More

    ತಮನ್ನಾ ಮುಂದೆಯೇ ಬೌನ್ಸರ್ಸ್​ಗಳ ಅನುಚಿತ ವರ್ತನೆ! ಮುಜುಗರಕ್ಕೀಡಾದ ಮಿಲ್ಕಿ ಬ್ಯೂಟಿ

    ಹೈದರಾಬಾದ್​: ಮಿಲ್ಕಿ ಬ್ಯೂಟಿ ತಮನ್ನಾ, ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ತಮ್ಮ ಮುಂದಿನ ಚಿತ್ರ “ಬಬ್ಲಿ ಬೌನ್ಸರ್​” ಚಿತ್ರದ ಪ್ರಚಾರಕ್ಕಾಗಿ ನಿನ್ನೆ ಹೈದರಾಬಾದ್​ಗೆ ಭೇಟಿ ನೀಡಿದ್ದರು. ಈ ಸಿನಿಮಾ ಬೌನ್ಸರ್​ಗಳ ಜೀವನದ ಬಗ್ಗೆ ಬೆಳಕು ಚೆಲ್ಲುತ್ತದೆ. ಆದರೆ, ಕಾಕತಾಳೀಯ ಎಂಬಂತೆ ನಿನ್ನೆ ಬೌನ್ಸರ್​ಗಳ ಅನುಚಿತ ವರ್ತನೆಯಿಂದಾಗಿ ಸ್ವತಃ ತಮನ್ನಾ ಮುಜುಗರಪಡುವಂತಾಯಿತು.

    ಚಿತ್ರದ ಪ್ರಚಾರದ ವೇಳೆ ತಮನ್ನಾ ಅವರ ಫೋಟೋ ಕ್ಲಿಕ್ಕಿಸಿಕೊಳ್ಳಲು ಟಾಲಿವುಡ್​ನ ಫೋಟೋಗ್ರಾಫರ್​ಗಳು ಮುಗಿಬಿದ್ದರು. ಅವರಲೊಬ್ಬರು ತಮನ್ನಾ ಜೊತೆ ವಿಡಿಯೋ ಬೈಟ್​ ತೆಗೆದುಕೊಳ್ಳಲು ಬಯಸಿದ್ದರು. ಆದರೆ, ಬೌನ್ಸರ್​ಗಳು ಅದಕ್ಕೆ ಅವಕಾಶ ಕೊಡಲಿಲ್ಲ. ಅಲ್ಲದೆ, ಬೌನ್ಸರ್​ಗಳಲ್ಲಿ ಒಬ್ಬ ಮಾಧ್ಯಮದವರ ವಿರುದ್ಧ ಕೆಟ್ಟ ಪದ ಬಳಸಿದನು ಎಂದು ಆರೋಪಿಸಲಾಗಿದೆ. ಈ ಸಂಗತಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು.

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಬೌನ್ಸರ್​ ಒಬ್ಬರ ಕಸದಬುಟ್ಟಿಯನ್ನು ಮೇಲೆತ್ತಿಕೊಂಡು ಹೊಡೆಯುವುದಾಗಿ ಫೋಟೋಗ್ರಾಫರ್​ಗಳಿಗೆ ಬೆದರಿಕೆ ಹಾಕುತ್ತಿರುವ ದೃಶ್ಯವು ಇದೆ. ಈ ಘಟನೆ ಹೈದರಾಬಾದ್​ನ ಖಾಸಗಿ ಸ್ಟುಡಿಯೋ ಒಂದರಲ್ಲಿ ನಡೆದಿದೆ.

    ಯಾವುದು ಅಡಚಣೆಯಾಗಲಿ, ತೊಂದರೆಯಾಗಲಿ ಅಥವಾ ಗಲಾಟೆ ಆಗದಂತೆ ತಡೆಯುವುದು ಬೌನ್ಸರ್​ಗಳ ಕೆಲಸ. ಆದರೆ, ಈ ಪ್ರಕರಣದಲ್ಲಿ ಬೌನ್ಸರ್​ಗಳೇ ತೊಂದರೆ ಉಂಟುಮಾಡಿದ್ದಾರೆ. ವಿಡಿಯೋ ವೈರಲ್​ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಬಬ್ಲಿ ಬೌನ್ಸರ್​ ಮಹಳಾ ಪ್ರಧಾನ ಸಿನಿಮಾ. ಈ ಸಿನಿಮಾ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸೆ. 23ರಂದು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

    ಶಾಲೆಯ ಲಿಫ್ಟ್​ ಬಾಗಿಲುಗಳ​ ಮಧ್ಯೆ ಸಿಲುಕಿ ಶಿಕ್ಷಕಿ ಸಾವು: ಮಟ ಮಟ ಮಧ್ಯಾಹ್ನವೇ ನಡೆಯಿತು ಭಯಾನಕ ಘಟನೆ

    ಶೋ ಟಾಪರ್ ಆದ ರೂಪೇಶ್ ಶೆಟ್ಟಿ..

    ಶರಣಾಗಬಯಸಿದ ಆರೋಪಿ; ಆ ಕ್ಷಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts