More

    ಶಿಕ್ಷಕರು ಸಮಾಜದ ಕೊಂಡಿಯಾಗಿರಲಿ

    ಕುಶಾಲನಗರ: ಸ್ವಸ್ಥಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಕರು ಸದಾ ಸಮಾಜದ ಒಳಿತಿನ ಕೊಂಡಿಯಾಗಿರಬೇಕು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ಪಿ.ಶಶಿಧರ್ ಸಲಹೆ ನೀಡಿದರು.

    ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಕಲಾ ಶಿಕ್ಷಕ ಉ.ರಾ.ನಾಗೇಶ್ ಮಂಗಳವಾರ ವಯೋ ನಿವೃತ್ತಿಯಾದ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಂಡ್ಯದ ಖಾಸಗಿ ಸಂಸ್ಥೆಯಲ್ಲಿ ಇದ್ದ ನಾಗೇಶ್ ಅವರು ಕುಶಾಲನಗರಕ್ಕೆ ಸರ್ಕಾರಿ ಶಿಕ್ಷಕನಾಗಿ ಬಂದಾಗಿನಿಂದ ಸಮಾಜ ಕಟ್ಟುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಅವರ ಜ್ಞಾನ ಭಂಡಾರ ಅದ್ಭುತವಾಗಿದೆ ಎಂದು ಶ್ಲಾಘಿಸಿದರು.

    ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಸುಸಂಸ್ಕೃತ ಶಿಕ್ಷಕ ಹೇಗೆ ಇರಬೇಕು ಎನ್ನುವುದಕ್ಕೆ ಮಾದರಿಯಾಗಿ ಉ.ರಾ.ನಾಗೇಶ್ ಇದ್ದಾರೆ. ಇವತ್ತು ನಿವೃತ್ತಿಯಾಗುವ ಮೂಲಕ ಸಮಾಜಕ್ಕೆ ಅತ್ಯಂತ ಪ್ರಬುದ್ಧ ಸಂಪನ್ಮೂಲ ವ್ಯಕ್ತಿ ದೊರೆತಂತೆ ಆಗಿದೆ. ಸಂಘ ಸಂಸ್ಥೆಗಳು ಇವರ ಅಪ್ರತಿಮ ಬುದ್ಧಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    ಕಾಲೇಜಿನ ಉಪ ಪ್ರಾಂಶುಪಾಲ ಪರಮೇಶ್ವರಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ.ಸೋಮಶೇಖರ್, ಮಡಿಕೇರಿಯ ಹಿರಿಯ ಪತ್ರಕರ್ತ ಅನಂತಶಯನ, ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಜ್, ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಯದ್, ಎಚ್.ಜಿ.ಕುಮಾರ್, ಶಿಕ್ಷಣ ಸಂಯೋಜಕ ಹೇಮಂತ್, ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪುಷ್ಪ, ಹೆಬ್ಬಾಲೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಚ್.ಎಂ.ವೆಂಕಟೇಶ್, ಶಿಕ್ಷಕರಾದ ಹೇಮಲತಾ, ನಂದಿನಿ, ಎ.ಸಿ.ಮಂಜುನಾಥ್, ಟಿ.ಬಿ.ಮಂಜುನಾಥ್, ಮಂಜುಬಾರ್ಗವಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts