More

    ಕರೊನಾ ಎಫೆಕ್ಟ್​: ಗಂಭೀರ ಸಮಸ್ಯೆಯಿಂದ ಬಳಲುತ್ತಿರುವುದಾಗಿ ನೋವು ತೋಡಿಕೊಂಡ ನಟಿ ಶ್ರುತಿ ಹಾಸನ್​

    ಹೈದರಾಬಾದ್​: ಟಾಲಿವುಡ್​ ಸ್ಟಾರ್​ ಹೀರೋಯಿನ್​ ಶ್ರುತಿ ಹಾಸನ್​ ಇತ್ತೀಚೆಗಷ್ಟೇ ಕರೊನಾದಿಂದ ಗುಣಮುಖರಾಗಿದ್ದಾರೆ. ಕಳೆದ ತಿಂಗಳು ಕರೊನಾ ಸೋಂಕಿಗೆ ಒಳಗಾಗಿದ್ದರು. ಸುಮಾರು ಒಂದು ವಾರಗಳ ಕಾಲ ಕ್ವಾರಂಟೈನ್​ನಲ್ಲಿದ್ದರು. ಶ್ರುತಿ ಬಾಯ್​ಫ್ರೆಂಡ್​ ಶಾಂತಾ ಕೂಡ ಜತೆಯಲ್ಲಿದ್ದರು. ಇದೀಗ ಕರೊನಾದಿಂದ ಗುಣಮುಖರಾಗಿದ್ದರು ಮತ್ತೊಂದು ಸಮಸ್ಯೆಯನ್ನು ಶ್ರುತಿ ಎದುರಿಸುತ್ತಿದ್ದಾರೆ.

    ಕೋವಿಡ್​ನಿಂದ ಚೇತರಿಸಿಕೊಂಡ ಅನೇಕರು ಕರೊನಾ​ ಪರಿಣಾಮದಿಂದ ಇನ್ನಿತರ ಅಡ್ಡ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ಇದರಿಂದ ಹೊರತಾಗಿಲ್ಲ. ಟಾಲಿವುಡ್​ ನಟಿ ಮಂಚು ಲಕ್ಷ್ಮೀ ಕೂಡ ಇದೇ ರೀತಿಯ ದುಷ್ಪರಿಣಾಮ ಎದುರಿಸಿದ್ದಾರೆ. ಕರೊನಾ ನಂತರ ಅವರು ವಾಕರಿಕೆ ಮತ್ತು ಆಲಸ್ಯ ಎದುರಿಸುತ್ತಿದ್ದಾರೆ. ಇದೀಗ ಶ್ರುತಿಗೂ ಕೂಡ ಕೋವಿಡ್​ ನಂತರದ ಸಮಸ್ಯೆ ಶುರುವಾಗಿದೆ.

    ಶ್ರುತಿ ತಲೆ ನೋವು ಮತ್ತು ದೇಹದ ನೋವು ಎದುರಿಸುತ್ತಿದ್ದಾರೆ. ಅಲ್ಲದೆ, ನಿದ್ರಾ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಶ್ರುತಿ ಇನ್​ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರೆ. ಇದರಿಂದ ಅವರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇಷ್ಟು ಸಮಸ್ಯೆ ಇದ್ದರೂ ದಿನನಿತ್ಯದ ಕೆಲಸಕ್ಕೆ ಇದು ಅಡೆತಡೆಯಾಗಿಲ್ಲವಂತೆ. ನಿತ್ಯದ ವರ್ಕೌಟ್​ ನಡೆಯುತ್ತಿದ್ದು, ಶ್ರುತಿ ಶೂಟಿಂಗ್​ನಲ್ಲಿಯೂ ಭಾಗವಹಿಸುತ್ತಿದ್ದಾರೆ.

    ತೆಲುಗಿನಲ್ಲಿ ಶ್ರುತಿ ಅವರಿಗೆ ಸಿಕ್ಕಾಪಟ್ಟೆ ಆಫರ್​ಗಳು ಬರುತ್ತಿವೆ. ಬಾಲಕೃಷ್ಣ ಮತ್ತು ಮೆಗಾಸ್ಟಾರ್​ ಚಿರಂಜೀವಿ ತಮ್ಮ ಚಿತ್ರಗಳಿಗೆ ಶ್ರುತಿ ಅವರನ್ನು ನಾಯಕಿಯಾಗಿ ಖಚಿತಪಡಿಸಿದ್ದಾರೆ. ಇದರೊಂದಿಗೆ ಸಲಾರ್​ ಚಿತ್ರದಲ್ಲಿ ಪ್ರಭಾಸ್​ ಜತೆ ನಟಿಸಿದ್ದಾರೆ. ಹೀಗೆ ಸಾಕಷ್ಟು ಬಿಗ್​ ಬಜೆಟ್​ ಸಿನಿಮಾದಲ್ಲಿ ಶ್ರುತಿ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಮಾಡೆಲ್​ಗಳಿಬ್ಬರ ದುರಂತ ಸಾವು: ಕ್ರೈಂ ಬ್ರಾಂಚ್​ ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ಬಯಲಾಯ್ತು ಸಾವಿನ ರಹಸ್ಯ

    ಬೆಳ್ಳಂಬೆಳಗ್ಗೆ 75 ಕಡೆಗಳಲ್ಲಿ ಎಸಿಬಿ ದಾಳಿ ಮಾಡಿರುವ 18 ಸರ್ಕಾರಿ ಅಧಿಕಾರಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

    ಬಿಗ್​ಬಾಸ್​ ನಿರೂಪಕರ ವಿರುದ್ಧವೇ ನಾಲಿಗೆ ಹರಿಬಿಟ್ಟ ಸ್ಪರ್ಧಿ: ಸಿಂಬುಗೆ ಅವಮಾನ, ಅಭಿಮಾನಿಗಳ ಆಕ್ರೊಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts