More

    ನೋಡ ನೋಡುತ್ತಿದ್ದಂತೆ ಕಾಂಕ್ರಿಟ್​ ಚಪ್ಪಡಿ ಕುಸಿದು ಚರಂಡಿ ಒಳಗೆ ಬಿದ್ದ ಐವರು: ಭಯಾನಕ ದೃಶ್ಯ ಸೆರೆ!

    ಜೈಸಲ್ಮೇರ್​: ನೋಡ ನೋಡುತ್ತಿದ್ದಂತೆ ಕಾಂಕ್ರಿಟ್​ ಚಪ್ಪಡಿ ಕುಸಿದು ಐವರು ಮಂದಿ ಚರಂಡಿ ಒಳಗೆ ಬಿದ್ದ ಭಯಾನಕ ಘಟನೆ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಜೈಸಲ್ಮೇರ್​ನ ಬಾಬಾ ಬಾವ್ದಿ ಏರಿಯಾದ ರೈಲು ನಿಲ್ದಾಣದ ಸಮೀಪ ಇರುವ ಪಂಕ್ಚರ್​ ಶಾಪ್​ ಮುಂದೆ ಈ ಘಟನೆ ಸಂಭವಿಸಿದೆ. ಏಪ್ರಿಲ್​ 7 ರಂದು ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದೆ.

    ವಿಡಿಯೋದಲ್ಲಿ ಏನಿದೆ?: ಪಂಕ್ಚರ್​ ಶಾಪ್​ ಮುಂದೆ ನಾಲ್ವರು ಮಾತನಾಡುತ್ತಾ ನಿಂತಿರುತ್ತಾರೆ. ಇನೊಬ್ಬ ಪಕ್ಕದಲ್ಲೇ ಮೋಟರ್​ಬೈಕ್​ ದುರಸ್ಥಿ ಮಾಡುತ್ತಿರುತ್ತಾನೆ. ಕಾಂಕ್ರಿಟ್​ನಿಂದ ಮುಚ್ಚಲಾದ ಚರಂಡಿಯ ಮೇಲೆ ಭಾರೀ ವಾಹನದ ಸಾಕಷ್ಟು ಟೈರ್​ಗಳನ್ನು ಇಟ್ಟಿರಲಾಗುತ್ತದೆ. ಈ ವೇಳೆ ನೋಡ ನೋಡುತ್ತಿದ್ದಂತೆ ಕಾಂಕ್ರಿಟ್​ ಚಪ್ಪಡಿ ಕುಸಿದು ಐದು ಮಂದಿಯು ಚರಂಡಿಯ ಒಳಗೆ ಬೀಳುತ್ತಾರೆ. ಅವರ ಮೇಲೆ ಮೋಟರ್​ ಬೈಕ್​ ಕೂಡ ಬೀಳುತ್ತದೆ.

    ಐದು ಮಂದಿ ಚರಂಡಿ ಒಳಗೆ ಬೀಳುವುದನ್ನು ನೋಡಿ ಪಕ್ಕದಲ್ಲೇ ಇದ್ದ ಅನೇಕ ಸಹಾಯ ಮಾಡಲು ಧಾವಿಸಿ ಬರುತ್ತಾರೆ. ಅದೃಷ್ಟವಶಾತ್​ ಚರಂಡಿ ಒಣಗಿತ್ತು. ಹೀಗಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್​ ಆಗಿದ್ದಾರೆ. ಭಾರೀ ತೂಕದಿಂದ ಚಪ್ಪಡಿ ಕುಸಿದಿದೆ ಎಂದು ತಿಳಿದುಬಂದಿದೆ.

    ಸಾಮಾನ್ಯವಾಗಿ ಜನರು ಅನೇಕ ನಗರಗಳಲ್ಲಿ ರಸ್ತೆಬದಿಯ ಪಾದಚಾರಿ ಮಾರ್ಗಗಳು ಮತ್ತು ಚರಂಡಿಗಳ ಮೇಲೆ ಪಂಕ್ಚರ್-ರಿಪೇರಿ ಅಂಗಡಿಗಳನ್ನು ಸ್ಥಾಪಿಸುತ್ತಾರೆ. ಚರಂಡಿ ಮೇಲಿನ ಚಪ್ಪಡಿಗಳಲ್ಲಿ ಕೆಲವು ಹಳೆಯದಾಗಿದ್ದು, ದುರಸ್ತಿಯ ಅಗತ್ಯವಿದೆ. ಇಲ್ಲವಾದಲ್ಲಿ ಇಂಥಹ ಘಟನೆಗಳು ಮರುಕಳಿಸುವ ಸಾಧ್ಯತೆ ಇರುತ್ತದೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಮೋಜೋ ಸ್ಟೋರಿ)

    RCB ಟ್ರೋಫಿ ಗೆಲ್ಲೋವರೆಗೂ ಮದ್ವೆಯಾಗಲ್ಲ ಎಂದ ಮಹಿಳಾ ಅಭಿಮಾನಿ: ಕ್ರಿಕೆಟಿಗ ಅಮಿತ್​ ಶರ್ಮಾ ಕಾಮೆಂಟ್​ ವೈರಲ್​

    ಗುತ್ತಿಗೆದಾರ ಸಂತೋಷ್ ಮೃತದೇಹ ಹುಟ್ಟೂರು ತಲುಪುತ್ತಿದ್ದಂತೆ​ ಪೊಲೀಸರು ಮತ್ತು ಕುಟುಂಬಸ್ಥರ ಮಧ್ಯೆ ವಾಗ್ವಾದ

    ಆಧಾರರಹಿತ ಆರೋಪ, ತೇಜೋವಧೆಗೆ ನಾವು ಹೆದರಲ್ಲ; ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts