಮ ಚರ್ಮಕ್ಕೆ ಹಾನಿ ಮಾಡುತ್ತದೆ. ಇದು ಕೂಡ ಇವುಗಳ ಸಂತತಿ ಕಡಿಮೆಯಾಗಲು ಒಂದು ಕಾರಣವಾಗಿದೆ. (ಏಜೆನ್ಸೀಸ್​)

    ವಿವಿಧ ಪದವೀಧರರಿಗೆ ಬ್ಯಾಂಕ್​ ನೋಟ್​ ಪ್ರೆಸ್​ನಲ್ಲಿ 135 ಹುದ್ದೆಗಳು: ಲಕ್ಷದವರೆಗೂ ಸಂಬಳ

    ಹಣದ ಗೋಲ್‌ಮಾಲ್‌: ಮಾಜಿ ಗೃಹ ಸಚಿವನ ವಿರುದ್ಧ ಕೊನೆಗೂ ಕ್ರಿಮಿನಲ್‌ ಕೇಸ್‌ ದಾಖಲು

    ತಾತ ಬಾಯಿ ಮಾತಿನಲ್ಲಿ ಹೇಳಿದ ಮಾತ್ರಕ್ಕೆ ಉಳುಮೆ ಮಾಡಿದವರಿಗಷ್ಟೇ ಜಮೀನು ಸಿಗುವುದಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts