More

    ವರದಕ್ಷಿಣೆ ಪಡೆದಿಲ್ಲ ಎಂದು ಅಫಿಡೆವಿಟ್​ ಸಲ್ಲಿಸಲು ಸರ್ಕಾರಿ ನೌಕರರಿಗೆ ಯುಪಿ ಸರ್ಕಾರದ ಸೂಚನೆ..!

    ಲಖನೌ: ಉತ್ತರ ಪ್ರದೇಶ ಸರ್ಕಾರವು ಸರ್ಕಾರಿ ನೌಕರರಿಗೆ ಹೊಸ ಆದೇಶ ಒಂದನ್ನು ಹೊರಡಿಸಿದೆ. ಮದುವೆಯಾದ ಸಂದರ್ಭದಲ್ಲಿ ವರದಕ್ಷಿಣೆ ಪಡೆದುಕೊಂಡಿಲ್ಲ ಎಂಬ ಅಫಿಡೆವಿಟ್​ ಸಲ್ಲಿಸುವಂತೆ ಮಹಿಳಾ ಕಲ್ಯಾಣ ಇಲಾಖೆ ಸರ್ಕಾರಿ ನೌಕರರಿಗೆ ಸುತ್ತೋಲೆಯಲ್ಲಿ ಸೂಚಿಸಿದೆ.

    ಏಪ್ರಿಲ್​ 31, 2004ರ ನಂತರ ಮದುವೆಯಾದ ಎಲ್ಲ ಸರ್ಕಾರಿ ನೌಕರರು ಅಫಿಡೆವಿಟ್​ ಅನ್ನು ಅಕ್ಟೋಬರ್​ 18ರ ಒಳಗೆ ಸಲ್ಲಿಸಬೇಕೆಂದು ಅ. 12ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ. ರಾಜ್ಯದ ಎಲ್ಲ ಇಲಾಖೆಯ ಮುಖ್ಯಸ್ಥರಿಗೆ, ಆಯುಕ್ತರಿಗೆ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್​ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಮಹಿಳಾ ಕಲ್ಯಾಣ ಇಲಾಖೆ ಸುತ್ತೋಲೆ ತಲುಪಿಸಿದ್ದು, ಪ್ರತಿಯೊಬ್ಬರು ಅಫಿಡೆವಿಟ್​ ಸಲ್ಲಿಸುವಂತೆ ಆಯಾ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಮನವಿ ಮಾಡಿದೆ.

    ವರದಕ್ಷಿಣೆ ನಿಷೇಧ ಕಾಯಿದೆ 1961ರ ಪ್ರಕಾರ, ಭಾರತದ ಎಲ್ಲಾ ಸರ್ಕಾರಿ ನೌಕರರು ಕೆಲಸಕ್ಕೆ ಸೇರುವ ಸಮಯದಲ್ಲಿ ದೃಢೀಕೃತ ಹೇಳಿಕೆಯನ್ನು ಕಡ್ಡಾಯವಾಗಿ ನೀಡುತ್ತಾರೆ. ಉತ್ತರ ಪ್ರದೇಶವು 1999ರಲ್ಲಿ ವರದಕ್ಷಿಣೆ ನಿಷೇಧ ನಿಯಮಗಳನ್ನು ಫೆಡರಲ್ ಕಾನೂನಿನ ಅನುಸಾರವಾಗಿ ರೂಪಿಸಿತು. ನಿಯಮಗಳನ್ನು ಮಾರ್ಚ್ 31, 2004 ರಂದು ತಿದ್ದುಪಡಿ ಮಾಡಲಾಯಿತು, ನಿರ್ದಿಷ್ಟವಾಗಿ ನಿಯಮ 5ರಲ್ಲಿ ಪ್ರತಿ ಸರ್ಕಾರಿ ನೌಕರನು ತನ್ನ ನೇಮಕಾತಿಯ ಸಮಯದಲ್ಲಿ, ತನ್ನ ಮದುವೆಯಲ್ಲಿ ಯಾವುದೇ ವರದಕ್ಷಿಣೆ ಸ್ವೀಕರಿಸಿಲ್ಲ ಎಂದು ನೇಮಕಾತಿ ಪ್ರಾಧಿಕಾರಕ್ಕೆ ಸ್ವಯಂ ದೃಢೀಕರಿಸಿದ ಪ್ರಮಾಣಪತ್ರವನ್ನು ಒದಗಿಸಬೇಕು.

    ವರದಕ್ಷಿಣೆ ಎಂಬುದ ಭಾರತದಲ್ಲಿ ಇಂದಿಗೂ ಜೀವಂತವಾಗಿರುವ ಪೆಡಂಭೂತವಾಗಿದೆ. ಇದು ಭಾರತದಲ್ಲಿ ಅಕ್ರಮವಾಗಿದ್ದರೂ ಕೂಡ ಸಂಪೂರ್ಣವಾಗಿ ನಿಲ್ಲಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಉಡುಗೊರೆ ರೂಪದಲ್ಲಿ ವರದಕ್ಷಿಣೆ ಪಡೆಯುವುದು ಇದೀಗ ಸಾಮಾನ್ಯವಾಗಿದೆ. ವರದಕ್ಷಿಣೆ ಪ್ರಕರಣದಡಿಯಲ್ಲಿ ಆರೋಪ ಸಾಬೀತಾದಲ್ಲಿ ಅವರಿಗೆ 15 ಸಾವಿರ ರೂ. ದಂಡ ಮತ್ತು 5 ವರ್ಷದವರೆಗೆ ಶಿಕ್ಷೆ ವಿಧಿಸಲಾಗುತ್ತದೆ. (ಏಜೆನ್ಸೀಸ್​)

    ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್‌ ಆದ್ಮಿ ಪಾರ್ಟಿ ಸರ್ವಸಿದ್ಧತೆ

    ನಿಮ್ಮ ಬಳಿ ಈ 2 ರೂ. ನಾಣ್ಯವಿದ್ರೆ ಮನೆಯಲ್ಲೇ ಕುಳಿತು 5 ಲಕ್ಷ ರೂ. ಸಂಪಾದಿಸಬಹುದು! ಷರತ್ತುಗಳು ಅನ್ವಯ

    ಅಪ್ಪನಾಗುವ ಆಸೆ ಬಿಚ್ಚಿಟ್ಟ ರಣವೀರ್​ ಸಿಂಗ್; ದೀಪಿಕಾರಂತೆ ಕ್ಯೂಟ್​ ಮಗು ಬೇಕಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts