More

    ಬಾಲಿವುಡ್​​ ಟಾರ್ಗೆಟ್​ ಆಗಿರುವುದೇಕೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಟಿ ಸ್ವರಾ ಭಾಸ್ಕರ್​!

    ಮುಂಬೈ: ಪ್ರಸ್ತುತ ಹಿಂದಿ ಚಿತ್ರರಂಗ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಸ್ಟಾರ್​ ಚಿತ್ರಗಳು ಸೇರಿದಂತೆ ಬಾಲಿವುಡ್​ನಲ್ಲಿ ತೆರೆಕಂಡ ಬಹುತೇಕ ಚಿತ್ರಗಳು ಮಕಾಡೆ ಮಲುಗುತ್ತಿವೆ. ಪ್ರೇಕ್ಷಕರನ್ನು ಸೆಳೆಯುವಲ್ಲಿ ಬಾಲಿವುಡ್​ ವಿಫಲವಾಗುತ್ತಿದೆ. ಚಿತ್ರ ಬಹಿಷ್ಕಾರ ಅಭಿಯಾನವೂ ಕೂಡ ಹಿಂದಿ ಸಿನಿ​ ಮಂದಿಯ ನಿದ್ದೆಗೆಡಿಸಿದ್ದು, ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಹಿಂದಿ ಚಿತ್ರರಂಗ ಇದೀಗ ಸಿಲುಕಿಕೊಂಡಿದೆ. ಇದಕ್ಕೆ ಕಾರಣ ಏನು ಎಂಬುದನ್ನು ನಟಿ ಸ್ವರಾ ಭಾಸ್ಕರ್​ ತಿಳಿಸಿದ್ದಾರೆ.

    ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ವರಾ, ಕೆಲವರು ತಮ್ಮ ರಾಜಕೀಯ ಕಾರ್ಯಸೂಚಿಯನ್ನು ಸಾಧಿಸುವ ಸಲುವಾಗಿ ಬಾಲಿವುಡ್​ ಅನ್ನು ಕೆಳಮಟ್ಟಕ್ಕೆ ಇಳಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಬಾಲಿವುಡ್ ಯಾವಾಗಲೂ ದೇಶದಲ್ಲಿ ಜಾತ್ಯತೀತತೆಯ ದಾರಿದೀಪವಾಗಿದೆ ಆದರೆ, ಅದು ಕೆಲವರಿಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ.

    ಸಾಕಷ್ಟು ನೆಗಿಟಿವ್​ ಅಂಶಗಳು ಬಾಲಿವುಡ್ ಅನ್ನು ಸುತ್ತುಕೊಂಡಿವೆ. ಬಾಲಿವುಡ್​ ಕುರಿತು ಸಾಕಷ್ಟು ಸುಳ್ಳುಗಳು ಹರಿದಾಡುತ್ತಿದೆ. ಇದು ಖಚಿತವಾಗಿಯು ರಾಜಕೀಯ ಅಜೆಂಡಾದಿಂದ ನಡೆಸಲ್ಪಡುತ್ತಿದೆ. 109 ವರ್ಷಗಳಲ್ಲಿ ಬಾಲಿವುಡ್ ಭಾರತೀಯ ಜಾತ್ಯತೀತತೆಯನ್ನು ಎತ್ತಿ ಹಿಡಿಯುತ್ತಾ ಬಂದಿದೆ. ನಾವು ಯಾವ ರೀತಿಯ ಚಿತ್ರಗಳನ್ನು ಮಾಡಿದ್ದೇವೆ ನೋಡಿ, ನಾವು ಯಾವಾಗಲೂ ಎಲ್ಲರೂ ಸಮಾನರು, ಸಮಾಜ ವಿಭಜನೆಗಿಂತ ಪ್ರೀತಿ ದೊಡ್ಡದು ಎಂಬ ಸಂದೇಶವನ್ನು ನೀಡಿದ್ದೇವೆ ಎಂದು ಹೇಳಿದರು.

    ಭಾರತದಲ್ಲಿ ಕೇಸರಿ ರೀತಿಯ ಬಹುಸಂಖ್ಯಾತ ಗುರುತನ್ನು ಸ್ಥಾಪಿಸಲು ಬಯಸುವ ಅಜೆಂಡಾಕ್ಕೆ ಬಾಲಿವುಡ್​ ಒಂದು ಸಮಸ್ಯೆಯಾಗಿದೆ. ಭಾರತದ ಜಾತ್ಯತೀತತೆಯನ್ನು ಅಪಖ್ಯಾತಿಗೊಳಿಸಬೇಕಾದರೆ, ಭಾರತದ ಜಾತ್ಯತೀತತೆಯ ಮುಖ್ಯವಾಹಿನಿಯಾಗಿರುವ ಬಾಲಿವುಡ್​ ಅನ್ನು ಅಪಖ್ಯಾತಿಗೊಳಿಸಬೇಕು ಮತ್ತು ಕಾನೂನುಬಾಹಿರಗೊಳಿಸಬೇಕು. ಅದಕ್ಕಾಗಿಯೇ ಬಾಲಿವುಡ್ ಅನ್ನು ಗುರಿ ಮಾಡಲಾಗಿದೆ ಎಂದು ಸ್ವರಾ ಆರೋಪಿಸಿದರು. (ಏಜೆನ್ಸೀಸ್​)

    ನಿವೃತ್ತರ ದರ್ಬಾರ್​ಗೆ ಬ್ರೇಕ್: ಸಚಿವಾಲಯದಲ್ಲೇ 40ಕ್ಕೂ ಹೆಚ್ಚು ಜನ; ಕ್ರಮಕ್ಕೆ ಮುಖ್ಯ ಕಾರ್ಯದರ್ಶಿ ಸೂಚನೆ

    ಅದೃಷ್ಟ ಕೈಕೊಟ್ಟಿತ್ತು!; ಅಬ್ಬರಿಸಲು ರೆಡಿಯಾದ ಲೇಖಚಂದ್ರ!

    8100 ಶಾಲಾ ಕೊಠಡಿಗಳ ನಿರ್ಮಾಣ: ರಾಜ್ಯ ಸರ್ಕಾರದ ಐತಿಹಾಸಿಕ ತೀರ್ಮಾನ; 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಟೆಂಡರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts