More

    2002ರ ಗಲಭೆ ಬಳಿಕ ಮೋದಿ ಸರ್ಕಾರ ಕೆಡವಲು ಅಹ್ಮದ್​ ಪಟೇಲ್​ಗೆ ತೀಸ್ತಾ ಸೆಟಲ್ವಾಡ್​ ನೆರವು: ಗುಜರಾತ್​ ಪೊಲೀಸ್​

    ಅಹಮದಾಬಾದ್​: 2002ರಲ್ಲಿ ನಡೆದ ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ನಕಲಿ ಸಾಕ್ಷ್ಯಾಧಾರ ಸೃಷ್ಟಿಸಿದ ಪ್ರಕರಣದಲ್ಲಿ ಇತ್ತೀಚೆಗೆ ಬಂಧನವಾಗಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್​ಗೆ ಜಾಮೀನು ನೀಡದಂತೆ ಗುಜರಾತ್ ಪೊಲೀಸರು ಅಹಮದಾಬಾದ್​ ಸೆಷೆನ್ಸ್​ ಕೋರ್ಟ್​ನಲ್ಲಿ ಅಫಿಡೆವಿಟ್​ ಸಲ್ಲಿಸಿದ್ದಾರೆ. ಅಲ್ಲದೆ, ಆಗಿನ ಬಿಜೆಪಿ ಸರ್ಕಾರವನ್ನು ಬೀಳಿಸಲು ದಿವಂಗತ ಕಾಂಗ್ರೆಸ್​ ನಾಯಕ ಅಹ್ಮದ್​ ಪಟೇಲ್ ಜೊತೆ ಸೇರಿ ಬಹುದೊಡ್ಡ ಪಿತೂರಿ ನಡೆಸಿದ್ದರು ಎಂದು ಗುಜರಾತ್​ ಪೊಲೀಸರು ಅಫಿಡೆವಿಟ್​ನಲ್ಲಿ ತಿಳಿಸಿದ್ದಾರೆ.

    ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವುದು ಅಥವಾ ಬೀಳಿಸುವುದು ಅರ್ಜಿದಾರ (ಸೆಟಲ್ವಾಡ್​)ಳ ಪ್ರಮುಖ ರಾಜಕೀಯ ಉದ್ದೇಶವಾಗಿತ್ತು. ಗುಜರಾತಿನ ಅಮಾಯಕರ ಮೇಲೆ ತಪ್ಪು ಭಾವನೆ ಮೂಡಿಸುವ ಪ್ರಯತ್ನ ಪ್ರತಿಫಲವಾಗಿ ಪ್ರತಿಪಕ್ಷದಿಂದ ಸೆಟಲ್ವಾಡ್​ ಅವರು ಅಕ್ರಮ ಹಣ ಪಡೆದಿರುವುದರ ಜೊತೆಗೆ ಅನೇಕ ಸೌಲಭ್ಯಗಳನ್ನು ಹೊಂದಿದ್ದಾರೆ ಎಂದು ಅಹಮದಾಬಾದ್​ ಸೆಷೆನ್ಸ್​ ಕೋರ್ಟ್​ ಮುಂದೆ ಸಲ್ಲಿಸಿರುವ ಅಫಿಡೆವಿಟ್​ನಲ್ಲಿ ಗುಜರಾತಿನ ವಿಶೇಷ ತನಿಖಾ ತಂಡ (ಎಸ್​ಐಟಿ) ಉಲ್ಲೇಖಿಸಿದೆ.

    ಸಾಕ್ಷಿಯ ಹೇಳಿಕೆಗಳನ್ನು ಉಲ್ಲೇಖಿಸಿರುವ ಎಸ್​ಐಟಿ, ಅಹ್ಮದ್​ ಪಟೇಲ್​ ಅವರಿಗಾಗಿ ಪಿತೂರಿಯನ್ನು ನೆಡೆಸಲಾಗಿತ್ತು. 2002 ರಲ್ಲಿ ನಡೆ ಗೋಧ್ರಾ ಗಲಭೆಯ ನಂತರ ಪಟೇಲ್ ಆದೇಶದ ಮೇರೆಗೆ ಸೆಟಲ್ವಾಡ್ 30 ಲಕ್ಷ ರೂ. ಪಡೆದುಕೊಂಡಿದ್ದರು. ಬಿಜೆಪಿ ಸರ್ಕಾರದ ಹಿರಿಯ ನಾಯಕರ ಹೆಸರನ್ನು ಗಲಭೆ ಪ್ರಕರಣಗಳಲ್ಲಿ ಸಿಲುಕಿಸಲು ದೆಹಲಿಯಲ್ಲಿ ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಪ್ರಮುಖ ರಾಷ್ಟ್ರೀಯ ಪಕ್ಷ(ಕಾಂಗ್ರೆಸ್​)ದ ನಾಯಕರನ್ನು ಸೆಟಲ್ವಾಡ್ ಭೇಟಿಯಾಗುತ್ತಿದ್ದರು ಎಂದು ಎಸ್‌ಐಟಿ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

    ಸಾಕ್ಷಿದಾರರೊಬ್ಬ ಹೇಳಿಕೆಯನ್ನು ಉಲ್ಲೇಖಿಸಿರುವ ಎಸ್​ಐಟಿ, ರಾಜ್ಯಸಭಾ ಸ್ಥಾನಕ್ಕೆ ಕೇವಲ ಶಬಾನಾ ಮತ್ತು ಜಾವೇದ್​ರಿಗೆ ಮಾತ್ರ ಯಾಕೆ ಅವಕಾಶ ಕೊಡುತ್ತೀರಾ? ನನ್ನನ್ನು ರಾಜ್ಯಸಭಾ ಸದಸ್ಯರಾಗಿ ಮಾಡುವುದಿಲ್ಲ ಏಕೆ ಎಂದು 2006ರಲ್ಲಿ ಸೆಟಲ್ವಾಡ್​ ಕೇಳಿದ್ದರು ಎಂದಿರುವ ಎಸ್​ಐಟಿ, ಸೆಟಲ್ವಾಡ್ ವಿರುದ್ಧದ ತನಿಖೆ ಇನ್ನೂ ನಡೆಯುತ್ತಿದೆ. ಈ ಸಮಯದಲ್ಲಿ ಅವರು ಬಿಡುಗಡೆಯಾದರೆ, ಸಾಕ್ಷಿಗಳನ್ನು ಬೆದರಿಸಲು ಮತ್ತು ಹಾಳುಮಾಡಲು ಪ್ರಯತ್ನಿಸಬಹುದು. ಹೀಗಾಗಿ ಅವರಿಗೆ ಜಾಮೀನು ನೀಡಬಾರದೆಂದು ಎಸ್‌ಐಟಿ ನ್ಯಾಯಾಲಯಕ್ಕೆ ಮನವಿ ಮಾಡಿದೆ.

    ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿಡಿ ಠಕ್ಕರ್ ಅವರು ಎಸ್‌ಐಟಿಯ ಉತ್ತರವನ್ನು ದಾಖಲಿಸಿಕೊಂಡಿದೆ. ಸೆಟಲ್ವಾಡ್​ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. 2002ರಲ್ಲಿ ನಡೆದ ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ನಕಲಿ ಸಾಕ್ಷ್ಯಾಧಾರ ಸೃಷ್ಟಿಸಿದ ಪ್ರಕರಣದಲ್ಲಿ ಇತ್ತೀಚೆಗೆ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಅವರನ್ನು ಎಸ್​ಐಟಿ ಬಂಧಿಸಿದೆ.

    ಇತ್ತೀಚೆಗಷ್ಟೇ ಗುಜರಾತ್​ ಗಲಭೆ ಪ್ರಕರಣ ಸಂಬಂಧ ಹೈಕೋರ್ಟ್​ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್​, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಲೀನ್​ ಚಿಟ್​ ನೀಡಿದೆ. ಗುಜರಾತ್​ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿ ಮತ್ತು ಹಾಲಿ ಪ್ರಧಾನಿ ಮೋದಿ ಸೇರಿದಂತೆ 63 ಮಂದಿಯ ಪಾತ್ರವಿದೆ ಎಂದು ಆರೋಪಿಸಲಾಗಿತ್ತು. ಘಟನೆ ಸಂಬಂಧ ವಿಶೇಷ ತನಿಖಾ ತಂಡವು ತನಿಖೆ ನಡೆಸಿ ಮೋದಿ ಅವರಿಗೆ ಕ್ಲೀನ್​ ಚಿಟ್​ ನೀಡಿತ್ತು. ಇದನ್ನು ಪ್ರಶ್ನಿಸಿ, ಗಲಭೆಯಲ್ಲಿ ಮೃತಪಟ್ಟಿದ್ದ ಕಾಂಗ್ರೆಸ್​ ನಾಯಕ ಎಹ್ಸಾನ್ ಜಾಫ್ರಿ ಪತ್ನಿ ಜಾಕಿಯಾ ಜಫ್ರಿ ಗುಜರಾತ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್​ ಅರ್ಜಿಯನ್ನು ತಿರಸ್ಕರಿಸಿ, ಎಸ್​ಐಟಿ ತನಿಖಾ ವರದಿಯನ್ನು ಎತ್ತಿಹಿಡಿದಿತ್ತು. (ಏಜೆನ್ಸೀಸ್​)

    ಟಾಲಿವುಡ್​ನಲ್ಲಿ ಈಗ ಈ ನಟಿಯ ಮದುವೆ ಖರ್ಚಿನದ್ದೇ ಚರ್ಚೆ: ಎಷ್ಟು ಅಂತ ಗೊತ್ತಾದ್ರೆ ನಿಮಗೂ ಅಚ್ಚರಿಯಾಗುತ್ತೆ!

    ಇಬ್ಬರು ಹೆಂಡಿರ ಗೌರಿಬಿದನೂರು ಗಂಡ! ವಿವಾಹಿತೆಗೂ ಮೋಸ ಮಾಡಿ ಮತ್ತೊಂದು ಮದ್ವೆ: ಪತಿಗಾಗಿ ಇಬ್ಬರ ಜಗಳ

    ಮಧ್ಯರಾತ್ರಿ ಮಾಡಿದ ತಪ್ಪನ್ನು ಬೆಳಗಾದ ಮೇಲೆ ತಿದ್ದಿಕೊಂಡ ಸರ್ಕಾರ: ವಾಪಸ್ ಪಡೆದ ಆದೇಶಕ್ಕೆ ಮತ್ತೊಮ್ಮೆ ತಿದ್ದುಪಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts