More

    ಒಂದೇ ದಿನ ಮೂರು ಡೋಸ್​ ಕೋವಿಡ್​ ಲಸಿಕೆ ಪಡೆದ ಮಹಿಳೆಯ ಗತಿ ಏನಾಯ್ತು ನೋಡಿ!?

    ಥಾಣೆ: ಕರೊನಾ ಲಸಿಕಾ ಕೇಂದ್ರದ ನಿರ್ಲಕ್ಷ್ಯದಿಂದಾಗಿ ಮಹಾರಾಷ್ಟ್ರದ ಥಾಣೆ ನಿವಾಸಿಯೊಬ್ಬರು ಒಂದೇ ದಿನದಲ್ಲಿ ಮೂರು ಡೋಸ್​ ಕರೊನಾ ಲಸಿಕೆ ಪಡೆದಿರುವ ಆತಂಕಕಾರಿ ಘಟನೆ ನಡೆದಿದೆ.

    ಜೂನ್​ 25ರಂದು ಈ ಘಟನೆ ನಡೆದಿದೆ. 28 ವರ್ಷದ ರೂಪಾಲಿ ಸಲಿ ಎಂಬಾಕೆ ಕರೊನಾ ಲಸಿಕೆ ಪಡೆದುಕೊಳ್ಳಲು ಥಾಣೆಯಲ್ಲಿರುವ ಆನಂದ್​ ನಗರ ಲಸಿಕಾ ಕೇಂದ್ರಕ್ಕೆ ತೆರಳಿದ್ದರು. ಕೇಂದ್ರದಲ್ಲಿದ್ದ ಆರೋಗ್ಯ ಕಾರ್ಯಕರ್ತೆಯು ರೂಪಾಲಿ ಅವರಿಗೆ ಒಂದರ ನಂತರ ಒಂದರಂತೆ ಮೂರು ಡೋಸ್​ ಲಸಿಕೆ ನೀಡಿದ್ದು, ಅದನ್ನು ನೋಡಿ ರೂಪಾಲಿ ಗೊಂದಲಕ್ಕೆ ಒಳಗಾಗಿದ್ದಾರೆ.

    ಒಂದು ಡೋಸ್​ ಲಸಿಕೆ ಪಡೆದುಕೊಂಡ ಬಳಿಕ ಎರಡನೇ ಡೋಸ್​ ಪಡೆಯಲು ಒಂದು ತಿಂಗಳ ಅಂತರವಿರಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಒಂದೇ ಬಾರಿ ಮೂರು ಡೋಸ್​ ನೀಡಿದ್ದರಿಂದ ಹೆದರಿರುವ ರೂಪಾಲಿ ನಡೆದ ಘಟನೆಯನ್ನು ಗಂಡನ ಮುಂದೆ ಹೇಳಿಕೊಂಡಿದ್ದಾರೆ. ತಾನೂ ಸತ್ತು ಹೋಗುತ್ತೇನೋ ಎಂದು ತುಂಬಾ ಬೆದರಿದ್ದರು. ಬಳಿಕ ಆಕೆಯ ಪತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ಇದೊಂದು ಲಸಿಕಾ ಕೇಂದ್ರದ ಸಿಬ್ಬಂದಿಯಿಂದಾಗಿರುವ ನಿರ್ಲಕ್ಷ್ಯ. ಮಹಿಳೆಗೆ ಲಸಿಕಾ ಪ್ರಕ್ರಿಯೆಯ ಬಗ್ಗೆ ಅರಿವಿರಲಿಲ್ಲ ಮತ್ತು ಆ ಸಮಯದಲ್ಲಿ ಡೋಸ್​ ನೀಡುವಾಗ ಆಕೆ ವಿರೋಧಿಸಿಲ್ಲ. ಸದ್ಯ ರೂಪಾಲಿ ಅವರನ್ನ ಹಿರಿಯ ವೈದ್ಯರು ಪರೀಕ್ಷಿಸಿದ್ದಾರೆ ಮತ್ತು ಈಗ ಆಕೆ ಸಂಪೂರ್ಣವಾಗಿ ಉತ್ತಮವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮೂರು ಬಾರಿ ಲಸಿಕೆ ನೀಡಿರುವಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಟಿಎಂಸಿಯ ವೈದ್ಯಕೀಯ ಆರೋಗ್ಯ ಅಧಿಕಾರಿ ಡಾ.ವೈಜಂತಿ ದೇವಗಿಕರ್ ನಿರಾಕರಿಸಿದರೆ, ಮೂರು ಬಾರಿ ಲಸಿಕೆ ನೀಡಿರುವುದಾಗಿ ಥಾಣೆ ಮೇಯರ್ ಸುದ್ದಿಗಾರರಿಗೆ ದೃಢಪಡಿಸಿದರು.

    ಇದೇ ಮೊದಲ ಬಾರಿಗೆ ಥಾಣೆಯಲ್ಲಿ ಇಂತಹ ಘಟನೆ ನಡೆದಿದೆ. ಈ ಪ್ರಮಾದವನ್ನು ಮುಚ್ಚಿಹಾಕಲು ಆರೋಗ್ಯ ಸಂಸ್ಥೆ ಯತ್ನಿಸುತ್ತಿದೆ ಎಂಬುದು ಸುಳ್ಳು. ಈ ಘಟನೆಯ ಬಗ್ಗೆ ನಾನೇ ರಾಜ್ಯ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದೇನೆ ಮತ್ತು ನಾನು ವೈದ್ಯರನ್ನು ಸಹ ಖಂಡಿಸಿದ್ದೇನೆ. ನಾನು ನೇರವಾಗಿ ಮಹಿಳೆಯ ಪತಿಯೊಂದಿಗೆ ಮಾತನಾಡಿದ್ದೇನೆ. ಆದ್ದರಿಂದ ಈ ಘಟನೆಯನ್ನು ನಿರ್ಲಕ್ಷಿಸಲಾಗದು ಎಂದು ನಾಯಕ ಮನೋಹರ್ ಡುಂಬಾರೆ ಹೇಳಿದರು.

    ನಾಗರಿಕ ಸಂಸ್ಥೆಯ ಅಧಿಕಾರಿಗಳೀಗ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

    ಸಿಸಿಟಿವಿ ರಿಪೇರಿ ಮಾಡುವವನನ್ನು ಮನೆಗೆ ಕರೆದ ದಂಪತಿಗೆ ಶಾಕ್​: ಏನಾಯ್ತು ಅಂತ ಕೇಳಿದ್ರೆ ಬೆಚ್ಚಿಬೀಳ್ತೀರಾ!

    ‘ನಾನು ಸ್ತ್ರೀವಾದಿ, ಬಂಡವಾಳಶಾಹಿ ವಿರೋಧಿ- ಅಡುಗೆ ಮಾಡುವ ಶ್ರೀಮಂತ, ಏಕೈಕ ಪುತ್ರ ಬೇಕಾಗಿದ್ದಾನೆ..’

    ಭಾರತದ ನಕಾಶೆ ಕೆಡಿಸಿದ ಟ್ವಿಟರ್​: ಎಫ್​ಐಆರ್​ನಲ್ಲಿ ಮನೀಶ್​ ಮಹೇಶ್ವರಿ ಹೆಸರು ಉಲ್ಲೇಖ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts