More

    ಪಿ.ವಿ. ಸಿಂಧು vs ಸಾನಿಯಾ ಮಿರ್ಜಾ: ತೆಲಂಗಾಣದಲ್ಲಿ ಜೋರಾಯ್ತು ಕ್ರೀಡಾ ರಾಜಕೀಯ..!

    ಹೈದರಾಬಾದ್​: ತೆಲಂಗಾಣ ಬಿಜೆಪಿ ಶಾಸಕ ಹೊಸ ವಿವಾದವೊಂದನ್ನು ಸೃಷ್ಟಿ ಮಾಡಿದ್ದಾರೆ. ತೆಲಂಗಾಣ ರಾಜ್ಯ ಕ್ರೀಡಾ ರಾಯಭಾರಿಯನ್ನಾಗಿ ಸಾನಿಯಾ ಮಿರ್ಜಾರನ್ನೇ ಯಾಕೆ ಮಾಡಬೇಕು? ಎರಡು ಬಾರಿ ವಿಶ್ವ ಚಾಂಪಿಯನ್​ ಪಿ.ವಿ. ಸಿಂಧು ಅವರನ್ನೇಕೆ ಮಾಡಬಾರದು ಎಂದು ಸಿಎಂ ಚಂದ್ರಶೇಖರ್​ ರಾವ್​ ಅವರನ್ನು ಪ್ರಶ್ನಿಸಿದ್ದಾರೆ.

    ಪಾಕಿಸ್ತಾನದ ಸೊಸೆಯನ್ನೇ ಏಕೆ ಕ್ರೀಡಾ ರಾಯಭಾರಿಯನ್ನಾಗಿ ಆಯ್ಕೆ ಮಾಡಿದ್ದೀರಿ? ಸಾನಿಯಾ ಮಿರ್ಜಾ ಮುಸ್ಲಿಂ ಮತ್ತು ಪಿವಿ ಸಿಂಧು ಹಿಂದೂ ಆಗಿದ್ದಾರೆಯೇ? ನೀವು ಇದರಲ್ಲಿ ಜಾತಿ ರಾಜಕಾರಣ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ಶಾಸಕ ತೆಲಂಗಾಣ ಸಿಎಂರನ್ನು ಟೀಕಿಸಿದ್ದಾರೆ.

    ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದವರು ಪಿವಿ ಸಿಂಧು ಹೊರತು ಸಾನಿಯಾ ಮಿರ್ಜಾ ಅಲ್ಲ ಎಂದಿರುವ ಬಿಜೆಪಿ ಶಾಸಕ, ಸಾನಿಯಾ ಮಿರ್ಜಾಗೆ ಯಾವುದೇ ಕ್ರೆಡಿಟ್​ ಅಥವಾ ಗೌರವ ಕೊಡಬೇಡಿ, ಏಕೆಂದರೆ ಸಿಂಧು ಸಾಧನೆ ಮುಂದೆ ಸಾನಿಯಾ ಸಾಧನೆ ಅಷ್ಟಕಷ್ಟೇ ಎಂದಿದ್ದಾರೆ. ಅಲ್ಲದೆ, ತಮ್ಮ ಆಯ್ಕೆಯನ್ನು ಮತ್ತೊಮ್ಮೆ ಪರಿಶೀಲಿಸಿ ಎಂದು ಬಿಜೆಪಿ ಶಾಸಕ ಸಲಹೆ ನೀಡಿದ್ದಾರೆ.

    ರಾಜ್ಯದಲ್ಲಿ ಕ್ರೀಡಾ ಸ್ಥಿತಿ ಕೆಟ್ಟದಾಗಿದೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕ್ರೀಡಾ ಕ್ಷೇತ್ರದಲ್ಲಿ ಪ್ರಗತಿಯೇ ಕಂಡಿಲ್ಲ. ಸ್ಟೇಡಿಯಂ, ಸ್ಪೋರ್ಟ್ಸ್​ ಸಂಕೀರ್ಣಗಳು ಅಭಿವೃದ್ಧಿಯಾಗಿಲ್ಲ. ಕ್ರೀಡೆಗಾಗಿ ಕೇಂದ್ರದಿಂದ ಬಿಡುಗಡೆಯಾಗಿರುವ ನಿಧಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ. (ಏಜೆನ್ಸೀಸ್​)

    ದಿನಗೂಲಿ ನೌಕರರು ಸಹ ಪ್ರತಿ ಲೀಟರ್​ ಪೆಟ್ರೋಲ್​ಗೂ ತೆರಿಗೆ ಕಟ್ತಾರೆ: ನಟ ಧನುಷ್​ಗೆ ಹೈಕೋರ್ಟ್​ ತರಾಟೆ!

    ಬಿಗ್​ಬಾಸ್​ ಟ್ರೋಫಿ ಗೆಲ್ಲದಿರುವುದೇ ದಿವ್ಯಾ ಉರುಡುಗಗೆ ಅದೃಷ್ಟವಂತೆ: ಫ್ಯಾನ್ಸ್​ ಕೊಟ್ಟ ಅಚ್ಚರಿಯ ಕಾರಣ ಇಲ್ಲಿದೆ..!

    ಪ್ರಭಾಸ್​-ಪ್ರಶಾಂತ್​ರ ಸಲಾರ್​ನಲ್ಲಿ ಕತ್ರಿನಾ ಕೈಫ್​ ಡಾನ್ಸ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts