More

    ಕ್ಯೂನಲ್ಲಿ ನಿಂತು ದಿನಕ್ಕೆ 16 ಸಾವಿರ ರೂ. ಸಂಪಾದನೆ: ಈತನ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

    ಲಂಡನ್​: ಯಾವುದಾದರೂ ಕೆಲಸ ಸಾಧನೆಗಾಗಿ ಕ್ಯೂನಲ್ಲಿ ನಿಲ್ಲುವುದೆಂದರೆ ಅದಕ್ಕಿಂತ ಸಂಕಟ ದ ಸಂಗತಿ ಬೇರೊಂದಿಲ್ಲ. ಬೇಕಿದ್ರೆ ಹಣ ಕೊಟ್ಟುಬಿಡ್ತೀನಿ ಕಾಯೋದು ಅಂದ್ರೆ ಮಾತ್ರ ನನಗೆ ಆಗುವುದಿಲ್ಲ ಅನ್ನುವವರು ಇದ್ದಾರೆ. ಆದರೂ ಕ್ಯೂ ಎಂಬುದು ಜಗತ್ತಿನ ಸಾಮಾನ್ಯ ಸಂಗತಿಯೂ ಆಗಿದೆ. ಆದರೆ, ಇದೇ ಕ್ಯೂನಿಂದ ವ್ಯಕ್ತಿಯೊಬ್ಬ ದಿನವೊಂದಕ್ಕೆ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾನೆ ಅಂದರೆ ನೀವು ನಂಬುತ್ತೀರಾ? ಈ ಸ್ಟೋರಿ ಓದಿದ್ರೆ ಖಂಡಿತ ನೀವು ಇಲ್ಲ ಎನ್ನುವುದಿಲ್ಲ.

    ಕ್ಯೂ ಎನ್ನುವುದೇ ಬೇಸರದ ಸಂಗತಿ. ಆದರೆ, ದುಡ್ಡು ಇರುವವರು ಸಮಯ ಉಳಿಸಲು ಹಣವನ್ನು ಕೂಡ ಧಾರಾಳವಾಗಿ ಖರ್ಚು ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಲಂಡನ್​ನ ವ್ಯಕ್ತಿಯೊಬ್ಬ ದಿನವೊಂದಕ್ಕೆ ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಾನೆ. ಕ್ಯೂನಲ್ಲಿ ನಿಲ್ಲಲಾಗದ ಶ್ರೀಮಂತರ ಪರ ತಾನೇ ಕ್ಯೂನಲ್ಲಿ ನಿಂತು ಅವರ ಕೆಲಸ ಮಾಡಿಕೊಡುತ್ತಾನೆ. ಅದಕ್ಕಾಗಿ ಆತ ಚಾರ್ಜ್​ ಮಾಡುವ ಮೊತ್ತ ಗಂಟೆಗೆ 20 ಪೌಂಡ್​. ಭಾರತೀಯ ಕರೆನ್ಸಿ ಪ್ರಕಾರ 2,028 ರೂಪಾಯಿ. ದಿನವೊಂದಕ್ಕೆ ಆತನ 160 ಪೌಂಡ್​ ಅಂದರೆ, 16,248 ರೂಪಾಯಿ ಸಂಪಾದನೆ ಮಾಡುತ್ತಿದ್ದಾನೆ.

    ಆ ವಿಶೇಷ ವ್ಯಕ್ತಿಯೇ ಫ್ರೆಡ್ಡಿ ಬೆಕ್ಕಿಟ್​. ಈತನಿಗೆ ಕ್ಯೂ ಸ್ವಾಭಾವಿಕವಾಗಿಯೇ ಬಂದಿದೆಯಂತೆ. ಲಂಡನ್​ ನಿವಾಸಿಯಾಗಿರುವ ಫ್ರೆಡ್ಡಿ, ಒಂದು ಉತ್ತಮ ಕಲೆ ಎಂದು ಅಭ್ಯಾಸ ಮಾಡಿದ್ದಾನಂತೆ. 31 ವರ್ಷದ ಫ್ರೆಡ್ಡಿ, ದಿನದ ಎಂಟು ಗಂಟೆಗಳ ಕಾಲ ಕ್ಯೂನಲ್ಲಿ ನಿಲ್ಲಲಿದ್ದಾನೆ. ಈ ಕೆಲಸಕ್ಕಾಗಿ ಅಗಾಧವಾದ ತಾಳ್ಮೆಯ ಅಗತ್ಯವಿದೆ.

    ಹೆಚ್ಚಿನ ಹಣವಿದ್ದೂ ಸಮಯ ಇಲ್ಲದ ಶ್ರೀಮಂತ ವ್ಯಕ್ತಿಗಳು ಅಪೊಲೊ ಥಿಯೇಟರ್‌ನಲ್ಲಿನ ಜನಪ್ರಿಯ ಕಾರ್ಯಕ್ರಮಗಳಿಗೆ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ಕೇಳಿದ್ದೇ ಅವರ ಅತ್ಯುತ್ತಮ ದಿನಗಳು ಎಂದು ಫ್ರೆಡ್ಡಿ ಹೇಳಿದ್ದಾರೆ. ಹಿರಿಯ ನಾಗರಿಕರಿಗಾರಿ ಕ್ರಿಶ್ಚಿಯನ್ ಡಿಯರ್ ಪ್ರದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕೆಲಸ ಮಾಡಲು ನಾನು ಸುಮಾರು ಎಂಟು ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ.

    ಕ್ಯೂನಲ್ಲಿ ನಿಲ್ಲುವುದು ಸುಲಭದ ಕೆಲಸವೇನಲ್ಲ. ಏಕೆಂದರೆ, ಕೊರೆಯುವ ಚಳಿಗಾಲದಲ್ಲಿಯೂ ಕ್ಯೂನಲ್ಲಿ ಕಾಯಬೇಕಾದ ಸಂದರ್ಭಗಳನ್ನು ಫ್ರೆಡ್ಡಿ ಎದುರಿಸಿದ್ದಾರೆ. ಇನ್ನು ಬೇಸಿಗೆಯಲ್ಲಿ ಲಂಡನ್‌ನಲ್ಲಿ ದೊಡ್ಡ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳು ನಡೆಯುವಾಗ, ಫ್ರೆಡ್ಡಿ ತುಂಬಾ ಬಿಜಿಯಾಗಿರುತ್ತಾನೆ. ಇನ್ನು ತನ್ನ ಕೆಲಸದ ಬಗ್ಗೆ ಫ್ರೆಡ್ಡಿ ಲಂಡನ್​ ಪ್ರಮುಖ ಪ್ರದೇಶಗಳಲ್ಲಿ ಜಾಹೀರಾತು ಸಹ ನೀಡಿದ್ದಾರೆ.

    ಇನ್ನು ಫ್ರೆಡ್ಡಿ ಅವರು 20 ಪೌಂಡ್‌ಗಳಿಗಿಂತ ಹೆಚ್ಚು ಶುಲ್ಕ ವಿಧಿಸಲು ಸಾಧ್ಯವಿಲ್ಲ. ಏಕೆಂದರೆ, ತಮ್ಮ ಕೆಲಸಕ್ಕೆ ಯಾವುದೇ ನಿರ್ದಿಷ್ಟ ಕೌಶಲ್ಯದ ಅಗತ್ಯವಿಲ್ಲ. ಆದರೆ ಇದು ತನ್ನ ಕೆಲಸವನ್ನು ಮುಗಿಸಿಕೊಂಡು ಹೆಚ್ಚಿಗೆ ಸಂಪಾದಿಸುವ ದಾರಿಯನ್ನು ಮಾಡಿಕೊಟ್ಟಿದೆ. ಅಲ್ಲದೆ, ಸರತಿ ಸಾಲುಗಳು ಹೆಚ್ಚು ಕಾಲ ಉಳಿಯದ ಕಾರಣ ಈ ಕೆಲಸವನ್ನೇ ಪೂರ್ಣಾವಧಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ಕೆಲಸವನ್ನು ಹೆಚ್ಚುವರಿಯಾಗಿ ಮಾಡುತ್ತಿದ್ದಾನೆ. ಒಟ್ಟಾರೆ ತನ್ನ ವಿಭಿನ್ನ ಕೆಲಸದಿಂದಲೇ ಫ್ರೆಡ್ಡಿ ಇದೀಗ ಮನೆಮಾತಾಗಿದ್ದಾರೆ. (ಏಜೆನ್ಸೀಸ್​)

    ನಟ ಧನುಷ್​-ಐಶ್ವರ್ಯಾ ಡಿವೋರ್ಸ್​ಗೆ ಕಾರಣವೇನು? ಸ್ಟಾರ್​ ದಂಪತಿ ಕೊಟ್ಟ ಸ್ಪಷ್ಟನೆ ಹೀಗಿದೆ…

    ಬುಕ್​ ಮಾಡಿದ್ದು ವಾಚ್​ ಆದ್ರೆ ಬಂದಿದ್ದು ಕಾಂಡೋಮ್​! ಮರುಕ್ಷಣದಲ್ಲೇ ಡೆಲಿವರಿ ಬಾಯ್​ಗೆ ಶಾಕ್​ ಕೊಟ್ಟ ಗ್ರಾಹಕ

    ಕಾಲಿವುಡ್​ಗೆ ಮತ್ತೆ ರಾಗಿಣಿ; ಎಂಟು ವರ್ಷಗಳ ನಂತರ ತಮಿಳು ಚಿತ್ರರಂಗಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts