More

    ಟೈಲರ್​ ಕನ್ಹಯ್ಯ ಹತ್ಯೆ ಕೇಸ್​: ಬಂಧನಕ್ಕೂ ಮುನ್ನ ಆರೋಪಿಗಳಿಬ್ಬರ ಹೈಡ್ರಾಮದ ವಿಡಿಯೋ ವೈರಲ್​

    ಉದಯಪುರ: ಪ್ರವಾದಿ ಮುಹಮ್ಮದ್​ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಬಿಜೆಪಿ ನಾಯಕಿ ನೂಪುರ್​ ಶರ್ಮಾರನ್ನು ಬೆಂಬಲಿಸಿ, ಪೋಸ್ಟ್​ ಹಾಕಿದ್ದ ಹಿಂದು ವ್ಯಕ್ತಿಯ ಬರ್ಬರ ಹತ್ಯೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ.

    ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದು, ಇಡೀ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉದಯಪುರದಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು, 144 ಸೆಕ್ಷನ್​ ಜಾರಿ ಮಾಡಲಾಗಿದೆ. ಘಟನಾ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಪ್ರಕರಣದ ತನಿಖೆಯನ್ನು ಕೈಗೊಳ್ಳಲಿದೆ. ಇದರ ನಡುವೆ ಬಂಧಿತ ಆರೋಪಿಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಕೊಲೆ ಮಾಡಿದ ಆರೋಪಿಗಳು ತಮ್ಮ ಮುಖವನ್ನು ಹೆಲ್ಮೆಟ್​ನಿಂದ ಮರೆ ಮಾಚಿಕೊಂಡು ಬೈಕ್​ ಏರಿ ಉದಯಪುರವನ್ನು ತೊರೆಯುವ ಪ್ರಯತ್ನದಲ್ಲಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆಯು ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ, ರಾಜಸ್ಥಾನ ಪೊಲೀಸರು ಆರೋಪಿಗಳನ್ನು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿ, ಅವರ ಹೆಡೆಮುರಿ ಕಟ್ಟಿರುವುದು ವಿಡಿಯೋದಲ್ಲಿದೆ. ಆರೋಪಿಗಳನ್ನು ಬಂಧಿಸಿದ ಸಮೀಪದಲ್ಲೇ ಇದ್ದ ಕಟ್ಟಡದಿಂದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್​ ಆಗಿದೆ.

    ಈ ಸಂಬಂಧ ರಾಜಸಮಂದ್ ಜಿಲ್ಲೆಯ ಪೊಲೀಸ್​ ಮುಖ್ಯಸ್ಥ ಸುಧೀರ್​ ಚೌಧರಿ ಮಾತನಾದ್ದಾರೆ. ಉದಯಪುರ ಹೊರವಲಯದ ಹೆದ್ದಾರಿಯಲ್ಲಿ ಇಬ್ಬರು ವ್ಯಕ್ತಿಗಳು ಬೈಕ್​ ಅನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗುವ ಪ್ರಯತ್ನದಲ್ಲಿದ್ದರು. ಈ ವೇಳೆ ಬ್ಯಾರಿಕೇಡ್‌ನಲ್ಲಿ ಕಾವಲು ಕಾಯುತ್ತಿದ್ದ ಪೊಲೀಸ್ ತಂಡ ಕೈಬೀಸಿದರು. ಬೈಕ್​ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದನ್ನು ನೋಡಿ ಅನುಮಾನಗೊಂಡ ಪೊಲೀಸರು ಬೈಕ್​ ಅನ್ನು ಬೆನ್ನತ್ತಿ ತಡೆದು ನಿಲ್ಲಿಸಿ ಇಬ್ಬರನ್ನು ಬಂಧಿಸಿದ್ದಾರೆ ಎಂದುತ ತಿಳಿಸಿದ್ದಾರೆ.

    ಘಟನೆ ಹಿನ್ನೆಲೆ ಏನು?
    ರಾಜಸ್ಥಾನದ ಉದಯಪುರದಲ್ಲಿ ಟೈಲರ್​​ ಆಗಿ ಕೆಲಸ ಮಾಡುತ್ತಿದ್ದ ಕನ್ಹಯ್ಯ ಲಾಲ್​ ಎಂಬುವರನ್ನು ಅನ್ಯಧರ್ಮದ ಇಬ್ಬರು ದುಷ್ಕರ್ಮಿಗಳು ಮಂಗಳವಾರ ಬರ್ಬರವಾಗಿ ಕೊಂದಿದ್ದಾರೆ. ಗ್ರಾಹಕರ ಸೋಗಿನಲ್ಲಿ ಕನ್ಹಯ್ಯ ಲಾಲ್​ ಅಂಗಡಿಗೆ ತೆರಳಿದ ದುಷ್ಕರ್ಮಿಗಳು ಕನ್ಹಯ್ಯರ ತಲೆಯನ್ನು ಕತ್ತರಿಸುವ ಮೂಲಕ ದುಷ್ಕೃತ್ಯ ಎಸಗಿದ್ದಾರೆ. ಕೊಲೆಗೆ ಕಾರಣ ಕನ್ಹಯ್ಯ ತನ್ನ ಸಾಮಾಜಿಕ ಜಾಲತಾಣದಲ್ಲಿ ನೂಪರ್​ ಶರ್ಮಾ ಪರ ಪೋಸ್ಟ್​ ಹಾಕಿದ್ದು. ಆದರೆ, ಪೋಸ್ಟ್​ ಹಾಕಿದ್ದು ಕನ್ನಯ್ಯ ಅಲ್ಲ. ಅವರ 18 ವರ್ಷದ ಮಗನೆಂದು ಹೇಳಲಾಗಿದೆ.

    ತಮಗೆ ಮೊದಲೇ ಬೆದರಿಕೆ ಇದ್ದ ಕಾರಣ, ಕನ್ಹಯ್ಯ ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದ. ಆದರೂ, ಅವರನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆರೋಪಿಗಳು ಗ್ರಾಹಕರ ಸೋಗಿನಲ್ಲಿ ಹೋಗಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳನ್ನು ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಅಹಮದ್ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿಯೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ರಾಜ್‌ಸಮಂದ್ ಜಿಲ್ಲೆಯ ಭೀಮ್ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ರಾಜ್​ಮಂದ್, ಉದಯಪುರದ ನೆರೆಯ ಜಿಲ್ಲೆ.

    ಟೈಲರ್​ ಕನ್ಹಯ್ಯಾಲಾಲ್ ಕುಟುಂಬಕ್ಕೆ ರಾಜಸ್ಥಾನ ಸರ್ಕಾರ, 31 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಅವರ ಕುಟುಂಬದ ಇಬ್ಬರಿಗೆ ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಹುದ್ದೆಯನ್ನು ನೀಡುವುದಾಗಿ ಸರ್ಕಾರ ಹೇಳಿದೆ. (ಏಜೆನ್ಸೀಸ್​)

    ಶಿರಚ್ಛೇದನ ಮಾಡಿದವರಿಗೆ ಐಎಸ್​ಐ ನಂಟು? ಮೃತ ಟೈಲರ್​ ಕುಟುಂಬಕ್ಕೆ 31 ಲಕ್ಷ ರೂ. ಪರಿಹಾರ- ಇಬ್ಬರಿಗೆ ಉದ್ಯೋಗ

    ಕಲ್ಲಂಗಡಿ ಒಡೆದಾಗ ಗಡಿಪಾರು ಮಾಡು ಎಂದ ಬುದ್ಧಿಜೀವಿಗಳೇ, ರುಂಡ ಕತ್ತರಿಸಿದ್ದಾರೆ… ಬಾಯಿ ಮುಚ್ಚಿಕೊಂಡಿರುವಿರೇಕೆ?

    ಕಿಡ್ನಾಪ್​ ನಾಟಕವಾಡಿ, ಪಾಲಕರಿಂದಲೇ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಉಡುಪಿ ಯುವಕ ಸಿಕ್ಕಿಬಿದ್ದಿದ್ದೇ ರೋಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts