More

    ನನ್ನ ಆಡಳಿತದಲ್ಲಿ ಅಶಿಸ್ತು, ದುಷ್ಕೃತ್ಯಗಳು ಹೆಚ್ಚಾದ್ದಲ್ಲಿ ಸರ್ವಾಧಿಕಾರಿಯಾಗಿ ಬದಲಾಗಬೇಕಾಗುತ್ತದೆ: ಸಿಎಂ ಸ್ಟಾಲಿನ್​ ಎಚ್ಚರಿಕೆ

    ಚೆನ್ನೈ: ನನ್ನ ಆಡಳಿತದಲ್ಲಿ ಅಶಿಸ್ತು ಮತ್ತು ದುಷ್ಕೃತ್ಯಗಳು ಹೆಚ್ಚಾದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ನಾನು ಸರ್ವಾಧಿಕಾರಿಯಾಗಿ ಬದಲಾಗಬೇಕಾಗುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಸೋಮವಾರ ಖಡಕ್​ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

    ತಮಿಳುನಾಡಿನ ನಮಕ್ಕಲ್​​ನಲ್ಲಿ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸ್ಟಾಲಿನ್​, ಕಾನೂನು ಪ್ರಕಾರ ಮತ್ತು ಜನರ ಪರವಾಗಿ ಕಾರ್ಯನಿರ್ವಹಿಸಬೇಕು ಎಂದರು. ಯಾರೇ ಆಗಲಿ ಕಾನೂನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ನಾನು ತುಂಬಾ ಪ್ರಜಾಸತ್ತಾತ್ಮಕವಾಗಿ ಬದಲಾಗಿದ್ದೇನೆ ಎಂದು ನನ್ನ ಆಪ್ತರು ಹೇಳುತ್ತಿದ್ದಾರೆ. ಪ್ರತಿಯೊಬ್ಬರ ಅಭಿಪ್ರಾಯವನ್ನು ಆಲಿಸುವುದು ಮತ್ತು ಗೌರವಿಸುವುದು ಪ್ರಜಾಪ್ರಭುತ್ವವಾಗಿದೆ. ಪ್ರಜಾಪ್ರಭುತ್ವ ಎಂದರೆ ಯಾರೂ, ಏನು ಬೇಕಾದರೂ ಮಾಡುವಂಥದ್ದಲ್ಲ. ಅಶಿಸ್ತು ಮತ್ತು ದುಷ್ಕೃತ್ಯಗಳು ಹೆಚ್ಚಾದರೆ, ನಾನು ಸರ್ವಾಧಿಕಾರಿಯಾಗಿ ಬದಲಾಗುತ್ತೇನೆ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ನಾನಿದನ್ನು ಕೇವಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಹೇಳುತ್ತಿಲ್ಲ. ಬದಲಾಗಿ ಎಲ್ಲರಿಗೂ ಹೇಳುತ್ತಿದ್ದೇನೆ ಎಂದು ಸ್ಟಾಲಿನ್​ ಹೇಳಿದರು.

    ತಮ್ಮ ಗಂಡಂದರಿಗೆ ಅಧಿಕಾರ ಬಿಟ್ಟುಕೊಡದಂತೆ ಮಹಿಳಾ ಪ್ರತಿನಿಧಿಗಳಿಗೂ ಇದೇ ಸಂದರ್ಭದಲ್ಲಿ ಸಿಎಂ ಸ್ಟಾಲಿನ್ ಸೂಚನೆ ನೀಡಿದರು.

    ಈ ಹಿಂದೆ ಡಿಎಂಕೆ ನಾಯಕ ಎ.ರಾಜಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ‘ರಾಜ್ಯ ಸ್ವಾಯತ್ತತೆ’ ನೀಡುವಂತೆ ಮನವಿ ಮಾಡಿದ್ದರು ಮತ್ತು ಸ್ವತಂತ್ರ ದೇಶವನ್ನು ಹುಡುಕಲು ನಮ್ಮನ್ನು ಪ್ರೇರೇಪಿಸಬೇಡಿ ಎಂದಿದ್ದರು. ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ರಾಜಾ, ದ್ರಾವಿಡ ಚಳವಳಿಯ ಐಕಾನ್, ಪೆರಿಯಾರ್ ಸ್ವತಂತ್ರ ತಮಿಳುನಾಡುಗಾಗಿ ನಿಂತಿದ್ದರೂ, ಡಿಎಂಕೆ ಅದರಿಂದ ದೂರ ಸರಿಯಿತು. ಪಕ್ಷವು ಪೆರಿಯಾರ್ ಅವರನ್ನು ಒಪ್ಪಿಕೊಂಡರೂ, ಸಮಗ್ರತೆ ಮತ್ತು ಪ್ರಜಾಪ್ರಭುತ್ವವನ್ನು ಬೆಂಬಲಿಸಿತು ಎಂದಿದ್ದಾರೆ. (ಏಜೆನ್ಸೀಸ್​)

    VIDEO| ಕಾರಿನ ಒಳಗೆ ಗನ್ ಹಿಡಿದ ಕೇಕೆ ಹಾಕಿದ ಮೂಸೆವಾಲಾ ಹಂತಕರು: ಎರಡು ವಿಡಿಯೋ ವೈರಲ್​​

    ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಮಹಿಳೆಯ ಮಗನ ಕ್ರೀಡೆಗೆ ಡಿಕೆಶಿ ನೆರವಿ‌ನ ಭರವಸೆ

    ಶಾಸಕ ಜಮೀರ್​ಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್: 5 ಕಡೆಗಳಲ್ಲಿ 40ಕ್ಕೂ ಅಧಿಕ ಅಧಿಕಾರಿಗಳ ತಂಡದಿಂದ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts