More

    ದೇಶದ ಅಭಿವೃದ್ಧಿ ಮಾಡಿದ್ದೇವೆ, ವಿಭಜನೆಯಲ್ಲ

    ಪಟನಾ: 2014 ಮತ್ತು 2019ರಲ್ಲಿ ಸಿಕ್ಕ ಸ್ಪಷ್ಟ ಜನಾದೇಶವನ್ನು ದೇಶದ ಅಭಿವೃದ್ಧಿಗೆ ಸದುಪಯೋಗ ಮಾಡಿದ್ದೇವೆ. 10 ವರ್ಷಗಳಲ್ಲಿ ಆಗಿರುವ ಬದಲಾವಣೆ ಜನರ ಮುಂದಿದೆ. ಆದರೆ, ಬಿಜೆಪಿಗೆ ಬಹುಮತ ಬಂದರೆ ಸಂವಿಧಾನ ಬದಲಿಸುತ್ತಾರೆ ಎಂದು ಕಾಂಗ್ರೆಸ್ಸಿಗರು ಪದೇಪದೆ ಸುಳ್ಳು ಹರಡುತ್ತಿದ್ದು, ಸಂವಿಧಾನವನ್ನು ಮತ್ತು ಮೀಸಲಾತಿ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಬದಲಿಸುವುದಿಲ್ಲ ಮತ್ತು ಸಿಎಎ ಜಾರಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.

    ಸೋಮವಾರ ಬಿಹಾರದ ಝುಂಝುರ್​ಪುರದಲ್ಲಿ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಷಾ, ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಇಂಡಿ ಕೂಟ ‘ಅಪ್ಪಿತಪ್ಪಿಯೂ ಗೆದ್ದರೆ’ ಪ್ರಧಾನಿ ಪಟ್ಟಕ್ಕಾಗಿ ಗೊಂದಲ ಉಂಟಾಗಲಿದೆ ಎಂದು ವ್ಯಂಗ್ಯವಾಡಿದರು. ಇಂಡಿ ಕೂಟ ‘ಘಮಂಡಿಯಾ ಘಟಬಂಧನ್’ (ಅಹಂಕಾರಿಗಳ ಒಕ್ಕೂಟ) ಎಂದು ಛೇಡಿಸಿದರು. ಇಂಡಿ ಕೂಟ ಜಯಶಾಲಿ ಯಾದರೆ ಪ್ರಧಾನಿ ಯಾರಾಗಲಿದ್ದಾರೆ ಎಂದು ಪ್ರಶ್ನಿಸಿದ ಷಾ, ಅದಕ್ಕೆ ತಾವೇ ಉತ್ತರ ನೀಡಿದರು. ಎಂ.ಕೆ. ಸ್ಟಾಲಿನ್, ಶರದ್ ಪವಾರ್, ಲಾಲು ಪ್ರಸಾದ್ ಮತ್ತು ಮಮತಾ ಬ್ಯಾನರ್ಜಿಯಂಥ ನಾಯಕರು ಸರದಿ ಪ್ರಕಾರ ಒಂದೊಂದು ವರ್ಷ ಪ್ರಧಾನಿಯಾಗಲು ಒಪ್ಪಬಹುದು. 5 ವರ್ಷದ ಅವಧಿಯಲ್ಲಿ ‘ಏನಾದರೂ ಉಳಿದರೆ ಅದಕ್ಕೆ ರಾಹುಲ್ ಬಾಬಾ ತೃಪ್ತಿಪಡಬೇಕಾಗಬಹುದು’ ಎಂದು ಷಾ ಕುಟುಕಿದರು.

    ಅಪಘಾತದಿಂದ ಷಾ ಪಾರು: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೆಲಿಕಾಪ್ಟರ್ ಟೇಕ್ ಆಫ್ ಆಗುವ ವೇಳೆ ಸ್ವಲ್ಪ ಹೊತ್ತಿನಲ್ಲೇ ನಿಯಂತ್ರಣ ಕಳೆದುಕೊಂಡಿತು. ಅದೃಷ್ಟವಷಾತ್ ಗೃಹ ಸಚಿವರು ಭಾರೀ ಅಪಘಾತದಿಂದ ಪಾರಾಗಿದ್ದಾರೆ. ಸೋಮವಾರದಂದು ಚುನಾವಣಾ ಪ್ರಚಾರ ಸಭೆ ಮುಗಿಸಿ ಬಿಹಾರದ ಬೇಗುಸರಾಯ್ನಿಂದ ಟೇಕಾಫ್ ಆಗುತ್ತಿದ್ದಾಗ ಈ ಘಟನೆ ನಡೆದಿದೆ. ಪೈಲಟ್​ನ ಸಮಯೋಚಿತ ತೀರ್ವನದಿಂದ ಹೆಲಿಕಾಪ್ಟರ್ ಕೆಲವೇ ಕ್ಷಣಗಳಲ್ಲಿ ನಿಯಂತ್ರಣಕ್ಕೆ ಬಂದಿತು.

    ನಾಮಪತ್ರ ಹಿಂಪಡೆದು ಬಿಜೆಪಿ ಸೇರಿದ ಇಂದೋರ್ ಕೈ ಅಭ್ಯರ್ಥಿ: ನವದೆಹಲಿ: ಗುಜರಾತ್​ನ ಸೂರತ್​ನಲ್ಲಿ ಚುನಾವಣೆ ಮುನ್ನವೇ ಬಿಜೆಪಿ ಅಭ್ಯರ್ಥಿ ಅವಿರೋಧ ಗೆಲುವು ಸಾಧಿಸಿದ ಬೆನ್ನಲ್ಲೇ ಅಚ್ಚರಿಯ ಬೆಳವಣಿಗೆಯಲ್ಲಿ ಮಧ್ಯಪ್ರದೇಶದ ಇಂದೋರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಪಕ್ಷ ಮತ್ತೊಂದು ಆಘಾತ ಅನುಭವಿಸಿದೆ. ಇಂದೋರ್​ನಿಂದ ಕಾಂಗ್ರೆಸ್ ಅಕ್ಷಯ್ ಕಾಂತಿ ಬಾಮ್ ಎಂಬುವರಿಗೆ ಟಿಕೆಟ್ ನೀಡಿತ್ತು. ಆದರೆ, ಮಧ್ಯಪ್ರದೇಶ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಜತೆ ಕಾರಿನಲ್ಲಿ ಕಾಣಿಸಿಕೊಂಡ ಬಾಮ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ರಾಜ್ಯಾಧ್ಯಕ್ಷ ವಿಡಿ ಶರ್ಮಾ ನೇತೃತ್ವದ ಬಿಜೆಪಿಗೆ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರನ್ನು ಸ್ವಾಗತಿಸುತ್ತಿದ್ದೇವೆ ಎಂದು ವಿಜಯವರ್ಗೀಯ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಇಂದೋರ್​ನಲ್ಲಿ ನಾಲ್ಕನೇ ಹಂತದಲ್ಲಿ (ಮೇ 13) ಮತದಾನ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಬಾಮ್ ಸೇರಿ ಮೂವರು ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಈ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆಶಿಷ್ ಸಿಂಗ್ ಹೇಳಿದ್ದಾರೆ.

    ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಇಂದೋರ್​ನಲ್ಲಿ ಹಾಲಿ ಬಿಜೆಪಿ ಸಂಸದ ಶಂಕರ್ ಲಾಲ್ವಾನಿ ವಿರುದ್ಧ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಅಕ್ಷಯ್ ಬಾಮ್ನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಬಾಮ್ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯ ಕಾಂಗ್ರೆಸ್ ನಾಯಕರು, ಬಾಮ್ನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇ ತಪ್ಪು ಎಂದು ಕಿಡಿಕಾರಿದ್ದಾರೆ. ‘ಬಾಮ್ ನಾಮಪತ್ರ ಹಿಂಪಡೆಯುವ ಸಾಧ್ಯತೆ ಬಗ್ಗೆ ಈ ಹಿಂದೆಯೇ ಎಚ್ಚರಿಕೆ ನೀಡಿದ್ದೆ. ನಮ್ಮಂತಹ ಕಾರ್ಯಕರ್ತರು ವರ್ಷಗಳಿಂದ ಕಾಂಗ್ರೆಸ್​ಗೆ ಸೇವೆ ಸಲ್ಲಿಸುತ್ತಿದ್ದರೂ ಟಿಕೆಟ್ ನೀಡಿಲ್ಲ’ ಕಾಂಗ್ರೆಸ್ ನಾಯಕ ದೇವೇಂದ್ರ ಸಿಂಗ್ ಯಾದವ್ ಬೇಸರ ಹೊರಹಾಕಿದ್ದಾರೆ.

    ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು: ಪ್ರಾಣಾಪಾಯದಿಂದ ಪಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts