More

    ‘ಅಂಧತ್ವ ಮುಕ್ತ ಬಳ್ಳಾರಿ’ ಅಭಿಯಾನ- ಡಾ.ಜನಾರ್ದನ

    ಬಳ್ಳಾರಿ: ಜಿಲ್ಲಾಡಳಿತ ಸಿಎಸ್‌ಆರ್ ಅನುದಾನದ ಅಡಿ ‘ಅಂಧತ್ವ ಮುಕ್ತ ಬಳ್ಳಾರಿ’ ಅಭಿಯಾನ ಕೈಗೆತ್ತಿಕೊಂಡಿದ್ದು, ಜಿಲ್ಲೆಯ ಸಾರ್ವಜನಿಕ ರ ಕಾರ್ಯಕ್ರಮದ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜನಾರ್ದನ ಮನವಿ ಮಾಡಿದರು.

    ನಗರದ 13ನೇ ವಾರ್ಡಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಅಂಧತ್ವ ಮುಕ್ತ ಬಳ್ಳಾರಿ’ ಅಭಿಯಾನದ ಶಿಬಿರದಲ್ಲಿ ಅವರು ಮಾತನಾಡಿದರು. ನೇತ್ರ ಸಮಸ್ಯೆಯಿಂದ ಬಳಲುತ್ತಿರುವವರ ಅನುಕೂಲಕ್ಕಾಗಿ ಉಚಿತ ಕನ್ನಡಕ ಹಾಗೂ ದೃಷ್ಟಿದೋಷ ನಿವಾರಣೆಗೆ ಅಗತ್ಯ ಉಳ್ಳವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲು ಜಿಲ್ಲಾಡಳಿತ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆ ಭೇಟಿ ನೀಡಿ, ದೃಷ್ಟಿದೋಷ ಉಳ್ಳವರನ್ನು ಗುರುತಿಸುತ್ತಿದ್ದಾರೆ. ಆಯಾ ಪ್ರದೇಶದಲ್ಲಿ ಶಿಬಿರ ಆಯೋಜಿಸಿ, ಸ್ಥಳದಲ್ಲೇ ಕನ್ನಡ ವಿತರಿಸಲಾಗುತ್ತಿದೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅಗತ್ಯವುಳ್ಳವರನ್ನು ಶಸ್ತ್ರ ಚಿಕಿತ್ಸಾ ದಿನಾಂಕವನ್ನು ತಿಳಿಸಲಾಗುತ್ತದೆ ಎಂದರು.

    ಕಣ್ಣುಗಳನ್ನು ಮುಟ್ಟುವ ಮೊದಲು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪಟಾಕಿ ಸಿಡಿಸಿ ಆಚರಿಸುವ ಹಬ್ಬಗಳಲ್ಲಿ ಮುಂಜಾಗೃತೆ ವಹಿಸಸಬೇಕು. ಡಯಾಬಿಟಿಕ್ ರೆಟಿನೋಪತಿ, ಗ್ಲಾಕೋಮದಂತಹ ರೋಗಗಳನ್ನು ಪತ್ತೆ ಹಚ್ಚಲು ವೈದ್ಯರ ಬಳಿ ಸಕಾಲದಲ್ಲಿ ಪರೀಕ್ಷಿಸಿಕೊಳ್ಳಸಬೇಕು. ಆಹಾರದಲ್ಲಿ ತರಕಾರಿ, ಸೊಪ್ಪನ್ನು ಯಥೇಚ್ಚವಾಗಿ ಬಳಸಬೇಕು. ಈ ಎಲ್ಲ ಕ್ರಮಗಳಿಂದ ಅಂಧತ್ವವನ್ನು ತಡೆಗಟ್ಟಬಹುದು ಎಂದರು.

    ಮಹಾನಗರ ಪಾಲಿಕೆಯ ಸದಸ್ಯ ಇಬ್ರಾಹಿಂ ಬಾಬು, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ವೀರೇಂದ್ರ ಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮೋಹನ ಕುಮಾರಿ, ಮಿಲ್ಲರ್‌ಪೇಟೆ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೌಜನ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಜಯರಾಮ್, ಯೂಸುಫ್ ಇದ್ದರು.

    ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೆ 18033 ಜನರನ್ನು ಪರೀಕ್ಷೆಗೊಳಪಡಿಸಿದ್ದು, ಈ ಪೈಕಿ 3710 ದೃಷ್ಟಿದೋಷ ಉಳ್ಳವರನ್ನು ಪತ್ತೆ ಮಾಡಲಾಗಿದೆ. 2904 ಫಲಾನುಭವಿಗಳಿಗೆ ಈಗಾಗಲೇ ಕನ್ನಡಕಗಳನ್ನು ವಿತರಿಸಲಾಗಿದೆ. ನೇತ್ರ ಶಸ್ತ್ರಚಿಕಿತ್ಸೆ ಅಗತ್ಯವುಳ್ಳ 676 ಫಲಾನುಭವಿಗಳನ್ನು ಗುರುತಿಸಲಾಗಿದ್ದು, 472 ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದೆ.
    | ಡಾ.ಎಚ್.ಎಲ್.ಜನಾರ್ದನ, ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts