More

    ಕೆಳಗಿಳಿಯದ ಪೆಟ್ರೋಲ್​ ಬೆಲೆಯಿಂದಾಗಿ ಕುದುರೆ ಏರಿದ ಉದ್ಯಮಿ: ವಿಜಯಪುರದಲ್ಲಿ ವಿನೂತನ ಪ್ರಕರಣ

    ವಿಜಯಪುರ: ಕಳೆದ ಕೆಲವು ತಿಂಗಳಿನಿಂದ ನೂರರ ಗಡಿ ದಾಟಿರುವ ಪೆಟ್ರೋಲ್​ ದರ ಸದ್ಯಕ್ಕೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಪೆಟ್ರೋಲ್​ ಬೆಲೆಯಿಂದ ಕಂಗಾಲಾಗಿರುವ ಕೆಲವರು ತಮ್ಮ ಸ್ವಂತ ವಾಹನಗಳನ್ನು ಬಿಟ್ಟು ಬಸ್​ಗಳ ಮೊರೆ ಹೋಗಿದ್ದಾರೆ. ಇನ್ನು ಕೆಲವರು ಎಲ್ಲೆಲ್ಲಿ ಪೆಟ್ರೋಲ್​ ಖರ್ಚು ಉಳಿಸಲು ಸಾಧ್ಯವೋ, ಆ ಪ್ರಯತ್ನವೆಲ್ಲ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ಉದ್ಯಮಿ ಮಾಡಿರುವ ಕೆಲಸ ಎಲ್ಲರ ಗಮನ ಸೆಳೆದಿದೆ.

    ಪೆಟ್ರೋಲ್​ ಪ್ರಯಾಣ ದುಬಾರಿ ಆಗಿರುವುದರಿಂದ ಉದ್ಯಮಿಯೊಬ್ಬ ಕುದುರೆಯನ್ನು ಖರೀದಿಸಿ ಅದರಲ್ಲೇ ಪ್ರಯಾಣ ಮಾಡುತ್ತಿದ್ದಾರೆ. ಇದನ್ನು ಕೇಳಲು ತಮಾಷೆ ಎನಿಸಬಹುದು. ಆದರೆ, ಪೆಟ್ರೋಲ್​ ಬೆಲೆ ಓರ್ವ ಉದ್ಯಮಿ ಮೇಲೆಯೇ ಇಷ್ಟೊಂದು ಪ್ರಭಾವ ಬೀರಿರಬೇಕಾದರೆ, ಜನಸಾಮಾನ್ಯರ ಗತಿಯೇನು ಎಂಬ ಪ್ರಶ್ನೆ ತಮ್ಮ ತಲೆಗೆ ಬರದೇ ಇರದು.

    ಬಾಬುಲಾಲ್ ಚೌಹಾಣ್​ (49) ಎಂಬ ಕರ್ನಾಟಕದ ವಿಜಯಪುರ ಮೂಲದ ಉದ್ಯಮಿ ಕೇವಲ ವಿನೂತನ ಐಡಿಯಾ ಮಾಡಿದ್ದಲ್ಲದೆ, ಅದನ್ನು ಕಾರ್ಯರೂಪಕ್ಕೂ ತಂದಿದ್ದಾರೆ. ಇತ್ತೀಚೆಗಷ್ಟೇ ಅವರೊಂದು ಗುಜರಾತಿ ಕುದುರೆಯನ್ನು ಖರೀದಿ ಮಾಡಿದ್ದಾರೆ. ಕೇವಲ ಪ್ರಯಾಣಕ್ಕಾಗಿ ಮಾತ್ರವಲ್ಲದೇ ದೇಹವನ್ನು ಫಿಟ್​ ಆಗಿ ಇಟ್ಟುಕೊಳ್ಳಲು ಇದು ನೆರವಾಗುತ್ತದೆ ಎಂದು ಬಾಬುಲಾಲ್​ ಹೇಳಿದ್ದಾರೆ. ಪ್ರತಿ ತಿಂಗಳು ಜಿಮ್​ಗೆ 4 ಸಾವಿರ ರೂ. ಖರ್ಚು ಮಾಡುತ್ತಿದ್ದರಂತೆ. ಅಲ್ಲದೆ, ಪೆಟ್ರೋಲ್​ಗೂ ಕೂಡ ಖರ್ಚಾಗುತ್ತಿತ್ತಂತೆ. ಇದೀಗ ಕುದುರೆ ಖರೀದಿಸಿರುವ ಬಾಬುಲಾಲ್​ಗೆ ಎರಡೆರಡು ಖರ್ಚು ಉಳಿಯುತ್ತಿದೆಯಂತೆ.

    ಈ ಬಗ್ಗೆ ಮಾತನಾಡಿರುವ ಅವರು ಕುದುರೆ ಸವಾರಿಯಿಂದ ದೇಹದ ಫಿಟ್​ನೆಸ್​ ಚೆನ್ನಾಗಿ ಇಟ್ಟುಕೊಳ್ಳಬಹುದು. ಅಲ್ಲದೆ, ವಾಯುಮಾಲಿನ್ಯ ಕಡಿಮೆ ಮಾಡಲು ಸಹಕಾರಿ ಆಗುತ್ತದೆ ಎಂದಿದ್ದಾರೆ. ಬಾಬುಲಾಲ್​ ಅವರು ಪ್ರತಿದಿನ ಮನೆಯಿಂದ ಕಚೇರಿಗೆ 30 ಕಿ.ಮೀ ಪ್ರಯಾಣಿಸುತ್ತಾರಂತೆ. 6 ಮಂದಿಯ ಕುಟುಂಬದಲ್ಲಿ ಒಂದು ಕಾರು ಮತ್ತು 4 ಬೈಕ್​ಗಳಿವೆ. ಇದೀಗ ದೇಶದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ ನೂರರ ಗಡಿ ದಾಟಿರುವುದರಿಂದ, ಯಾರೊಬ್ಬರು ಬಾಬುಲಾಲ್​ ನಿರ್ಧಾರವನ್ನು ಗೇಲಿ ಮಾಡಲು ಆಗುವುದಿಲ್ಲ. ಏಕೆಂದರೆ, ಪೆಟ್ರೋಲ್​ ದರ ಹೆಚ್ಚಳದ ಬರೆ ಎಲ್ಲರಿಗೆ ತಗುಲಿರುವುದು ನೂರಕ್ಕೆ ನೂರು ಸತ್ಯ. (ಏಜೆನ್ಸೀಸ್​)

    ಒಂದು ವಾರದ ಹಿಂದಷ್ಟೇ ಮದುವೆ ಆಗಿದ್ದ ಸಬ್​ ಇನ್ಸ್​​ಪೆಕ್ಟರ್​ ಹೊಸ ವರ್ಷದಂದೇ ದುರಂತ ಸಾವು!

    ದೇವರೊಂದಿಗೆ ದೇವರಾದ ಅಪ್ಪು! ಲಕ್ಷ್ಮೀ ವಿಗ್ರಹದ ಜತೆಗೆ ನಗುವಿನ ಪರಮಾತ್ಮನಿಗೂ ಪೂಜೆ

    ಅಧ್ಯಕ್ಷನ ಸಹಿಯನ್ನೇ ಪೋರ್ಜರಿ ಮಾಡಿ 60 ಲಕ್ಷ ರೂಪಾಯಿ ಕಬಳಿಸಲು ಯತ್ನಿಸಿದ ಪಿಡಿಒ ಸಸ್ಪೆಂಡ್​

    VIDEO| ಪುಷ್ಪ ಚಿತ್ರದ ಡಿಲಿಟೆಡ್​ ದೃಶ್ಯ ಬಿಡುಗಡೆ ಮಾಡಿದ ಚಿತ್ರತಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts