More

    ಅಪಘಾತದ ಸಂತ್ರಸ್ತರಿಗೆ ಮೊದಲ 48 ಗಂಟೆಗಳ ಗೋಲ್ಡನ್​ ಅವರ್​ನಲ್ಲಿ ಉಚಿತ ಚಿಕಿತ್ಸೆ: ಸಿಎಂ ಸ್ಟಾಲಿನ್​ ಘೋಷಣೆ

    ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಅವರು ಜನಪರ ಕಾಳಜಿಯುಳ್ಳ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಅಪಘಾತದ ಸಂತ್ರಸ್ತರನ್ನು ಗೋಲ್ಡನ್ ಅವರ್​ನಲ್ಲಿ ಉಳಿಸಿಕೊಳ್ಳಲು “ಇನ್ನುಯಿರ್​ ಕಾಪ್ಪೊಮ್​” ಯೋಜನೆಯನ್ನು ಶನಿವಾರ (ಡಿ.18) ಜಾರಿಗೆ ತಂದಿದ್ದಾರೆ.

    ಅಪಘಾತವಾದ 48 ಗಂಟೆಗಳವರೆಗೆ ಸಂತ್ರಸ್ತನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಈ ಯೋಜನೆ ಅಡಿಯಲ್ಲಿ ಸರ್ಕಾರವೇ ಭರಿಸಲಿದೆ. ಸುಮಾರು 1 ಲಕ್ಷ ರೂ.ವರೆಗಿನ ಗುರುತಿಸಲ್ಪಟ್ಟ 81 ಜೀವ ಉಳಿಸುವ ಕಾರ್ಯವಿಧಾನಗಳು ಈ ಯೋಜನೆಯಲ್ಲಿ ಒಳಗೊಂಡಿವೆ. ಯೋಜನೆ ಅಡಿ 609 ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ಸಹ ಆಯ್ಕೆ ಮಾಡಲಾಗಿದೆ.

    ಅಪಘಾತದ ಸಂತ್ರಸ್ತ ಸ್ಥಳೀಯನೇ ಆಗಿರಲಿ ಅಥವಾ ವಿದೇಶಿಗರೇ ಆಗಿರಲಿ ಆದರೆ, ರಾಜ್ಯದ ವ್ಯಾಪ್ತಿಯೊಳಗೆ ಅಪಘಾತ ಸಂಭಿವಿಸಿದ್ದರೆ ಈ ಯೋಜನೆ ಅನ್ವಯವಾಗಲಿದೆ ಎಂದು ಸಿಎಂ ಸ್ಟಾಲಿನ್​ ತಿಳಿಸಿದ್ದಾರೆ. ಅಪಘಾತದ ಬಳಿಕ ಆಸ್ಪತ್ರೆಗೆ ದಾಖಲಾದ 48 ಗಂಟೆಗಳವರೆಗೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಲಿದೆ. ಮೊದಲ 48 ಗಂಟೆ ಗೋಲ್ಡನ್​ ಅವರ್​ ಆಗಿರಲಿದೆ ಎಂದು ತಿಳಿಸಿದರು.

    ಈ ಯೋಜನೆಯನ್ನು ತಮಿಳುನಾಡಿನ ಚೆಂಗಲಪಟ್ಟು ಜಿಲ್ಲೆ ಮಾರವಥೂರ್​ನಲ್ಲಿರುವ ಆದಿಪರಾಶಕ್ತಿ ಮೆಡಿಕಲ್​ ಕಾಲೇಜಿನಲ್ಲಿ ಉದ್ಘಾಟನೆ ಮಾಡಿದರು. ಈ ಯೋಜನೆ ಕಾರ್ಯಾಚರಣೆಗೆ ಆಯ್ಕೆಯಾಗಿರುವ 609 ಆಸ್ಪತ್ರೆಗಳಲ್ಲಿ 201 ಸರ್ಕಾರಿ ಆಸ್ಪತ್ರೆ ಮತ್ತು 408 ಖಾಸಗಿ ಆಸ್ಪತ್ರೆಗಳು ಆಯ್ಕೆ ಆಗಿವೆ.

    ಒಂದು ವೇಳೆ ಸಂತ್ರಸ್ತ 48 ಗಂಟೆಯ ನಂತರೂ ಆರೋಗ್ಯದಲ್ಲಿ ಸ್ಥಿರತೆ ಕಾಣದಿದ್ದರೆ, ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದಾಗಿದೆ.

    1. ಸಂತ್ರಸ್ತ ಮುಖ್ಯಮಂತ್ರಿಗಳ ಸಮಗ್ರ ಆರೋಗ್ಯ ವಿಮಾ ಯೋಜನೆ (ಸಿಎಂಸಿಎಚ್​ಐಎಸ್​) ಅಡಿಯಲ್ಲಿದ್ದರೆ ಚಿಕಿತ್ಸೆಯನ್ನು ಅದೇ ಆಸ್ಪತ್ರೆಯಲ್ಲಿ ಮುಂದುವರಿಸಬಹುದು.
    2. ಈ ಮೇಲಿನ ಯೋಜನೆ ಅಥವಾ ಯಾವುದೇ ಆರೋಗ್ಯ ವಿಮಾ ಯೋಜನೆ ವ್ಯಾಪ್ತಿಗೆ ಸಂತ್ರಸ್ತ ಒಳಪಡದೇ ಇದ್ದರೆ ಮತ್ತು 48 ಗಂಟೆಯ ಬಳಿಕ ಆರೋಗ್ಯದಲ್ಲಿ ಸ್ಥಿರತೆ ಕಂಡರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಮತ್ತೆ ಉಚಿತ ಚಿಕಿತ್ಸೆಯನ್ನು ಮುಂದುವರಿಸಬಹುದು.
    3. ಒಂದು ವೇಳೆ ಸಂತ್ರಸ್ತ ಸರ್ಕಾರಿ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದಲ್ಲಿ ಮತ್ತು ತನ್ನದೇ ಹಣ ಅಥವಾ ವಿಮಾ ಯೋಜನೆಯನ್ನು ಬಳಸಿಕೊಳ್ಳಲು ಇಚ್ಛಿಸಿದ್ದಲ್ಲಿ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಅಥವಾ ತನ್ನ ಆಯ್ಕೆಯ ಆಸ್ಪತ್ರೆಗೆ ಸ್ಥಳಾಂತರ ಆಗಬಹುದಾಗಿದೆ.
    (ಏಜೆನ್ಸೀಸ್​)

    ಸ್ನೇಹಿತನ ಫ್ಲ್ಯಾಟ್​ಗೆ ರಾತ್ರಿ ಯುವತಿಯರ ಭೇಟಿ: ಮೋಜು ಮಸ್ತಿ ಬೆನ್ನಲ್ಲೇ ಮಧ್ಯರಾತ್ರಿ ನಡೆಯಿತು ಮಹಾ ದುರಂತ

    ರೈತ ಮಕ್ಕಳ ವಿದ್ಯಾನಿಧಿಗೆ ಪಹಣಿ ತೊಡಕು; ತಂದೆ-ತಾಯಿ ಹೆಸರಲ್ಲಿ ಪಹಣಿ ಇರಬೇಕು ಎಂಬ ನಿಯಮ

    ಶ್ವಾನಗಳ ಮೇಲೆ ಮಂಗಗಳ ಸೇಡು!; ಮಹಾರಾಷ್ಟ್ರದಲ್ಲಿ ಕೋತಿಮರಿಯ ಹತ್ಯೆಗೆ ನಾಯಿಮರಿಗಳ ಬೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts