More

    ದೇಶ ಹಾಗೂ ರಾಜ್ಯಕ್ಕೆ ಬಿಜೆಪಿ ಚೊಂಬು

    ಬಳ್ಳಾರಿ : ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶ ಹಾಗೂ ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
    ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಶುಕ್ರವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಿಡುಗಡೆಯಾಗಬೇಕಾದ 18 ಸಾವಿರ ಕೋಟಿ ರೂ. ಬದಲಿಗೆ ಕೊಟ್ಟಿದ್ದು ಖಾಲಿ ಚೊಂಬು ಮಾತ್ರ. ಕರ್ನಾಟಕದಿಂದ ತೆರಿಗೆ ಮೂಲಕ ಕೇಂದ್ರಕ್ಕೆ ನೂರು ರೂ. ಕೊಟ್ಟರೆ, ಮರಳಿ 13 ರೂ. ಸಿಗುತ್ತದೆ. ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು. ಅದರಂತೆ ಅವುಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಕಾಂಗ್ರೆಸ್ ಪಕ್ಷ ಏನು ಹೇಳುತ್ತದೆ, ಅದನ್ನೇ ಮಾಡುತ್ತದೆ ಎಂದರು. ಈ ಲೋಕಸಭಾ ಚುನಾವಣೆ ಸಂವಿಧಾನ ರಕ್ಷಣೆಗಾಗಿ ನಡೆಯುತ್ತಿದೆ. ಈ ಬಾರಿ ಬಿಜೆಪಿಗೆ ಅಧಿಕಾರ ಕೊಟ್ಟರೆ ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದಾರೆ. ದೇಶದ ಜನತೆಗೆ ಸಂವಿಧಾನ ರಕ್ಷಣೆಯಾಗಿದೆ. ಸಂವಿಧಾನ ಬರುವ ಮುಂಚೆ ದಲಿತ, ದುರ್ಬಲರಿಗೆ ಯಾವುದೇ ಅಧಿಕಾರ ಇದ್ದಿಲ್ಲ. ರಾಜ- ಮಹಾರಾಜರು ತಮಗೆ ಬೇಕಾದ ಅಧಿಕಾರ ಮಾಡುತ್ತಿದ್ದರು. ಆ ದಿನ ಜನಸಾಮಾನ್ಯರೊಂದಿಗೆ ಸೇರಿ ಕಾಂಗ್ರೆಸ್ ಹೋರಾಟ ನಡೆಸಿ ಸ್ವಾತಂತ್ರ್ಯ ಹಾಗೂ ಸಂವಿಧಾನ ತಂದಿದೆ. ಆದರೆ, ಈಗ ಬಿಜೆಪಿಯವರು ಸಂವಿಧಾನ ತೆಗೆದುಹಾಕಲು ಆಲೋಚಿಸುತ್ತಿದ್ದಾರೆ. ದೇಶದಲ್ಲಿ ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ತಿ ಇನ್ನೂ ಹುಟ್ಟಿಲ್ಲ. ಹೀಗಾಗಿ, ಕಾಂಗ್ರೆಸ್, ಇಂಡಿಯಾ ಒಕ್ಕೂಟ ಸಂವಿಧಾನ ಉಳಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಅದಾನಿ ಸೇರಿದ ಕೆಲವೇ ಕೆಲ ಆಯ್ದ ಜನತೆಗೆ ದೇಶದ ಸಂಪತ್ತು ನೀಡುತ್ತಿದೆ. ಅವರು ಸಿರಿವಂತರಿಗೆ ಹಣ ಕೊಟ್ಟರೆ, ನಾವು ಬಡವರಿಗೆ ಹಣ ಕೊಡುತ್ತೇವೆ. ರಾಜ್ಯ ಸರ್ಕಾರ ಗ್ಯಾರಂಟಿಗಳ ಮೂಲಕ ದೇಶದ ಜನತೆಗೆ ದಾರಿ ತೋರಿಸಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿಯೋಜನೆ, ಯುವನಿಧಿ, ಗೃಹಜ್ಯೋತಿ ಮೂಲಕ ರಾಜ್ಯದ ಜನತೆಗೆ ನೀಡುತ್ತಿದೆ. ಈವರೆಗೂ ಯಾವುದೇ ಸರ್ಕಾರ ಈ ಯೋಜನೆಗಳನ್ನು ನೀಡಿಲ್ಲ. ಮಹಾಲಕ್ಷ್ಮಿ ಯೋಜನೆ ಮೂಲಕ ದೇಶದ ಎಲ್ಲ ಬಡವರ ಮನೆಗಳನ್ನು ಗುರುತಿಸಿ ಪ್ರತಿ ಬಡ ಕುಟುಂಬದ ಮಹಿಳೆಯನ್ನು ಆಯ್ಕೆ ಮಾಡಿ ಅವರ ಬ್ಯಾಂಕ್ ಖಾತೆಗೆ ಒಂದು ಲಕ್ಷ ರೂ. ಹಾಕಲಾಗುವುದು. ರಾಜ್ಯ ಸರ್ಕಾರ ಈಗಾಗಲೇ 2ಸಾವಿರ ರೂ. ನೀಡುತ್ತಿದ್ದು, ಇದರೊಂದಿಗೆ ಕಾಂಗ್ರೆಸ್ ನಿಂದ 8500 ರೂ. ಕೊಡಲಾಗುವುದು. ಈ ಮೂಲಕ ದೇಶದ ಜನರನ್ನು ಲಕ್ಷಾದೀಶರನ್ನು ಮಾಡಲಾಗುವುದು. ನರೇಂದ್ರ ಮೋದಿ ಅವರು ದೇಶಕ್ಕೆ ಕೋವಿಡ್ ತಂದ ರೀತಿಯಲ್ಲಿ ನಿರುದ್ಯೋಗವನ್ನು ತಂದಿದ್ದಾರೆ. ಕೊರೊನಾ ಓಡಿಸಲು ದೇಶದ ಜನತೆಗೆ ರಸ್ತೆಯಲ್ಲಿ ನಿಂತು ಗಂಟೆ ಜಾಗಟೆ ಭಾರಿಸಿ ಎಂದಿದ್ದರು, ಈಗ ನಿರುದ್ಯೋಗಿಗಳಿಗೆ ರಸ್ತೆ ಬದಿ ಪಕೋಡ ಮಾರಾಟ ಮಾಡಿ ಎನ್ನುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್ ನಿಂದ ನಿರುದ್ಯೋಗಿಗಳಿಗೆ ನರೇಗಾ ಮೂಲಕ ದೇಶದ ಯುವಕರಿಗೆ ಉದ್ಯೋಗ ಒದಗಿಸುವ ಯೋಜನೆ ರೂಪಿಸಲಾಗುವುದು. ಆಶಾ, ಅಂಗನವಾಡಿ ಕಾರ್ಯಕರ್ತೆಯರ ಆದಾಯ ದ್ವಿಗುಣ ಮಾಡಲಾಗುವುದು. ಮನರೇಗಾ ಕೂಲಿಯನ್ನು 400 ರೂ. ಹೆಚ್ಚಿಸಲಾಗುವುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರೈತರ ಎಲ್ಲ ಸಾಲ ಮನ್ನಾ ಮಾಡಲಾಗುವುದು. ರೈತರ ಬೆಳೆಗಳಿಗೆ ಸರಿಯಾದ ಬೆಲೆ ನೀಡಲು ಎಂಎಸ್ ಪಿ ಜಾರಿಗೊಳಿಸಲಾಗುವುದು. ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಲಾಗುವುದು. ಜಿಎಸ್ ಟಿಯನ್ನು ಸರಳಗೊಳಿಸಲಾಗುವುದು. ಜಿಲ್ಲೆಯಲ್ಲಿ ಜೀನ್ಸ್ ಕ್ಯಾಪಿಟಲ್ ಮಾಡುವುದಾಗಿ ಭರವಸೆ ನೀಡಿದ್ದೆ. ಇದನ್ನು ನಿಜ ಮಾಡಿ ತೋರಿಸುತ್ತೇನೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದು, ಯೋಜನೆ ಜಾರಿಗೊಳ್ಳಲಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts