More

    53 ವರ್ಷದ ಬಳಿಕ ಬ್ರಿಟನ್​ಗೆ ಒಲಿದ US Open​ ಮಹಿಳೆಯರ ಸಿಂಗಲ್ಸ್​ ಪ್ರಶಸ್ತಿ: ಇತಿಹಾಸ ಬರೆದ ಎಮ್ಮಾ ರಾಡುಕೇನು

    ನ್ಯೂಯಾರ್ಕ್​: ಪ್ರತಿಷ್ಠಿತ ಯುಎಸ್​ ಓಪನ್ ಗ್ರಾಂಡ್​ ಸ್ಲಾಂ ಟೆನ್ನಿಸ್​ ಟೂರ್ನಿಯ ಮಹಿಳೆಯರ ಸಿಂಗಲ್ಸ್​ ವಿಭಾಗದ ಫೈನಲ್​ ಪಂದ್ಯದಲ್ಲಿ ಬ್ರಿಟನ್​ನ 18 ವರ್ಷದ ಎಮ್ಮಾ ರಾಡುಕೇನು ಕೆನಾಡದ 19 ವರ್ಷದ ಲೇಲಾ ಫೆರ್ನಾಂಡಿಸ್ ವಿರುದ್ಧ ಗೆಲವು ಸಾಧಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.

    ಶನಿವಾರ ನಡೆದ ಫೈನಲ್​ನಲ್ಲಿ ಎಮ್ಮಾ ರಾಡುಕೇನು ಅಮೋಘ ಗೆಲವು ಸಾಧಿಸುವ ಮೂಲಕ ಸುಮಾರು 53 ವರ್ಷಗಳ ನಂತರ ಬ್ರಿಟನ್ ಆಟಗಾರ್ತಿಯೊಬ್ಬರು ಅಮೆರಿಕನ್ ಓಪನ್ ಪ್ರಶಸ್ತಿ ಗೆದ್ದ ದಾಖಲೆಯನ್ನು ಬರೆದಿದ್ದಾರೆ. ವಿಶ್ವ ನಂ 150ನೇ ಆಟಗಾರ್ತಿ ರಾಡುಕೇನು ವಿಶ್ವ ನಂ. 73ನೇ ಎಡಗೈ ಆಟಗಾರ್ತಿ ಫರ್ನಾಂಡೀಸ್​ ಅವರನ್ನು 6-4, 6-3 ರಿಂದ ಮಣಿಸಿ, ಯುಎಸ್​ ಓಪನ್ ಗ್ರಾಂಡ್​ ಸ್ಲಾಂ ಮಹಿಳೆಯರ ಸಿಂಗಲ್ಸ್​ ಕಿರೀಟವನ್ನು ಮುಡಿಗೇರಿಸಿಕೊಂಡರು.

    1977ರಲ್ಲಿ ವಿಂಬಲ್ಡನ್​ನಲ್ಲಿ ಬ್ರಿಟಿಷ್ ಆಟಗಾರ್ತಿ ವರ್ಜಿನಿಯಾ ವೇಡ್ ಸಿಂಗಲ್ಸ್​ ಟೈಟಲ್​ ಗೆದ್ದಿದ್ದರು. ಅದಕ್ಕೂ ಮುನ್ನ 1968ರಲ್ಲಿ ವೇಡ್​, ಯುಎಸ್​ ಓಪನ್​ ಕಿರೀಟ ಮುಡಿಗೇರಿಸಿಕೊಂಡಿದ್ದರು. ಅಂದಿನಿಂದ ಯಾವೊಬ್ಬ ಬ್ರಿಟನ್​ ಆಟಗಾರ್ತಿಯು ಕೂಡ ಟ್ರೋಫಿ ಗೆದ್ದಿರಲಿಲ್ಲ. ಇದೀಗ 53 ವರ್ಷಗಳ ಬಳಿಕ​ ಯುಎಸ್​ ಓಪನ್​ ಪ್ರಶಸ್ತಿ ಗೆದ್ದ ಮೊದಲ ಬ್ರಿಟನ್​ ಮಹಿಳಾ ಆಟಗಾರ್ತಿ ಎಂಬ ಕೀರ್ತಿಗೆ ರಾಡುಕೇನು ಭಾಜನರಾಗಿದ್ದಾರೆ. ​

    ಬ್ರಿಟನ್​ನ ರಾಣಿ ಎಲಿಜಬೆತ್​ ಕೂಡಾ ಎಮ್ಮಾ ರಾಡುಕೇನು ಅವರನ್ನು ಅಭಿನಂದಿಸಿದ್ದಾರೆ. ಎಮ್ಮಾ ರಾಡುಕೇನು ಅವರಿಗೆ ಶುಭಾಶಯಗಳನ್ನು ಕೋರುತ್ತೇನೆ. ಚಿಕ್ಕವಯಸ್ಸಿನಲ್ಲೇ ಈ ಸಾಧನೆಯನ್ನು ಅವರು ಮಾಡಿದ್ದಾರೆ. ನೀವು ಮುಂದಿನ ತಲೆಮಾರಿನ ಟೆನ್ನಿಸ್​ ಆಟಗಾರರಿಗೆ ಪ್ರೇರಣೆಯಾಗಿದ್ದೀರಿ ಎಂದಿದ್ದಾರೆ. ಬ್ರಿಟನ್​​ನ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಕ್ರೀಡಾ ಸಚಿವ ನಿಗೆಲ್ ಹಡಲ್​ಸ್ಟನ್ ಕೂಡಾ ಎಮ್ಮಾ ರಾಡುಕೇನು ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. (ಏಜೆನ್ಸೀಸ್​)

    ಗಣೇಶನ ಮೂರ್ತಿ ಹಿಡಿದ ಎಬಿಡಿ: ವೈರಲ್​ ಫೋಟೋ ಹಿಂದಿರುವ ಅಸಲಿಯತ್ತು ಹೀಗಿದೆ ನೋಡಿ…

    ಕನಸು ನನಸಾಯಿತು: ಅಪ್ಪ-ಅಮ್ಮನನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದ ಖುಷಿ ಹಂಚಿಕೊಂಡ ಚಿನ್ನದ ಹುಡುಗ

    VIDEO: ಇಂಗ್ಲೆಂಡ್‌ನಿಂದ ಯುಎಇಯತ್ತ ಐಪಿಎಲ್ ಆಟಗಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts