More

    ಇಷ್ಟೊಂದು ಮಿಸ್ಟೇಕ್​ ಮಾಡಿದ್ರಾ ನಟ ಸಾಯಿ ಧರಮ್​ ತೇಜ್? ತನಿಖೆಯಲ್ಲಿ ಬೈಕ್​ ಕುರಿತ ಸ್ಫೋಟಕ ಮಾಹಿತಿ ಬಯಲು! ​​

    ಹೈದರಾಬಾದ್​: ಗಣೇಶ ಹಬ್ಬದ ದಿನವೇ ಬೈಕ್​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ತೆಲುಗು ನಟ ಸಾಯಿ ಧರಮ್ ತೇಜ್​ಗೆ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಅಪಘಾತಕ್ಕೆ ವೇಗದ ಚಾಲನೆಯೇ ಕಾರಣವೆಂದು ತಿಳಿದುಬಂದಿದ್ದು, ಧರಮ್​ ತೇಜ್​ ವಿರುದ್ಧ ಪ್ರಕರಣವೂ ದಾಖಲಾಗಿದೆ. ಅಲ್ಲದೆ, ಅವರ ಬಳಿಯಿದ್ದ ದುಬಾರಿ ಬೈಕ್​ ಕುರಿತು ಇನ್ನು ಹಲವು ವಿಚಾರಗಳು ಬೆಳಕಿಗೆ ಬಂದಿವೆ.

    ಅಪಘಾತಕ್ಕೆ ಸಂಬಂಧಿಸಿದಂತೆ ಸೈಬರಾಬಾದ್​ನ ರಾಯದುರ್ಗಮ್ ಠಾಣೆಯಲ್ಲಿ ಧರಮ್​ ತೇಜ್​ ವಿರುದ್ಧ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 10ರ ರಾತ್ರಿ 7.30 ರ ಸುಮಾರಿಗೆ‌ ಘಟನೆ ನಡೆದಿದೆ. ಟ್ರಿಯಾಂಫ್ ಬೈಕ್​ನಿಂದ ಬಿದ್ದು, ಗಾಯಗೊಂಡಿದ್ದಾರೆ. ವೇಗದ ಮತ್ತು ಬೇಜವಬ್ದಾರಿ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಹಿನ್ನೆಲ್ಲೆಯಲ್ಲಿ ಧರಮ್​ ತೇಜ್​ ವಿರುದ್ಧ ಐಪಿಸಿ ಸೆಕ್ಷನ್​ 336, 279 ಮತ್ತು ಮೋಟಾರು ಕಾಯ್ದೆ 184 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆ ಬಗ್ಗೆ ಸೈಬರಾಬಾದ್​ ಪೊಲೀಸರು ನಡೆಸಿರುವ ಪ್ರಾಥಮಿಕ ತನಿಖೆ ವೇಳೆ ಕೆಲ ಮಹತ್ವದ ಅಂಶಗಳು ಪತ್ತೆಯಾಗಿದೆ.
    ಬೆಳಕಿಗೆ ಬಂದ ಅಂಶ-1: ಘಟನೆ ವೇಳೆ ನಟನ ಬಳಿ ಇದ್ದದ್ದು ಸೆಕೆಂಡ್ ಹ್ಯಾಂಡ್ ಟ್ರಿಯಾಂಫ್ ಬೈಕ್. ಬುರಾ ಅನೀಲ್ ಅನ್ನೋನಿಂದ ಈ ಬೈಕ್ ಖರೀದಿಸಲಾಗಿದೆ. ಆದರೆ ಈ ವರೆಗೂ ನಟನ ಹೆಸರಿನಲ್ಲಿ ಬೈಕ್ ರಿಜಿಸ್ಟರ್ ಆಗಿಲ್ಲ.

    ಬೆಳಕಿಗೆ ಬಂದ ಅಂಶ-2: ವೇಗದ ಚಾಲನೆ ಹಿನ್ನೆಲೆ, ಈ ಹಿಂದೆ ಇದೇ ಬೈಕ್ ಮೇಲೆ ಕೇಸ್ ಬುಕ್ ಆಗಿತ್ತು. ಮಾದಾಪುರದ ಪರ್ವತ್ ನಗರದಲ್ಲಿ ಇದೇ ಟ್ರಿಯಾಂಫ್ ಬೈಕ್ ನಲ್ಲಿ ವೇಗನದ ಚಾಲನೆ ಮಾಡಲಾಗಿತ್ತು. 2020, ಆಗಸ್ಟ್ 2 ರಲ್ಲಿ ಇ-ಚಲನ್ ಮೂಲಕ 1135 ರೂ. ದಂಡದ ಕೇಸ್ ರಿಜಿಸ್ಟರ್​ ಆಗಿತ್ತು. 40 ಕಿಮಿ ಲಿಮಿಟ್ ಇದ್ದ ಕಡೆ, 87 ಕಿಮಿ ವೇಗದಲ್ಲಿ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಕೇಸ್​ ದಾಖಲಾಗಿತ್ತು. ನಟನಿಗೆ ಅಪಘಾತದ ಬಳಿಕ ಈ ದಂಡದ ಮೊತ್ತವನ್ನು ಅಪರಿಚಿತ ವ್ಯಕ್ತಿ ಪಾವತಿಸಿದ್ದಾನೆ.

    ಬೆಳಕಿಗೆ ಬಂದ ಅಂಶ-3: ಕೆಲ ಸಾಕ್ಷಾಧಾರಗಳ ಮೂಲಕ ಅತೀ ವೇಗದ ಚಾಲನೆ ಪತ್ತೆಯಾಗಿದೆ. ಸಿಸಿಟಿವಿ ಫುಟೇಜ್, ಕೆಲ ತಾಂತ್ರಿಕ ಸಾಕ್ಷ, ಡಿಜಿಟಲ್ ಸಾಕ್ಷಗಳಿಂದ ಮಾಹಿತಿ ಕಲೆ ಹಾಕಲಾಗಿದೆ. ಘಟನಾ ಸ್ಥಳದ ಬಳಿ 30-40 ಕಿಮಿ ವೇಗದಲ್ಲಿ ಚಾಲನೆ ಮಾಡಲು ಮಾತ್ರ ಅವಕಾಶವಿದೆ. ಆದರೆ ಘಟನಾ ಸ್ಥಳದ ಬಳಿ, ನಟ ಸುಮಾರು 75 ಕಿಮಿ ವೇಗದಲ್ಲಿದ್ದು ಬೆಳಕಿಗೆ ಬಂದಿದೆ. ದುರ್ಗಮ್ ಚೆರುವು ಬ್ರಿಡ್ಜ್ ಬಳಿ ಇನ್ನೂ ಅತೀ ವೇಗದಲ್ಲಿದ್ದದ್ದು ಪತ್ತೆಯಾಗಿದೆ. ಸುಮಾರು 100 ಕಿಮಿ ವೇಗದಲ್ಲಿ ಇತರೇ ವಾಹನಗಳನ್ನು ನಟ ಓವರ್ ಟೇಕ್ ಮಾಡಿದ್ದ.

    ಬೆಳಕಿಗೆ ಬಂದ ಅಂಶ-4: ಲಘು ಮೋಟಾರು ವಾಹನಗಳನ್ನು ಓಡಿಸಲು ಮಾತ್ರ ಚಾಲನಾ ಪರವಾನಗಿ ಹೊಂದಿದ್ದ ನಟ. ಹೀಗಾಗಿ ಆತನ ಗೇರು ಹೊಂದಿರುವ ಮೋಟಾರ್ ಸೈಕಲ್ ಡ್ರೈವಿಂಗ್ ಲೈಸೆನ್ಸ್ ಬಗ್ಗೆ ವಿಚಾರಣೆ ಮಾಡಲಾಗಿದೆ. ಗೇರ್ ಬೈಕ್ ಓಡಿಸಲು ಲೈಸೆನ್ಸ್ ಪಡೆದಿದ್ದರಾ? ಇಲ್ಲವಾ? ಅನ್ನೋದರ ಬಗ್ಗೆ ವಿಚಾರಣೆ ನಡೆಯುತ್ತಿದೆ. ಘಟನಾ ಸ್ಥಳ ಮಾದಾಪುರ ಪ್ರದೇಶದ ಸುತ್ತ ಅತೀ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆಯಾಗುತ್ತಿರುವ ಮಾಹಿತಿ ಇದೆ. ಅಲ್ಲದೆ, ಘಟನಾ ಸ್ಥಳದ ಸುತ್ತ ಈ ವರ್ಷ ಹೆಚ್ಚಾಗಿ ಸಂಚಾರಿ ನಿಯಮ ಉಲ್ಲಂಘನೆಯಾಗಿದೆ. ದ್ವಿಚಕ್ರ ವಾಹನಗಳ ವಿರುದ್ಧ 17,917 ಓವರ್‌ ಸ್ಪೀಡಿಂಗ್ ಪ್ರಕರಣಗಳು ದಾಖಲಾಗಿವೆ. ಬೈಕ್ ಸವಾರರ ವಿರುದ್ಧ 5495 ಡ್ರಂಕ್ ಆಂಡ್ ಡ್ರೈವ್ ಕೇಸ್ ಬುಕ್ ಆಗಿದೆ. (ದಿಗ್ವಿಜಯ ನ್ಯೂಸ್​)

    ನಟ ಧರಮ್ ತೇಜ್​ ಇತ್ತೀಚೆಗೆ ಖರೀದಿಸಿದ್ದ ದುಬಾರಿ ಬೈಕ್​ನಿಂದಲೇ ದುರಂತ: ಅದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

    VIDEO| ಅಪಘಾತದಲ್ಲಿ ನಟ ಧರಮ್​ ತೇಜ್​ ಸ್ಥಿತಿ ಗಂಭೀರ: ಬೈಕ್​ ಸ್ಕಿಡ್​ ಆದ ಭಯಾನಕ ವಿಡಿಯೋ ವೈರಲ್​..!

    ನಟ ಧರಮ್​ ತೇಜ್ ಬೈಕ್​ ಅಪಘಾತ ಪ್ರಕರಣ: ಟಾಲಿವುಡ್​ ನಟನ ವಿರುದ್ಧವೇ ದಾಖಲಾಯ್ತು ದೂರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts