ಪತ್ನಿಯ ಫೇಸ್​ಬುಕ್​, ಇನ್​ಸ್ಟಾಗ್ರಾಂ ಹ್ಯಾಕ್​: ಮದ್ವೆಯಾದ ಆರೇ ತಿಂಗಳಲ್ಲಿ ಗಂಡನ ನೀಚ ಕೃತ್ಯ ಬಯಲು!

Odisha Woaman
Published on

ಭುವನೇಶ್ವರ: ಆತಂಕಕಾರಿ ಪ್ರಕರಣವೊಂದರಲ್ಲಿ ಪತಿ ಮಹಾಶಯನೊಬ್ಬ ತನ್ನ 25 ವರ್ಷದ ಪತ್ನಿಯ ಮೊಬೈಲ್​ ಅನ್ನೇ ಹ್ಯಾಕ್​ ಮಾಡಿ ಆಕೆಯ ಅಶ್ಲೀಲ ಚಿತ್ರಗಳನ್ನು ಆಕೆಯದ್ದೇ ಸಾಮಾಜಿಕ ಜಾಲತಾಣ ಖಾತೆಗೆ ಅಪ್​ಲೋಡ್​ ಮಾಡಿದ್ದಾನೆ. ಶಾಕಿಂಗ್​ ಸಂಗತಿಯೆಂದರೆ ಮದುವೆಯಾದ ಆರೇ ತಿಂಗಳಲ್ಲಿ ಈ ಪ್ರಸಂಗ ಜರುಗಿದೆ.

ಕಟಕ್​ನಲ್ಲಿರುವ ಬಂಕಿ ಪ್ರದೇಶದಲ್ಲಿ ಸಂತ್ರಸ್ತೆ ಅಥವಾ ದೂರುದಾರೆ ವಾಸವಿದ್ದಳು. ವರದಕ್ಷಿಣೆ ವಿಚಾರವಾಗಿ ಪತಿ ಮಹಾಶಯ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಲು ಆರಂಭಿಸಿದ ಬಳಿಕ ಸಂತ್ರಸ್ತೆ ಗಂಡನ ಮನೆಯನ್ನು ತೊರೆದು ತವರು ಮನೆಯನ್ನು ಸೇರಿದ್ದಳು.

ಸುಂದರಪಾದ ಏರಿಯಾ ನಿವಾಸಿ ಆಗಿರುವ ಸಂತ್ರಸ್ತೆ ಮಹಿಳೆ, ನಿನ್ನೆ ಸಂಜೆ ಟ್ವಿನ್​ ಸಿಟಿ ಪೊಲೀಸ್​ ಆಯುಕ್ತ ಸೌಮೇಂದ್ರ ಪ್ರಿಯದರ್ಶಿನಿ ಅವರನ್ನು ಭೇಟಿಯಾಗಿ ತನ್ನ ಗಂಡನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾಳೆ. ಅಲ್ಲದೆ, ಕಳೆದ ಜುಲೈ 2ರಂದೇ ಮಹಿಳಾ ಪೊಲೀಸ್​ ಠಾಣೆಯಲ್ಲೂ ಸಂತ್ರಸ್ತೆ ದೂರು ನೀಡಿದ್ದಳು.

ದೂರಿನಲ್ಲಿ ಉಲ್ಲೇಖಿಸಿರುವಂತೆ ಹೈದರಾಬಾದ್​ ಮೂಲದ ಕಂಪನಿಯಲ್ಲಿ ಸಂತ್ರಸ್ತೆಯ ಪತಿ ಸಿಸ್ಟಮ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಖಾತೆಗಳನ್ನು ಹ್ಯಾಕ್​ ಮಾಡಿ, ಕಳೆದ ಒಂದು ತಿಂಗಳಿಂದ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಪೋಸ್ಟ್​ ಮಾಡುತ್ತಿದ್ದಾರೆಂದು ಆರೋಪ ಮಾಡಿದ್ದಾಳೆ.

ಒಡಿಶಾ ಹೈಕೋರ್ಟ್​ನಿಂದ ಆರೋಪಿಗೆ ಜಾಮೀನು ಸಿಕ್ಕಿದೆ. ಇತ್ತೀಚೆಗೆ, ಅವರು ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ನನ್ನ ಆತ್ಮೀಯ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಆತನನ್ನು ಶೀಘ್ರವಾಗಿ ಬಂಧಿಸಬೇಕು ಮತ್ತು ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಬಯಸುತ್ತೇನೆ "ಎಂದು ಮಹಿಳೆ ಹೇಳಿದ್ದಾಳೆ. ಆದರೆ, ತನ್ನ ಮೇಲಿನ ಆರೋಪಗಳನ್ನು ಪತಿ ನಿರಾಕರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net