More

    ಬಿಹಾರದ ಮಕ್ಕಳಿಬ್ಬರ ಖಾತೆಗೆ ಜಮೆ ಆಯ್ತು 900 ಕೋಟಿ ರೂ.ಗೂ ಅಧಿಕ ಹಣ: ಬ್ಯಾಂಕ್​ಗೆ ದೌಡಾಯಿಸಿದ ಗ್ರಾಮಸ್ಥರು!

    ಪಟನಾ: ಬಿಹಾರದಲ್ಲಿ ಅಚ್ಚರಿಯ ಮೇಲೆ ಅಚ್ಚರಿಯ ಘಟನೆಗಳು ನಡೆಯುತ್ತಿದೆ. ನಿನ್ನೆ ಬಿಹಾರದ ನಿವಾಸಿಯೊಬ್ಬ ತನ್ನ ಖಾತೆಗೆ ತಪ್ಪಾಗಿ ಜಮಾ ಆದ ಐದೂವರೆ ಲಕ್ಷ ರೂಪಾಯಿಗಳನ್ನು ಬ್ಯಾಂಕಿಗೆ ಹಿಂದುರುಗಿಸಲು ನಿರಾಕರಿಸಿದ್ದ. ಆ ಹಣವನ್ನು ಪ್ರಧಾನಿ ಮೋದಿ ತನಗೆ ಕಳುಹಿಸಿದ್ದಾರೆಂದು ಭಾವಿಸಿ, ಪೂರ್ಣವಾಗಿ ಖರ್ಚು ಮಾಡಿಬಿಟ್ಟಿರುವುದಾಗಿ ಹೇಳಿದ್ದಾನೆ. ಇದೀಗ ಅದೇ ರೀತಿಯ ಮತ್ತೊಂದು ಘಟನೆ ಬಿಹಾರದಿಂದಲೇ ವರದಿಯಾಗಿದೆ. ಆದರೆ, ಈ ಬಾರಿ ಜಮಾ ಆಗಿರುವ ಮೊತ್ತ ಕೇಳಿದ್ರೆ ತಲೆ ತಿರುಗುವುದು ಗ್ಯಾರೆಂಟಿ.

    ಬಿಹಾರದ ಕತಿಹಾರ್​ ಜಿಲ್ಲೆಯ ಇಬ್ಬರು ಶಾಲಾ ವಿದ್ಯಾರ್ಥಿಗಳ ಬ್ಯಾಂಕ್​ ಖಾತೆಗೆ ಬರೋಬ್ಬರಿ 900 ಕೋಟಿ ರೂಪಾಯಿಗೂ ಅಧಿಕ ಹಣ ಜಮೆ ಆಗಿದೆ. ಮನೆ ಕತಿಹಾರ್​ ಬ್ಯಾಂಕಿನಲ್ಲಿ ಈ ಘಟನೆ ನಡೆದಿದೆ. ಈ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ಘಟನೆಯಿಂದ ಇಡೀ ಗ್ರಾಮವೇ ಹುಬ್ಬೇರಿಸಿದ್ದು, ನಮಗೂ ಹಣ ಬಂದಿರಬಹುದು ಅಂದುಕೊಂಡು ತಮ್ಮ ತಮ್ಮ ಖಾತೆಗಳನ್ನು ಜನರು ಪರಿಶೀಲನೆ ಮಾಡಿಕೊಳ್ಳುತ್ತಿದ್ದಾರೆ.

    ಶಾಲಾ ಸಮವಸ್ತ್ರದ ಹಣವನ್ನು ಸರ್ಕಾರ ಬ್ಯಾಂಕ್​ ಖಾತೆಗೆ ಜಮಾ ಮಾಡಿದೆಯೇ ಎಂಬುದನ್ನು ತಿಳಿಯಲು ಇಬ್ಬರು ವಿದ್ಯಾರ್ಥಿಗಳು ಎಸ್​ಬಿಐನ ಸ್ಥಳೀಯ ಸಿಪಿಸಿ (ಸೆಂಟ್ರಲೈಸ್ಡ್​ ಪ್ರೊಸೆಸಿಂಗ್​ ಸೆಂಟರ್​) ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಬ್ಯಾಂಕ್​ ಖಾತೆಯ ಹಣವನ್ನು ಪರಿಶೀಲಿಸಿದಾಗ ಇಬ್ಬರ ಖಾತೆಯಲ್ಲಿ ಬರೋಬ್ಬರಿ 900 ಕೋಟಿ ರೂ. ಹಣ ಇರುವುದನ್ನು ನೋಡಿ ಎಲ್ಲರು ಶಾಕ್​ ಆಗಿದ್ದಾರೆ.

    ವಿದ್ಯಾರ್ಥಿಗಳಾದ ಗುರುಚಂದ್ರ ವಿಶ್ವಾಸ್​ ಮತ್ತು ಅಸಿತ್​ ಕುಮಾರ್​ ಎಂಬುವರ ಖಾತೆಗೆ 900 ಕೋಟಿ ರೂ. ಜಮೆ ಆಗಿದೆ. ಇಬ್ಬರು ಕೂಡ ಅಜಾಮ್​ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬರುವ ಪಾಸ್ತಿಯಾ ಗ್ರಾಮದ ನಿವಾಸಿಗಳು. ಗುರುಚಂದ್ರ ಅಕೌಂಟ್​ ನಂಬರ್​ಗೆ 60 ಕೋಟಿ ರೂಪಾಯಿಗೂ ಅಧಿಕ ಮೊತ್ತ ಜಮೆ ಆಗಿದ್ದರೆ, ಅಸಿತ್​ ಕುಮಾರ್​ ಅಕೌಂಟ್​ ನಂಬರ್​ಗೆ 900 ಕೋಟಿ ರೂ.ಗೂ ಅಧಿಕ ಮೊತ್ತ ಜಮೆಯಾಗಿದೆ. ಇಬ್ಬರು ಭೆಲಗಂಜ್​ ಶಾಖೆಯ ಉತ್ತರ ಬಿಹಾರ್​ ಗ್ರಾಮೀಣ ಬ್ಯಾಂಕಿನಲ್ಲಿ ಅಕೌಂಟ್​ ಹೊಂದಿದ್ದಾರೆ.

    ಈ ಬೆಳವಣಿಗೆಯಿಂದಾಗಿ ಬ್ಯಾಂಕ್ ಮ್ಯಾನೇಜರ್ ಮನೋಜ್ ಗುಪ್ತಾ ಅವರು ಎರಡೂ ಮಕ್ಕಳ ಖಾತೆಯಿಂದ ಹಣ ಪಾವತಿಯನ್ನು ನಿಲ್ಲಿಸಿದ್ದಾರೆ ಮತ್ತು ಈ ವಿಷಯವು ತನಿಖೆಯಲ್ಲಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಬ್ಯಾಂಕ್​ ಖಾತೆಗೆ ತಪ್ಪಾಗಿ ಬಂದ ಲಕ್ಷಗಟ್ಟಲೇ ಹಣ… ಪ್ರಧಾನಿ ಮೋದಿ ಕಳ್ಸಿರೋದು ಎಂದ ಖಾತೆದಾರ!

    ತನ್ನ ವಿಡಿಯೋದಿಂದ ಸಸ್ಪೆಂಡ್​ ಆಗಿ, ಸರ್ಕಾರಿ ಕೆಲ್ಸಕ್ಕೆ ಗುಡ್​ ಬೈ ಹೇಳಿದ ಲೇಡಿ ಪೇದೆಗೆ ಬಂತು ಬಂಪರ್​ ಆಫರ್​!​

    6ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಕಾಮುಕ ಆತ್ಮಹತ್ಯೆಗೆ ಶರಣು: ರೈಲ್ವೆ ಹಳಿ ಮೇಲೆ ಶವ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts