More

    ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದ ಸ್ಟಾರ್​ ದಂಪತಿ ವಿರುದ್ಧ ತನಿಖೆ ಆರಂಭಿಸಿದ ಸರ್ಕಾರ!​

    ಚೆನ್ನೈ: ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದ ಸ್ಟಾರ್​ ದಂಪತಿ ನಯನತಾರ ಮತ್ತು ವಿಘ್ನೇಶ್​ ಶಿವನ್​ ವಿರುದ್ಧ ತಮಿಳುನಾಡು ಸರ್ಕಾರ ತನಿಖೆಯನ್ನು ಆರಂಭಿಸಿದೆ.

    ನಯನತಾರ ಮತ್ತು ವಿಘ್ನೇಶ್​ ಶಿವನ್​ ಅವರು ಬಾಡಿಗೆ ತಾಯ್ತಾನದ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ. ತಮಿಳುನಾಡಿನ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ತ್ರಿಸದಸ್ಯ ತಂಡವು ತನಿಖೆಯನ್ನು ಆರಂಭಿಸಿದೆ.

    ಮಕ್ಕಳನ್ನು ಪಡೆಯುವಾಗ ಬಾಡಿಗೆ ತಾಯ್ತನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದಾಖಲಾಗಿರುವ ದೂರನ್ನು ಆಧರಿಸಿ, ಸರ್ಕಾರ ತನಿಖೆ ನಡೆಸುತ್ತಿದೆ. ನಯನತಾರ ಪತಿ ವಿಘ್ನೇಶ್​ ಶಿವನ್ ಅವರು ಅ.9ರಂದು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡರು. ಈ ಸುದ್ದಿ ಕೇಳಿ ಬಹುತೇಕ ಖುಷಿಗಿಂತ ಅಚ್ಚರಿ ವ್ಯಕ್ತಪಡಿಸಿದ್ದೇ ಹೆಚ್ಚು. ಏಕೆಂದರೆ, ಮದುವೆಯಾದ ನಾಲ್ಕೇ ತಿಂಗಳಿಗೆ ಮಕ್ಕಳಾಗಲು ಹೇಗೆ ಸಾಧ್ಯ ಎಂಬುದು. ಆ ಬಳಿಕ ಗೊತ್ತಾಗಿದ್ದು, ಇಬ್ಬರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ ಎಂಬುದು. ಈ ಸಂಗತಿ ಬಯಲಾದ ಬಳಿಕ ಹೊಸ ವಿವಾದ ಸೃಷ್ಟಿಯಾಯಿತು.

    ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಹೆರಿಗೆಯಾಗಿದೆ ಎಂದು ನಂಬಲಾಗಿದೆ. ತನಿಖಾ ತಂಡ ಆಸ್ಪತ್ರೆಯಿಂದ ಮಾಹಿತಿ ಸಂಗ್ರಹಿಸಿದ್ದು, ಆಸ್ಪತ್ರೆಯ ತನಿಖೆಯ ನಂತರ ಅಗತ್ಯ ಬಿದ್ದರೆ ತಾರಾ ಜೋಡಿಯನ್ನು ಪ್ರಶ್ನಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಅಂದಹಾಗೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಬಾಡಿಗೆ ತಾಯಿ ದುಬೈನಲ್ಲಿದ್ದಾಳೆ ಎನ್ನಲಾಗಿದೆ. ದುಬೈನಲ್ಲಿ ನೆಲೆಸಿರುವ ನಟಿಯ ಸಹೋದರನಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ದುಬೈನಲ್ಲಿ ಬಾಡಿಗೆ ತಾಯ್ತನಕ್ಕೆ ಯಾವುದೇ ನಿರ್ಬಂಧಗಳಿಲ್ಲದ ಕಾರಣ, ಸೆಲೆಬ್ರಿಟಿ ದಂಪತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆಯಿಲ್ಲ ಎನ್ನಲಾಗಿದೆ.

    ಏಳು ವರ್ಷಗಳ ಡೇಟಿಂಗ್​ ನಂತರ ನಟಿ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ವಿವಾಹವಾಗಿದರು. (ಏಜೆನ್ಸೀಸ್​)

    ಚಲಿಸುವ ರೈಲಿಗೆ ನೂಕಿ ಮಗಳ ಹತ್ಯೆ: ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಂದೆ ಸಾವು

    18 ಶಾಸಕರು ಸೇರಿ 25 ಪ್ರಭಾವಿಗಳನ್ನು ಹನಿಟ್ರ್ಯಾಪ್​ ಬಲೆಗೆ ಕಡೆವಿ ಸರ್ಕಾರಕ್ಕೆ ಕುತ್ತು ತಂದಿಟ್ಟ ಖತರ್ನಾಕ್​ ಲೇಡಿ!

    ಓಲಾ-ಉಬರ್ ಆಟೋಗಳಿಗೆ ಬಿಗ್​ ರಿಲೀಫ್​: ಬಲವಂತದ ಕ್ರಮ ಕೈಗೊಳ್ಳದಂತೆ ಸಾರಿಗೆ ಇಲಾಖೆಗೆ ಹೈಕೋರ್ಟ್​ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts