More

    ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಎನ್​ಕೌಂಟರ್​ ಕೇಸ್​: ಯುಪಿ ಪೊಲೀಸರಿಗೆ ಕ್ಲೀನ್​ ಚಿಟ್​ ನೀಡಿದ ತನಿಖಾ ಆಯೋಗ

    ನವದೆಹಲಿ: ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಕೊಲೆಯಾಗಿದೆ ಎಂಬುದಕ್ಕೆ ಉತ್ತರ ಪ್ರದೇಶ ಪೊಲೀಸರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲವೆಂದು ತನಿಖಾ ಆಯೋಗ ವರದಿ ನೀಡಿದ್ದು, ಸಾರ್ವಜನಿಕರು, ಮಾಧ್ಯಮ ಮತ್ತು ಅಪರಾಧಿಯ ಕುಟುಂಬಸ್ಥರು ಸಾಕ್ಷಿ ಹೊತ್ತು ಮುಂದೆ ಬರುತ್ತಿಲ್ಲ ಎಂದು ಆಯೋಗ ದೂರಿದೆ.

    ಕಳೆದ ವರ್ಷ ಜುಲೈ 3 ರಂದು ಕಾನ್ಪುರದ ಚೌಬೆಪುರ್ ಪ್ರದೇಶದ ಬಿಕ್ರು ಗ್ರಾಮದಲ್ಲಿ ದುಬೆಯನ್ನು ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಎಂಟು ಮಂದಿ ಪೊಲೀಸರನ್ನು ಆತ ಕೊಂದುಹಾಕಿದ್ದ. ನಂತರ ಜುಲೈ 10ರಂದು ನಡೆದ ಎನ್​ಕೌಂಟರ್​ನಲ್ಲಿ ದುಬೆ ಹತನಾಗಿದ್ದ.

    ಇದನ್ನೂ ಓದಿರಿ: ಫನ್​ ಬಕೆಟ್​ ಭಾರ್ಗವನ ಕಾಮಕಾಂಡ ಬಿಚ್ಚಿಟ್ಟ ವಿಶಾಖಪಟ್ಟಣಂ ಎಸಿಪಿ: ಸಂತ್ರಸ್ತ ಬಾಲಕಿಗ್ಯಾಕೆ ಈ ದುರಾಸೆ ಬಂತು!

    ಉತ್ತರ ಪ್ರದೇಶದ ಪೊಲೀಸರು ತಮ್ಮ ಬೆಂಗಾವಲು ವಾಹನದಲ್ಲಿ ಕರೆತರುವಾಗ ಶೂಟ್​ ಮಾಡಿ ಕೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಪೊಲೀಸರು ದುಬೆಯನ್ನು ಕರೆದುಕೊಂಡು ಹೋಗುವಾಗ ಕೈಯಲ್ಲಿದ್ದ ಗನ್​ ಕಿತ್ತುಕೊಳ್ಳಲು ದುಬೆ ಮುಂದಾದ. ಈ ವೇಳೆ ಬೆಂಗಾವಲು ವಾಹನ ನೆಲಕ್ಕುರುಳಿತು. ಬಳಿಕ ಗನ್​ ಕಸಿದುಕೊಂಡು ಗುಂಡಿನ ದಾಳಿ ಮಾಡಿ ಓಡಿಹೋಗಲು ಯತ್ನಿಸಿದ. ಆತ್ಮರಕ್ಷಣೆಗಾಗಿ ಎನ್​ಕೌಂಟರ್​ ಮಾಡಬೇಕಾಯಿತು ಎಂದು ಪೊಲೀಸರು ಹೇಳಿಕೆ ನೀಡಿದ್ದರು.

    ಈ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್​ಗೆ ವರದಿ ನೀಡಿದ್ದ ಉತ್ತರ ಪ್ರದೇಶ ಸರ್ಕಾರ, ಪೊಲೀಸರೇ ಕೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಹೇಳಿತ್ತು. ಆದರೆ, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿಯೊಂದು ದಾಖಲಿಸಲಾಗಿತ್ತು. ಸರ್ಕಾರದಿಂದ ರಚಿಸಲಾಗಿದ್ದ ಸಮಿತಿಯಲ್ಲಿ ಪೊಲೀಸರಿದ್ದರು ಎಂದು ವಿವರಣೆ ನೀಡಲಾಗಿತ್ತು. ಇದಾದ ಬಳಿಕ ಸುಪ್ರೀಂಕೋರ್ಟ್​ನಿಂದ ನ್ಯಾಯಾಂಗ ಸಮಿತಿ ರಚನೆ ಆಗಿತ್ತು.

    ಸುಪ್ರೀಂಕೋರ್ಟ್​ ಆದೇಶದಿಂದ ರಚನೆಯಾದ ತನಿಖಾ ಆಯೋಗದ ನೇತೃತ್ವವನ್ನು ನ್ಯಾಯಮೂರ್ತಿ ಬಿ.ಎಸ್​. ಚೌಹಾಣ್​ ವಹಿಸಿಕೊಂಡಿದ್ದರು. ಪ್ರಕರಣದ ಬಗ್ಗೆ ಮಾತನಾಡಿರುವ ಅವರು ಪೊಲೀಸರ ವಿರುದ್ಧ ಸಾಕ್ಷಿ ನೀಡಲು ಯಾರೊಬ್ಬರು ಮುಂದೆ ಬಂದಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿರಿ: ಬಾಲಕಿ ಮೇಲೆ ರೇಪ್​: ಫನ್​ ಬಕೆಟ್​ ಭಾರ್ಗವ ಬಂಧನ ಬೆನ್ನಲ್ಲೇ ಓ ಮೈ ಗಾಡ್ ಗರ್ಲ್​ ಸ್ಪಷ್ಟನೆ ಹೀಗಿದೆ…

    ಸಾಕ್ಷ್ಯಾಧಾರ ಕಲೆಹಾಕಲು ಪ್ರಮಾಣಿಕ ಪ್ರಯತ್ನ ಮಾಡಿದೆವು. ಮಾಧ್ಯಮ ಮತ್ತು ಸಾರ್ವಜನಿಕರನ್ನು ಕೇಳಿದೆವು. ವಿಕಾಸ್​ ದುಬೆ ಎನ್​ಕೌಂಟರ್​ ಕುರಿತು ಮಾಧ್ಯಮಗಳು ಅನೇಕ ವರದಿ ಮಾಡಿದ್ದವು. ಆದರೆ, ಸಾಕ್ಷಿ ನೀಡಲು ಮುಂದಾಗಲಿಲ್ಲ ಎಂದು ತನಿಖಾ ಆಯೋಗ ತಿಳಿಸಿದೆ. ಅಲ್ಲದೆ, ವಿಕಾಸ್​ ದುಬೆ ಪತ್ನಿಯಾಗಲಿ ಅಥವಾ ಕುಟುಂಬ ಸದಸ್ಯರಾಗಲಿ ಮುಂದೆ ಬಂದಿಲ್ಲ ಎಂದು ಹೇಳಿದೆ. ಸ್ಥಳೀಯ ದಿನಪತ್ರಿಕೆಗಳಿಗೂ ನೋಟಿಸ್​ ನೀಡಿದೆವು, ಅವರು ಕೂಡ ಪ್ರತಿಕ್ರಿಯೆ ನೀಡಲಿಲ್ಲ ಎಂದಿದೆ. (ಏಜೆನ್ಸೀಸ್​)

    ವಿಕಾಸ್​ ದುಬೆ ಎನ್​​ಕೌಂಟರ್: ಸತ್ಯಾಸತ್ಯತೆಗಳ ಕುರಿತು ಹುಟ್ಟಿಕೊಂಡ ಪ್ರಶ್ನೆಗಳೇನು?

    ಗ್ಯಾಂಗ್​​ಸ್ಟರ್​ ವಿಕಾಸ್​ ದುಬೆ ಎನ್​ಕೌಂಟರ್​ಗೂ ಮುನ್ನ ಸ್ಥಳದಲ್ಲಿ ನಡೆದಿತ್ತು ಭಾರಿ ಹೈಡ್ರಾಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts