More

    ಸಂಸತ್ತಿನ ಮೇಲ್ಮನೆಯಲ್ಲಿ ಪ್ರತಿಪಕ್ಷಗಳ ಗದ್ದಲ: ಸಂಸದರ ವರ್ತನೆಗೆ ಸಭಾಪತಿ ವೆಂಕಯ್ಯನಾಯ್ಡು ಖಂಡನೆ

    ನವದೆಹಲಿ: ಸಂಸತ್ತಿನ ಮೇಲ್ಮನೆಯಲ್ಲಿ ಮಂಗಳವಾರ ಉಂಟಾದ ಗದ್ದಲಗಳ ಬಗ್ಗೆ ಮಾತನಾಡುತ್ತಾ ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಅವರು ತುಂಬಾ ಭಾವುಕರಾದ ಸನ್ನಿವೇಶ ಇಂದು ಸಂಸತ್ತಿನಲ್ಲಿ ಕಂಡುಬಂದಿತು. ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಆರಂಭವಾದಗಿನಿಂದ ಸಂಸದರ ವರ್ತನೆಯಿಂದ ಬೇಸತ್ತಿರುವ ವೆಂಕಯ್ಯನಾಯ್ಡು ಅವರು ಆಕ್ರೋಶ ಹೊರಹಾಕಿದರು.

    ಕಲಾಪ ಸುಸೂತ್ರವಾಗಿ ನಡೆದುಕೊಂಡು ಹೋಗಲು ಅನುವು ಮಾಡಿಕೊಡದೇ ರಾಜ್ಯಸಭೆಯಲ್ಲಿ ಪದೇಪದೆ ಗದ್ದಲ ಸೃಷ್ಟಿಸುತ್ತಿರುವುದನ್ನು ಖಂಡಿಸಿದರು. ಸಂಸತ್ತಿನ ಟೇಬಲ್​ ಮೇಲೆ ಎಗರುವ ಮೂಲಕ ಕೆಲ ಸದಸ್ಯರು ಸದನದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ. ಇದೇ ನೋವಿನಿಂದ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆಂದು ವೆಂಕಯ್ಯನಾಯ್ಡು ಅವರು ಹೇಳಿದರು.

    ಬುಧವಾರ ಸದನವನ್ನು ಉದ್ದೇಶಿಸಿ ಮಾತನಾಡುವಾಗ ವೆಂಕಯ್ಯನಾಯ್ಡು ಅವರು ಸಚಿವರ ವರ್ತನೆಯನ್ನು ನೆನೆದು ಬೇಸರಗೊಂಡು ಸದನದ ಬಗ್ಗೆ ಭಾವುಕರಾದರು. ಇದನ್ನು ಮಾಡಿ ಅಥವಾ ಅದನ್ನು ಮಾಡಿ ಅಂತಾ ನೀವು ಯಾವುದೇ ಸರ್ಕಾರವನ್ನು ಬಲವಂತ ಮಾಡಲಾಗದು. ಸಮಸ್ಯೆಯ ಬಗ್ಗೆ ಧ್ವನಿಯೆತ್ತುವುದರಲ್ಲಿ ತಪ್ಪಿಲ್ಲ. ಅದಕ್ಕಾಗಿ ಚರ್ಚಿಸಲು ಅನುಮತಿ ಸಹ ನೀಡಲಾಗುತ್ತದೆ. ವಿಭಿನ್ನ ಅಭಿಪ್ರಾಯಗಳಿರಬಹುದು, ಅದನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಪ್ರತಿಭಟನೆಗೂ ಅವಕಾಶವಿದೆ. ಅದನ್ನು ಬಿಟ್ಟು ಸದನದ ಟೇಬಲ್​ ಮೇಲೆ ಎದ್ದು ನಿಂತು ಕೂಗಾಡುವುದು ಶೋಭೆ ತರುವುದಿಲ್ಲ ಎಂದರು. ಸದನದ ಒಳಗೆ ಪ್ರವೇಶಿಸಿದ ಬಳಿಕ ಅದರ ಪ್ರಾವಿತ್ರ್ಯತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ವೆಂಕಯ್ಯನಾಯ್ಡು ಹೇಳಿದರು.

    ಅಧಿವೇಶನ ಆರಂಭವಾದಗಿನಿಂದ ಅನೇಕ ವಿಚಾರವಾಗಿ ಸದನದಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಗಳು ಗದ್ದಲ ರೂಪಕ್ಕೆ ತಿರುಗಿ ಸದನ ಸರಿಯಾಗಿ ನಡೆದುಕೊಂಡು ಹೋಗಲು ತೊಂದರೆ ಆಗುತ್ತಿರುವುದರಿಂದ ವೆಂಕಯ್ಯನಾಯ್ಡು ಅವರು ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್​)

    ಪತ್ನಿಯ ಫೇಸ್​ಬುಕ್​, ಇನ್​ಸ್ಟಾಗ್ರಾಂ ಹ್ಯಾಕ್​: ಮದ್ವೆಯಾದ ಆರೇ ತಿಂಗಳಲ್ಲಿ ಗಂಡನ ನೀಚ ಕೃತ್ಯ ಬಯಲು!

    ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಜತೆಗೆ ರಾಜಕೀಯಕ್ಕೇ ನಿವೃತ್ತಿ ಘೋಷಿಸಲು ಸಜ್ಜಾದ ಆನಂದ್ ಸಿಂಗ್!

    ಬಿಗ್​ಬಾಸ್​ ಮನೆಗೆ ಮತ್ತೆ 15 ತಾರೆಯರು ಎಂಟ್ರಿ: ದೊಡ್ಮನೆಗೆ ಸಿಕ್ಕಿದೆ ತಾರಾ ಮೆರಗು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts