More

    ಉಚಿತ ಕೊಡುಗೆಗಳ ಭರವಸೆ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ಶಿಫಾರಸು ಮಾಡಿದ ಸುಪ್ರಿಂಕೋರ್ಟ್​

    ನವದೆಹಲಿ: ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಭರವಸೆಯನ್ನು ಬ್ಯಾನ್​ ಮಾಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂಕೊರ್ಟ್​ ಶುಕ್ರವಾರ ತ್ರಿಸದಸ್ಯ ಪೀಠಕ್ಕೆ ಶಿಫಾರಸು ಮಾಡಿದೆ.

    ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ ನೇತೃತ್ವದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್​ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠವು ಈ ಶಿಫಾರಸನ್ನು ಮಾಡಿದೆ. ಈ ಚುನಾವಣಾ ಪ್ರಜಾಪ್ರಭುತ್ವದಲ್ಲಿ, ನಿಜವಾದ ಶಕ್ತಿಯು ಮತದಾರರಲ್ಲಿದೆ ಮತ್ತು ಮತದಾರರು ಪಕ್ಷಗಳು ಮತ್ತು ಅಭ್ಯರ್ಥಿಗಳನ್ನು ನಿರ್ಣಯಿಸುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿತು.

    ತೆರಿಗೆದಾರರ ನಿಧಿಗಳನ್ನು ಬಳಸಿಕೊಂಡು ಒದಗಿಸಲಾಗುವ ಉಚಿತಗಳು, ಪಕ್ಷಗಳ ಜನಪ್ರಿಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಈ ಉಚಿತ ಕೊಡುಗೆಗಳಿಂದ ರಾಜ್ಯವು ಜನರಿಗೆ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿಯನ್ನು ಸೃಷ್ಟಿಸಬಹುದು. ಎಲ್ಲ ಆಯಾಮಗಳಲ್ಲೂ ನಾವು ಈ ಪರಿಸ್ಥಿತಿಯನ್ನು ಪರಿಗಣಿಸಬೇಕು. ಪುರಾವೆಗಳು ಅಂತಿಮವಾಗಿ ಮತದಾರರ ಬಳಿಯೇ ಇರುತ್ತದೆ. ಮತದಾರರು ಪಕ್ಷಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸುತ್ತಾರೆ ಎಂದು ಭಾರತೀಯ ಚುನಾವಣಾ ಆಯೋಗದ ಸಾಲಿಸಿಟರ್​ ಜನರಲ್​ ಉನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಎದುರು ವಾದ ಮಂಡಿಸಿದರು.

    ಸಿಜೆಐ ಆಗಿ ಎನ್​.ವಿ. ರಮಣ ಅವರಿಗೆ ಇಂದು ಕೊನೆಯ ದಿನವಾಗಿದ್ದು, ತೀರ್ಪು ಪ್ರಕಟಿಸಿದ ಅವರು ಈ ಪ್ರಕರಣದಲ್ಲಿರುವ ಅನೇಕ ವಿಚಾರಗಳನ್ನು ಪರಿಗಣಿಸಬೇಕಿದೆ ಎಂದರು. ಅಲ್ಲದೆ, 2013ರ ಬಾಲಾಜಿ ತೀರ್ಪನ್ನು ಮರುಪರಿಗಣಿಸಲಾಗುವುದು ಎಂದು ಕೋರ್ಟ್​ ಹೇಳಿದೆ. ಬಾಲಾಜಿ ಪ್ರಕರಣದಲ್ಲಿ ಟಿವಿ ಇತ್ಯಾದಿಗಳ ವಿತರಣೆಯು ಕಲ್ಯಾಣ ಕ್ರಮವಾಗಿದೆ ಮತ್ತು ಕರಪತ್ರವಲ್ಲ ಎಂದು ತೀರ್ಪು ನೀಡಲಾಗಿತ್ತು. ಆದರೆ, ಈಗ ತ್ರಿಸದಸ್ಯ ಪೀಠವು ಅದನ್ನು ಮರುಪರಿಶೀಲಿಸಲಿದೆ.

    ಬುಧವಾರ ಮಾತನಾಡಿದ್ದ ಸಿಜೆಐ, ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಭರವಸೆ ನೀಡುವ ಅಭ್ಯಾಸವು ಒಂದು ಗಂಭೀರವಾದ ವಿಚಾರವಾಗಿದೆ. ಇದರ ಮೇಲೆ ಚರ್ಚೆ ನಡೆಯಲೇಬೇಕು. ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದು ಇದರ ಬಗ್ಗೆ ಯಾಕೆ ಚರ್ಚಿಸಬಾರದು ಎಂದು ಹೇಳಿದ್ದರು. (ಏಜೆನ್ಸೀಸ್​)

    ಕಾಂಗ್ರೆಸ್​ಗೆ ಬಿಗ್​ ಶಾಕ್​: ಎಲ್ಲ ಹುದ್ದೆಗೂ ಗುಲಾಂ ನಬಿ ಆಜಾದ್​ ರಾಜೀನಾಮೆ

    ಚಿಕ್ಕಮಗಳೂರು: ಎಷ್ಟೇ ಪ್ರಯತ್ನಿಸಿದ್ರೂ ಹನಿಟ್ರ್ಯಾಪ್​ಗೆ ಬೀಳದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಖೆಡ್ಡಾಗೆ ಕೆಡವಿದ್ಹೇಗೆ?

    ಮಾಜಿ ಸಿಎಂ ಬಿಎಸ್​ವೈ ದೆಹಲಿ ದೌಡು: ಎರಡು ದಿನ ಬಿಡಾರ, ವರಿಷ್ಠರ ಭೇಟಿಗೆ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts