More

    ಸುಖ ನಿದ್ರೆಗೆ ನಿಮ್ಮ ಸಿನಿಮಾ ಇರೋ ಥಿಯೇಟರ್​ಗಿಂತ ಒಳ್ಳೆಯ ಸ್ಥಳ ಇನ್ನೆಲ್ಲಿದೆ? ನೆಟ್ಟಿಗನ ಪ್ರಶ್ನೆಗೆ ಸ್ವರಾ ಉತ್ತರ ಹೀಗಿದೆ…

    ಮುಂಬೈ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಹಾಗೂ ಇಲ್ಲಸಲ್ಲದ್ದನ್ನು ಕೇಳಿ ಬೇಸರ ಉಂಟು ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್​ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ.

    ಇದೀಗ ಅದೇ ರೀತಿಯ ಕಾಮೆಂಟ್​ಗೆ ಬಾಲಿವುಡ್​ ಬೋಲ್ಡ್​ ಬ್ಯೂಟಿ ಸ್ವರಾ ಭಾಸ್ಕರ್​ ಉತ್ತರ ನೀಡಿದ್ದಾರೆ. ಸ್ವರಾ ಅವರು ತಮ್ಮ ಮುಂಬರುವ “ಜಹಾನ್​ ಚರ್ರ್​ ಯಾರ್​” ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಸ್ವರಾ ಅವರು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದರು. ನೆಟ್ಟಿಗನೊರ್ವ ನಿಮ್ಮ ಸಿನಿಮಾಗೆ ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ್ದು, ಇದಕ್ಕೆ ಉತ್ತರವಾಗಿ ಸ್ವರಾ ಧನ್ಯವಾದಗಳನ್ನು ತಿಳಿಸಿದ್ದರು. ಇದಾದ ಬಳಿಕ ಸ್ವರಾರನ್ನು ಕೆಲ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

    ಬನ್ನಿ ಸ್ವಾಗತ. ನಮ್ಮ ಅಪಾರ್ಟ್​ಮೆಂಟ್​ನ ನಿರ್ಮಾಣದ ಕೆಲಸ ಸಾಗುತ್ತಿದೆ. ಮಲಗಲು ಸರಿಯಾದ ಜಾಗವಿಲ್ಲ. ನಿಮ್ಮ ಸಿನಿಮಾ ಬಿಡುಗಡೆಯಾಗುವ ಸಮಯದಲ್ಲಿ ಚೆನ್ನಾಗಿ ನಿದ್ದೆ ಮಾಡಲು ಚಿತ್ರಮಂದಿರಗಿಂತಹ ಒಳ್ಳೆಯ ಸ್ಥಳ ಇನ್ನೆಲ್ಲಿದೆ ಎಂದು ನೆಟ್ಟಿಗನೊಬ್ಬ ಟ್ವೀಟ್​ ಮಾಡುವ ಮೂಲಕ ಸ್ವರಾ ಅವರ ಕಾಲೆಳೆದಿದ್ದಾನೆ. ಇದಕ್ಕೆ ಖಡಕ್​ ಆಗಿ ಪ್ರತಿಕ್ರಿಯೆ ನೀಡಿರುವ ಸ್ವರಾ, ಆಹಾ.. ನಿಮ್ಮ ಹೆಚ್ಚು ಅಭ್ಯಾಸ ಮಾಡಿದ ಹಾಸ್ಯವನ್ನು ಪ್ರಸ್ತುತ ಪಡಿಸಲು ನಿಮಗೆ ಅವಕಾಶ ನೀಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ನಾನು ಈ ಮಾಡಿದ ಪ್ರತಿಕ್ರಿಯೆಯ ಟ್ವೀಟ್​ ಅನ್ನು ನಿಮ್ಮ ಹುಡುಗರಿಗೆ ತೋರಿಸು ಹೋಗು ಎಂದಿದ್ದಾರೆ. ಸದ್ಯ ಸ್ವರಾ ಅವರ ಟ್ವೀಟ್​ಗೆ ಪರ-ವಿರೋಧ ವ್ಯಕ್ತವಾಗುತ್ತಿದೆ.

    ಅಂದಹಾಗೆ ಜಹಾನ್​ ಚರ್ರ್​ ಯಾರ್​ ಸಿನಿಮಾ ಸೆ.16ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಮೆಹರ್ ವಿಜ್, ಪೂಜಾ ಚೋಪ್ರಾ ಮತ್ತು ಶಿಖಾ ತಲ್ಸಾನಿಯಾ ಸಹ ನಟಿಸಿದ್ದಾರೆ. (ಏಜೆನ್ಸೀಸ್​)

    ಮಹಿಳೆಯ ಮೇಲೆ ಕೈ ಮಾಡಿದ ಬಿಜೆಪಿ ನಾಯಕನನ್ನು ತಕ್ಷಣ ಬಂಧಿಸುವಂತೆ ಮಹಿಳಾ ಆಯೋಗ ಆಗ್ರಹ

    ನಾಪತ್ತೆಯಾದ 9 ವರ್ಷದ ಬಳಿಕ ಮರಳಿ ಗೂಡು ಸೇರಿದ ಹುಡುಗಿ: ಈಕೆಯ ಕತೆ ಕೇಳಿದ್ರೆ ಮನಕಲಕುತ್ತೆ

    ಉಪರಾಷ್ಟ್ರಪತಿ ಚುನಾವಣೆ: ಮತದಾನ ಆರಂಭ, ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts