More

    ಓಲಾ-ಉಬರ್ ಆಟೋಗಳಿಗೆ ಬಿಗ್​ ರಿಲೀಫ್​: ಬಲವಂತದ ಕ್ರಮ ಕೈಗೊಳ್ಳದಂತೆ ಸಾರಿಗೆ ಇಲಾಖೆಗೆ ಹೈಕೋರ್ಟ್​ ಸೂಚನೆ

    ಬೆಂಗಳೂರು: ಓಲಾ, ಉಬರ್ ಆಟೋಗಳಿಗೆ ಹೈಕೋರ್ಟ್​ನಿಂದ ಬಿಗ್​ ರಿಲೀಫ್​ ಸಿಕ್ಕಿದೆ. ಸರ್ಕಾರ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಪರವಾನಗಿ ಪಡೆಯಲು ಕಾಲಾವಕಾಶ ವಿಸ್ತರಿಸಬೇಕು ಎಂದು ಸೂಚಿಸಿದೆ.

    ಪರವಾನಗಿ ಪಡೆಯದೆ ಕಾರ್ಯಾಚರಣೆ ಹಾಗೂ ದುಬಾರಿ ಶುಲ್ಕ ವಸೂಲಿ ಹಿನ್ನೆಲೆಯಲ್ಲಿ ತಕ್ಷಣವೇ ಆಟೋ ರಿಕ್ಷಾ ಸೇವೆ ಸ್ಥಗಿತಗೊಳಿಸುವಂತೆ ಆ್ಯಪ್​ ಆಧಾರಿತ ಅಗ್ರಿಗೇಟರ್​ ಕಂಪನಿಗಳಾದ ಓಲಾ, ಉಬರ್​ಗೆ ಸಾರಿಗೆ ಇಲಾಖೆ ಇತ್ತೀಚಿಗೆ ನೋಟಿಸ್​ ಜಾರಿಗೊಳಿಸಿತ್ತು. ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯಿರಲಿ‌‌, ಕಾಯ್ದೆ ಪ್ರಕಾರ ಪರವಾನಗಿ ಪಡೆಯದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಸಾರಿಗೆ ಇಲಾಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಆದೇಶಿಸಿದ್ದರು. ಅಲ್ಲದೇ ಸೇವೆ ಸ್ಥಗಿತಗೊಳಿಸುವಂತೆ ಓಲಾ, ಉಬರ್​ ಆಧಾರಿತ ಆಟೋಗಳಿಗೆ ಸಾರಿಗೆ ಇಲಾಖೆ ಸೂಚಿಸಿತ್ತು.

    ಆ್ಯಪ್ ಆಧಾರಿತ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಲು ಸಾರಿಗೆ ಇಲಾಖೆ ಹೊರಡಿಸಿದ ಆದೇಶ ಪ್ರಶ್ನಿಸಿ ಓಲಾ, ಉಬರ್ ಸಂಸ್ಥೆಗಳು ಹೈಕೋರ್ಟ್​ಗೆ ರಿಟ್ ಸಲ್ಲಿಸಿದ್ದವು. ಈ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಎಸ್​. ಕಮಾಲ್ ಅವರಿದ್ದ ಪೀಠ, ಸರ್ಕಾರ ಅಗ್ರಿಗೇಟರ್ಸ್ ಆಟೋರಿಕ್ಷಾ ವಿರುದ್ಧ ಯಾವುದೇ ಬಲವಂತ ಕ್ರಮ ಜರುಗಿಸಬಾರದು.‌ ಪರವಾನಗಿ ಮಂಜೂರಾತಿ ಮತ್ತು ನವೀಕರಣಕ್ಕೆ ಅರ್ಜಿ ಸಲ್ಲಿಸಿದರೆ, ಅದನ್ನು ಕಾನೂನು ಪ್ರಕಾರ ಪರಿಗಣಿಸಿ ಸೂಜ್ತ ಕ್ರಮ ಜರುಗಿಸಬೇಕು ಎಂದು‌ ನಿರ್ದೇಶನ ನೀಡಿತು.

    ಹೈಕೋರ್ಟ್ ಸೂಚನೆಯಂತೆ ಅಗ್ರಿಗೇಟರ್ ಸಂಸ್ಥೆಗಳ ಜತೆ ಸಾರಿಗೆ ಇಲಾಖೆ ಗುರುವಾರ ನಡೆಸಿದ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ.‌ 15 ದಿನದಲ್ಲಿ ನ್ಯಾಯಯುತ ದರ ನಿಗದಿ ಮಾಡಲಾಗುವುದು ಎಂದು ಸರ್ಕಾರದಿಂದ ಹೈಕೋರ್ಟ್‌ಗೆ ಮಾಹಿತಿ ನೀಡಲಾಯಿತು. ಅದನ್ನು ಪರಿಗಣಿಸಿದ ಪೀಠ, 15 ದಿನದಲ್ಲಿ ಸರ್ಕಾರ ಸೂಕ್ತ ದರ ನಿಗದಿ ಮಾಡಬೇಕು. ಅಲ್ಲಿಯವರೆಗೆ ಅಗ್ರಿಗೇಟರ್ಸ್ ಕಂಪನಿಗಳು ಮೋಟಾರು ವಾಹನ ಕಾಯ್ದೆಯಡಿ 2021ರ ನ. 11ರಂದು ಆಟೋರಿಕ್ಷಾಗಳಿಗೆ ದರ ನಿಗದಿಪಡಿಸಿ ಸರ್ಕಾರ ಹೊರಡಿಸಿರುವ ಆದೇಶದನ್ವಯ ದರ ಪಡೆಯಬೇಕು. ಜತೆಗೆ ಅನ್ವಯಿಸಬಹುದಾದ ಸೇವಾ ತೆರಿಗೆ ವಿಧಿಸಬಹುದು ಎಂದು ಆದೇಶ ಹೊರಡಿಸಿತು. ನವೆಂಬರ್ 7ಕ್ಕೆ ವಿಚಾರಣೆ ಮುಂದೂಡಿತು.

    ಲೈಸೆನ್ಸ್​ ಇಲ್ಲದೆ ಓಲಾ, ಉಬರ್​ ಓಡಾಟ: ತಕ್ಷಣ ಆಟೋ ಸೇವೆ ಸ್ಥಗಿತಗೊಳಿಸಲು ನೋಟಿಸ್​ ಜಾರಿ

    ಬಿಜೆಪಿ ಶಾಸಕ ಉದಯ್ ಗರುಡಾಚಾರ್​ಗೆ 2 ತಿಂಗಳು ಜೈಲು ಶಿಕ್ಷೆ ವಿಧಿಸಿ ಕೋರ್ಟ್​ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts