More

    ಶ್ರೀನಿವಾಸ ಪ್ರಸಾದ್ ಅವರ ಅಂತಿಮ ದರ್ಶನ ಪಡೆದ ಯದುವೀರ

    ಮೈಸೂರು: ಅಶೋಕಪುರಂನ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಹಲವು ಗಣ್ಯರು ಮಂಗಳವಾರ ಪಡೆದುಕೊಂಡರು.


    ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಲ್ಲಿಗೆ ಭೇಟಿ ನೀಡಿ, ಪ್ರಸಾದ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ನನಗೆ ಪ್ರೋತ್ಸಾಹ ನೀಡಿದ್ದರು ಎಂದು ಸ್ಮರಿಸಿಕೊಂಡರು.


    ಪ್ರಸಾದ್ ಅವರು ಮೈಸೂರು-ಚಾಮರಾಜನಗರ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದರು. ಈ ಭಾಗದಲ್ಲಿ ಅವರದ್ದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಅಗಲಿಕೆಯ ನೋವಿನಲ್ಲಿ ಅವರ ಕುಟುಂಬಸ್ಥರಿದ್ದಾರೆ. ಪ್ರಸಾದ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.


    ಅಂತಿಮ ನಮನ ಸಲ್ಲಿಸಿದ ಜಯದೇವ ಹೃದ್ರೋಗ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಪ್ರಸಾದ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.


    ತಮ್ಮ ಹಾಗೂ ಪ್ರಸಾದ್ ಅವರ ಒಡನಾಟವನ್ನು ಮೆಲುಕು ಅವರು, ಪ್ರಸಾದ್ ನಮ್ಮನ್ನೆಲ್ಲ ಅಗಲಿರುವುದು ನೋವಿನ ಸಂಗತಿಯಾಗಿದೆ. ನನ್ನದು ಅವರದು 20 ವರ್ಷದ ಪರಿಚಯ. ಪ್ರಸ್ತುತ ರಾಜಕೀಯಕ್ಕೆ ಅವರೊಬ್ಬರು ಆದರ್ಶ ರಾಜಕಾರಣಿ. ಕಿರಿಯ ರಾಜಕಾರಣಿಗಳನ್ನು ಬೆಳೆಸುವ ಗುಣ ಹೊಂದಿದ್ದರು.

    ವ್ಯಕ್ತಿಗಳು ಬಂದು ಹೋಗುತ್ತಾರೆ. ಆದರೆ, ವ್ಯಕ್ತಿತ್ವ ಹೋಗುವುದಿಲ್ಲ. ಅಂತಹ ವ್ಯಕ್ತಿತ್ವ ಪ್ರಸಾದ್ ಅವರದ್ದು. ಅವರು ಕೆಟ್ಟ ಪದಗಳನ್ನು ಉಪಯೋಗ ಮಾಡುತ್ತಿರಲಿಲ್ಲ. ನಾಲಿಗೆ ಮೇಲೆ ಒಳ್ಳೆಯ ನಿಯಂತ್ರಣವಿತ್ತು. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಿದರು.


    ಅಂತಿಮ ದರ್ಶನ ಪಡೆದ ಬಳಿಕ ಸಂಸದ ಪ್ರತಾಪ್ ಸಿಂಹ ಅವರು ಪ್ರಸಾದ್ ಅವರೊಂದಿಗೆ ಒಡನಾಟವನ್ನು ಸ್ಮರಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts